Advertisement

ಪಾವಗಡ: ನಗರದ ಸರಕಾರಿ ಆಸ್ಪತ್ರೆಯಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರನ್ನು ನೆಲದ ಮೇಲೆ ಮಲಗಿಸಿದ ಘಟನೆ ಶುಕ್ರವಾರ ನಡೆದಿದ್ದು, ಈ ಬಗ್ಗೆ ಆಸ್ಪತ್ರೆಯ ವೈದ್ಯರು, ಸಿಬಂದಿ ವಿರುದ್ಧ ಸಾರ್ವ ಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

Advertisement

ಪ್ರತಿ ತಿಂಗಳಿಗೊಮ್ಮೆ ಪಾವಗಡದ ಸರಕಾರಿ ಅಸ್ಪತ್ರೆಯಲ್ಲಿ ಮಹಿಳೆಯರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಶಿಬಿರ ನಡೆಯುತ್ತಿದ್ದು, ತುಮಕೂರಿನಿಂದ ವೈದ್ಯರು ಆಗಮಿಸಿ ಈ ಶಿಬಿರದಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸುತ್ತಾರೆ. ಶುಕ್ರವಾರ 28 ಮಹಿಳೆಯರಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದು, ಆಸ್ಪತ್ರೆಯ ಹೆರಿಗೆ ವಾರ್ಡ್‌ನ ಬೆಡ್‌ಗಳಲ್ಲಿ ಹೆರಿಗೆ ಯಾದವರು ಇದ್ದ ಕಾರಣ ಬೆಡ್‌ಗಳು ಖಾಲಿ ಇಲ್ಲದ ಕಾರಣ ನೆಲದ ಮೇಲೆ ಮಲಗಿಸಲಾಗಿದ್ದು, ಈ ದೃಶ್ಯವನ್ನು ಚಿಕಿತ್ಸೆ ಪಡೆದ ಸಂಬಂಧಿಕರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಆಸ್ಪತ್ರೆಯ ವಾರ್ಡ್‌ಗಳಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದು, ಶುಕ್ರವಾರ ಸಂತಾನಹರಣ ಶಸ್ತ್ರಚಿಕಿತ್ಸೆ ಶಿಬಿರ ನಡೆಸಿದ್ದು, ಈ ವೇಳೆ ಸ್ಥಳದ ಕೊರತೆಯಿಂದ ಸ್ವಲ್ಪ ಮಟ್ಟಿಗೆ ತೊಂದರೆಯಾಗಿದೆ. ಇನ್ನು ಕೆಲವು ದಿನಗಳಲ್ಲಿ 13 ಕೋಟಿ ರೂ. ವೆಚ್ಚದ ತಾಯಿ-ಮಗು ಆಸ್ಪತ್ರೆ ನಿರ್ಮಾಣ ಕಾಮಗಾರಿ ಮುಗಿಯಲಿದ್ದು, ಎಲ್ಲವೂ ಸರಿ ಹೋಗಲಿದೆ.
– ಡಾ| ಕಿರಣ್‌, ಸರಕಾರಿ ಆಸ್ಪತ್ರೆಯ ಅಡಳಿತಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next