Advertisement

ವರುಣಾ ಕ್ಷೇತ್ರದ ಸಮಗ್ರ ಅಭಿವೃದ್ಧಿ

12:54 PM Feb 17, 2017 | Team Udayavani |

ಮೈಸೂರು: ವರುಣಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಇದಕ್ಕೆ ಗ್ರಾಮಸ್ಥರ ಸಹಕಾರವು ಅತ್ಯಗತ್ಯ ಎಂದು ಕಾಂಗ್ರೆಸ್‌ ಮುಖಂಡ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಬಡಗಲಹುಂಡಿಯಲ್ಲಿ 18 ಲಕ್ಷ ರೂ. ವೆಚ್ಚದಲ್ಲಿ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

Advertisement

ಮುಖ್ಯಮಂತ್ರಿಗಳ ವರುಣ ಕ್ಷೇತ್ರದ ಜತೆಗೆ ರಾಜ್ಯದ ಪ್ರತಿಯೊಂದು ಗ್ರಾಮವು ಮಾದರಿ ಗ್ರಾಮವಾಗಬೇಕು. ಇದಕ್ಕೆ ಗ್ರಾಮಸ್ಥರು ಸಹಕಾರ ನೀಡಬೇಕು ಎಂದರು. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಹಿಂದೆಂದೂ ಆಗದಂತಹ ಅಭಿವೃದ್ಧಿ ಕೆಲಸಗಳು ಆಗಿದ್ದು, ನೀರಾವರಿಗೆ 50 ಸಾವಿರ ಕೋಟಿ ರೂ. ಖರ್ಚು ಮಾಡಿರುವುದರಿಂದ ಎಲ್ಲಾ ನಾಲೆಗಳ ಆಧುನೀಕರಣವಾಗಿ ನಾಲೆಯ ಕೊನೆ ಹಂತದಲ್ಲಿರುವ ರೈತರಿಗೆ ನೀರು ತಲುಪವಂತಾಗಿದೆ.

ಈಗಾಗಲೇ ರಾಜ್ಯದ ಜನರ ಆರೋಗ್ಯದ ದೃಷ್ಟಿಯಿಂದ ರಾಜಾÂದ್ಯಂತ ಸಾವಿರಾರು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಅಂತರ್ಜಲ ವೃದ್ಧಿಗಾಗಿ ನದಿ ಮೂಲದಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ತರಲಾಗಿದೆ. ಇದಲ್ಲದೆ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಬಡವರ ಮನೆಗಳ ಮೇಲೆ ಇದ್ದ ಸಾಲವನ್ನು ಮನ್ನಾ ಮಾಡಿದೆ. ಅಂಬೇಡ್ಕರ್‌ ಅಭಿವೃದ್ಧಿ ನಿಗಮ, ದೇವರಾಜ ಅರಸು ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿದ್ದ 1500 ಕೋಟಿ ರೂ.ಗಳ ಸಾಲವನ್ನು ಮನ್ನಾ ಮಾಡಿದ್ದಾರೆ.

ಇದರಿಂದ ಬಡ ಜನರು ಆರ್ಥಿಕವಾಗಿ ಸಬಲರಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಬದ್ಧವಾಗಿದೆ ಎಂದರು. ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಎಂ.ರಾಮಯ್ಯ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಜವಾಬ್ದಾರಿ ವಹಿಸಿಕೊಂಡಿರುವುದರಿಂದ ವರುಣ ಕ್ಷೇತ್ರದ ಕೆಲಸ ಮಾಡಲು ಡಾ.ಯತೀಂದ್ರ ಅವರನ್ನು ಅವರ ಪ್ರತಿನಿಧಿಯಾಗಿ ಕಳುಹಿಸಿದ್ದಾರೆ.

ನಾವು ಗ್ರಾಮೀಣ ಭಾಗದಲ್ಲಿ ಪ್ರವಾಸ ಮಾಡುವಾಗ ಹೆಚ್ಚು ಮಹಿಳೆಯರು ಪಡಿತರ ಅಕ್ಕಿಯನ್ನು ಹೆಚ್ಚು ಮಾಡಬೇಕೆಂದು ಕೇಳಿದ್ದರು. ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದ ಪರಿಣಾಮವಾಗಿ ಏಪ್ರಿಲ್‌ 1ರಿಂದ 8 ಕೆ.ಜಿ. ಅಕ್ಕಿ ಕೊಡಲು ಮುಖ್ಯಮಂತ್ರಿಗಳು ತೀರ್ಮಾನಿಸಿದ್ದಾರೆ ಎಂದು ತಿಳಿಸಿದರು. ಈಗಾಗಲೇ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ.

Advertisement

ಬಿಪಿಎಲ್‌ ಕಾರ್ಡ್‌, ವಿದ್ಯುತ್‌ ಸಮಸ್ಯೆ ಹಾಗೂ ಉಳಿದ ಎಲ್ಲಾ ಸಮಸ್ಯೆಗಳನ್ನು ಮ್ಯುಮಂತ್ರಿಗಳ ಗಮನಕ್ಕೆ ತಂದು ಈ ವರ್ಷದೊಳಗೆ ಎಲ್ಲಾ ಕೆಲಸಗಳನ್ನು ಮಾಡಿಕೊಡುತ್ತೇವೆ ಎಂದ ಅವರು ಕೆಂಪೇಗೌಡನಹುಂಡಿ ಭಾಗದ 500 ಎಕರೆಗೆ ಏತ ನೀರಾವರಿ ಯೋಜನೆ ಮಾಡಲು ಈಗಾಗಲೇ ಟೆಂಡರ್‌ ಕರೆಯಲಾಗಿದೆ ಎಂದರು.ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಭಾಗ್ಯ, ಎಪಿಎಂಸಿ ಸದಸ್ಯ ಆನಂದ್‌, ತಾಪಂ ಮಾಜಿ ಸದಸ್ಯ ಎಂ.ಟಿ.ರವಿಕುಮಾರ್‌, ಮುಖಂಡರಾದ ದೊಡ್ಡರಾಮೇಗೌಡ, ಎಂ.ಆರ್‌.ಗೌಡ, ಗ್ರಾಪಂ ಉಪಾಧ್ಯಕ್ಷೆ ಶಿವಮ್ಮ ಮೊದಲಾದವರು ಹಾಜರಿದ್ದರು.

ಇದೇ ವೇಳೆ ವರುಣ ಕ್ಷೇತ್ರದ ಬಡಗಲಹುಂಡಿ, ಹುನಗನಹಳ್ಳಿ, ರಂಗಸಮುದ್ರ, ಹಿಟ್ಟವಳ್ಳಿ, ತುಂಬಲ, ಎಡದೊರೆ, ಕುರಿಸಿದ್ದನಹುಂಡಿ, ಗಗೇìಶ್ವರಿ, ಕೆಂಪಯ್ಯನಹುಂಡಿ, ಇಂಡವಾಳು, ರಾಯರಹುಂಡಿ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳ ಭೂಮಿಪೂಜೆ, ಉದ್ಘಾಟನೆ ಹಾಗೂ ಎಪಿಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತರಿಗೆ ಮತ ಹಾಕಿದ ಮತದಾರರಿಗೆ ಡಾ.ಯತೀಂದ್ರ ಸಿದ್ದರಾಮಯ್ಯ ಕೃತಜ್ಞತೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next