Advertisement
ಸೆ. 16 ರಂದು ವಸಾಯಿ ತಾಲೂಕು ಮೊಗವೀರ ಸಂಘದ ಕಚೇರಿಯ ಸಭಾಗೃಹದಲ್ಲಿ ಜರಗಿದ ವಸಾಯಿ ತಾಲೂಕು ಮೊಗವೀರ ಸಂಘದ 8ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಧು-ವರ ಅನ್ವೇಷಣೆ, ಅಸಹಾಯಕರಿಗೆ ವೈದ್ಯಕೀಯ ಚಿಕಿತ್ಸೆ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಆರ್ಥಿಕ ಧನ ಸಹಾಯ ನೀಡುವ ಮೂಲಕ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಪೂರೈಸಬೇಕು. ಇತರ ಜಾತೀಯ ಸಂಸ್ಥೆಗಳಿಗೆ ಹೋಲಿಸಿದರೆ ಒಗ್ಗಟ್ಟಿಗೆ ಪ್ರಸಿದ್ಧವಾದ ನಾವು ಇಂದು ಹಿನ್ನಡೆ ಯನ್ನು ಅನುಸರಿಸುತ್ತಿರುವುದು ವಿಷಾದನೀಯ ಎಂದರು.
Related Articles
Advertisement
ಸದಸ್ಯ ಮಾಧವ ಸುವರ್ಣ ಅವರು ಮಾತನಾಡಿ, ಸಂಘ- ಸಂಸ್ಥೆಗಳ ಸ್ಥಾಪನೆಯಲ್ಲಿ ನಾವು ಮುಂಚೂ ಣಿಯಲ್ಲಿದ್ದರೂ ಪ್ರಸ್ತುತ ನಾವು ಸಾಂಘಿಕವಾಗಿ ಹಿನ್ನಡೆಯುತ್ತಿದ್ದೇವೆ. ಈ ರೀತಿಯಾದಲ್ಲಿ ನಾವು ನಮ್ಮ ಸಂಘಟನೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವಲ್ಲಿ ವಿಫಲರಾಗುತ್ತೇವೆ. ಈ ನಿಟ್ಟಿನಲ್ಲಿ ನಾವು ಈಗಲೇ ಕಾರ್ಯಪ್ರವೃತªರಾಗಬೇಕು ಎಂದರು.
ವಿದ್ಯಾರ್ಥಿ ಗಳ ಶೈಕ್ಷಣಿಕ, ಕ್ರೀಡೆಯಲ್ಲಿ ನಾವು ಈಗಾಗಲೇ ಪ್ರೋತ್ಸಾಹ ನೀಡುವಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ನುಡಿದರು.
ಇನ್ನೋರ್ವ ಸದಸ್ಯ ನ್ಯಾಯವಾದಿ ಸಿ. ಎಸ್. ಕರ್ಕೇರ ಅವರು ಮಾತ ನಾಡಿ, 50 ವರ್ಷಗಳ ಮೊಗವೀರ ಬಂಧುತ್ವ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದಾಗ ನನಗೆ ನಮ್ಮಲ್ಲಿ ಒಗ್ಗಟ್ಟು, ಸಹಕಾರ, ಪ್ರಗತಿಯ ಧ್ಯೇಯ ಮುಖ್ಯವಾದುದು ಎಣಿಸಿದೆ. ಈ ಉದ್ದೇಶದಿಂದಲೇ ವಸಾಯಿ ತಾಲೂಕು ಮೊಗವೀರ ಸಂಘ ಸ್ಥಾಪನೆಗೊಂಡಿದ್ದು, ಈ ಸಂಸ್ಥೆಯ ಮೂಲಕ ಮತ್ತೂಮ್ಮೆ ನಾವು ಒಗ್ಗಟ್ಟಿಗೆ ಪ್ರತಿಫಲ ತೋರಿಸುವ ಅಗತ್ಯವಿದೆ ಎಂದರು.
ಯಶೋಧರ ಕೆ. ಕೋಟ್ಯಾನ್, ಪ್ರದೀಪ್ ಜೆ. ಪುತ್ರನ್, ಬಸಪ್ಪ ಕರ್ಕೇರ, ಜಗನ್ನಾಥ್ ಕಾಂಚನ್, ಭೋಜ ಕೋಟ್ಯಾನ್, ಮೋಹಿನಿ ಮಲ್ಪೆ ಅವರು ಮುಂದಿನ ದಶ ಮಾನೋತ್ಸವದ ಸಂದರ್ಭದಲ್ಲಿ ಅಣಿಯಾಗಬೇಕಾದ ಕಾರ್ಯಕ್ರಮಗಳ ಬಗ್ಗೆ ಸಲಹೆ ನೀಡಿದರು. ನೂತನ ವಿಶ್ವಸ್ತರಾಗಿ ಪ್ರದೀಪ್ ಜೆ. ಪುತ್ರನ್ ಹಾಗೂ ತಿಲಕ್ ಜೆ. ಕೋಟ್ಯಾನ್ ಅವರನ್ನು ಅವಿರೋಧ ವಾಗಿ ನೇಮಿಸಲಾಯಿತು. ಚಂದಪ್ಪ ಎಸ್. ಕರ್ಕೇರ, ವಾಮನ್ ಎಸ್. ಕೋಟ್ಯಾನ್ ಅವರು ವಿಶ್ವಸ್ತರಾಗಿ ಮುಂದುವರಿಯಲಿದ್ದಾರೆ ಎಂದು ಘೋಷಿಸಲಾಯಿತು. ಮಹಾಸಭೆಯ ಕೊನೆಯಲ್ಲಿ ಕಾರ್ಯಕ್ರಮ ವಿಭಾಗದ ಕಾರ್ಯಾಧ್ಯಕ್ಷ ಸುಧೀರ್ ಸಾಲ್ಯಾನ್ ವಂದಿಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಇಂದಿರಾ ಪುತ್ರನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದಿ| ರತ್ನಾ ಕರ್ಕೇರ ಅವರ ಪುತ್ರಿ ಸರಸ್ವತಿ ಅವರಿಗೆ ಇದೇ ಸಂದರ್ಭದಲ್ಲಿ ಪದಾಧಿಕಾರಿಗಳು ಆರ್ಥಿಕ ನೆರವು ವಿತರಿಸಿದರು. ಪದಾಧಿಕಾರಿಗಳು, ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗ ದವರು, ಸಮಾಜ ಬಾಂಧವರು ಉಪಸ್ಥಿತರಿದ್ದರು.
ಚಿತ್ರ-ವರದಿ: ರಮೇಶ್ ಉದ್ಯಾವರ