Advertisement

ವಸಾಯಿ ಪಶ್ಚಿಮ  ಶ್ರೀ ಗುರು ನಾರಾಯಣ ಸೇವಾ ಸಮಿತಿ:ವಾರ್ಷಿಕ ಮಹಾಪೂಜೆ

02:00 PM Mar 19, 2019 | |

ಮುಂಬಯಿ: ಬ್ರಹ್ಮಶ್ರೀ ನಾರಾಯಣ ಗುರುಗಳ ಬದುಕು ಸನಾತನ ಧರ್ಮಕ್ಕೆ ಪೂರಕವಾಗಿದ್ದು, ಅವರ ಸೇವಾ ವ್ಯಾಪ್ತಿ ವಿಶಾಲವಾಗಿತ್ತು. ಅವರ ತತ್ವಾದರ್ಶಗಳು, ಚಿಂತನೆಗಳು ಅಮೂಲ್ಯವಾಗಿದ್ದವು. ಅಧ್ಯಾತ್ಮಿಕ ಜ್ಞಾನವನ್ನು ಶ್ರೀಮಂತಗೊಳಿಸಿ ನೊಂದ ಹೃದಯಗಳನ್ನು ಸಾಂತ್ವನಗೊಳಿಸಿ ಬೆಳೆಸಿದರು. ದುರ್ಬಲರ ಸೇವೆಯಲ್ಲಿ  ಭಗವಂತನನ್ನು ಕಂಡ ಅವರ ಪ್ರಾಚೀನ ಮೌಲ್ಯಾಧಾರಿತ ಸಂದೇಶಗಳನ್ನು ಅನುಷ್ಠಾನಗೊಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಸಮಾಜ ಸೇವಕ, ಸೇವಾ ಸಮಿತಿಯ ಕಾರ್ಯದರ್ಶಿ ಒ. ಪಿ. ಪೂಜಾರಿ ಅವರು ಅಭಿಪ್ರಾಯಿಸಿದರು.

Advertisement

ಮಾ. 17ರಂದು ವಸಾಯಿ ಪಶ್ಚಿಮದ,  ಮೈತ್ರಿ ಪಾರ್ಕಿನ, ಗಣೇಶದೀಪ್‌ ಕಟ್ಟಡದಲ್ಲಿರುವ ಶ್ರೀ ಗುರು ನಾರಾಯಣ ಸೇವಾ ಸಮಿತಿ ಇದರ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಪ್ರತಿಷ್ಠಾಪನೆಯ ಸಂಸ್ಮರ ಣಾರ್ಥ ಆಯೋಜಿಸಲಾದ  23ನೇ ವಾರ್ಷಿಕ ಮಹಾಪೂಜೆಯಲ್ಲಿ ಮಾತ ನಾಡಿದ ಅವರು, ಜಾತಿ,ಮತ,ವರ್ಗ ಭೇದಗಳನ್ನು ಮೀರಿ  ನಿಂತ ನಮ್ಮ ಸೇವಾಸಮಿತಿ  ಇತರ  ಸಮುದಾಯ ಸಂಘಟನೆಯೊಂದಿಗೆ ಪ್ರೀತಿ-ಸೌಹಾರ್ದತೆಯ ವಾತಾವರಣದಲ್ಲಿ ಬೆಳೆದಿದೆ. ಕೂಡಿ ಬಾಳುವ ಕಲೆ ನಮ್ಮದಾಗಲಿ ಎಂದು ಹಾರೈಸಿದರು.

ಸಮಾರಂಭದಲ್ಲಿ ಅನ್ನದಾನ ಸೇವಾರ್ಥಿ ಮುದ್ದು ಪಿ. ಪೂಜಾರಿ ದಂಪತಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ಶ್ರೀ ಗುರು ನಾರಾಯಣ ಸೇವಾ ಸಮಿತಿಯ ಅಧ್ಯಕ್ಷ ಜಯರಾಮ ಕೆ. ಪೂಜಾರಿ, ಕಾರ್ಯದರ್ಶಿ ಒ. ಪಿ. ಪೂಜಾರಿ, ಉಪ ಕಾರ್ಯದರ್ಶಿ ಎನ್‌. ಪಿ. ಮಲ್ಲಾರ್‌, ಕೋಶಾಧಿಕಾರಿ ಭೋಜ ಟಿ. ಅಂಚನ್‌,  ಸದಸ್ಯರಾದ ಕೆ. ಬಿ. ಸುವರ್ಣ, ಎಚ್‌.  ಜಿ. ಕುಂದರ್‌, ದಾಸು ಎ. ಕುಂದರ್‌, ವಿಶ್ವೇಂದ್ರ ಅಮೀನ್‌, ಪೂಜಾ ಸಮಿತಿಯ ಅಧ್ಯಕ್ಷ ಕೇಶವ ಪೂಜಾರಿ, ಕಾರ್ಯದರ್ಶಿ ಮುದ್ದು ಪಿ. ಪೂಜಾರಿ, ಕೋಶಾಧಿಕಾರಿ ಶೇಖರ ಕೆ. ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ಎಸ್‌. ಕೋಟ್ಯಾನ್‌, ಕಾರ್ಯದರ್ಶಿ ಜಯಶ್ರೀ ಪಿ. ಅಂಚನ್‌, ಕೋಶಾಧಿಕಾರಿ ಜಯಂತಿ ಎನ್‌. ಮಲ್ಲಾರ್‌, ಯುವ ವಿಭಾಗದವರು, ಕಾರ್ಯಕಾರಿ ಸಮಿತಿ ಸದಸ್ಯರು,  ಮಹಿಳಾ ಸದಸ್ಯೆಯರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಭಜನೆ, ಅರಸಿನ ಕುಂಕುಮ, ಮಧ್ಯಾಹ್ನ ಮಹಾಮಂಗಳಾರತಿ, ಅನಂತರ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ನೆರವೇರಿತು. ವಸಾಯಿ ಪರಿಸರದ ಉದ್ಯಮಿಗಳು, ಸ್ಥಳೀಯ ನಗರ ಸೇವಕರು, ರಾಜಕೀಯ ಮುಖಂಡರು, ಪರಿಸರದ ತುಳು ಕನ್ನಡಿ ಗರು, ಸಮುದಾಯ ಸಂಘಟನೆಗಳ ಪ್ರತಿನಿಧಿಗಳು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಶ್ರೀಗುರು ದೇವರ ಅಶೀರ್ವಾದ ಪಡೆದರು. 

  ಚಿತ್ರ-ವರದಿ: ರಮೇಶ ಅಮೀನ್‌   

Advertisement

Udayavani is now on Telegram. Click here to join our channel and stay updated with the latest news.

Next