ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಸರಿಯಾದ ಹಾದಿಯಲ್ಲಿ ಸಾಗುತ್ತಿದೆಯೇ ಎಂಬ ಚರ್ಚೆಯಲ್ಲಿ ಮಾತನಾಡಲು ಆಕ್ಸ್ ಫರ್ಡ್ ಒಕ್ಕೂಟದ ಆಹ್ವಾನವನ್ನು ಬಿಜೆಪಿ ಸಂಸದ ವರುಣ್ ಗಾಂಧಿ ತಿರಸ್ಕರಿಸಿದ್ದಾರೆ.
ಅಂತಾರಾಷ್ಟ್ರೀಯ ವೇದಿಕೆಯಲ್ಲಿ ದೇಶೀಯ ಸವಾಲುಗಳನ್ನು ವ್ಯಕ್ತಪಡಿಸುವಲ್ಲಿ ಯಾವುದೇ ಅರ್ಹತೆ ಅಥವಾ ಸಮಗ್ರತೆಯನ್ನು ಕಾಣುತ್ತಿಲ್ಲ. ಅಂತಹ ಹೆಜ್ಜೆಯು “ಅಗೌರವದ ಕೆಲಸ” ಆಗಿರುತ್ತದೆ ಎಂದು ಹೇಳಿದ್ದಾರೆ.
ಆಹ್ವಾನವನ್ನು ನಿರಾಕರಿಸಿದ ಅವರು ಒಕ್ಕೂಟಕ್ಕೆ ನೀಡಿದ ಉತ್ತರದಲ್ಲಿ, ತಮ್ಮಂತಹ ನಾಗರಿಕರಿಗೆ ಭಾರತದಲ್ಲಿ ಈ ರೀತಿಯ ವಿಷಯಗಳನ್ನು ಸುಲಭವಾಗಿ ಚರ್ಚಿಸಲು ನಿಯಮಿತವಾಗಿ ಅವಕಾಶವಿದೆ ಎಂದು ಹೇಳಿದರು.
ಇದನ್ನೂ ಓದಿ:ಆರಂಭಿಕರಾಗಿ ಗಿಲ್-ಇಶಾನ್ ಫಿಕ್ಸ್; ರಾಹುಲ್ ಗೆ ಸಿಗುತ್ತಾ ಚಾನ್ಸ್? ಪಾಂಡ್ಯ ಹೇಳಿದ್ದೇನು?
ಲಂಡನ್ ನಲ್ಲಿ ವರುಣ್ ಸೋದರ ಸಂಬಂಧಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಕಾಮೆಂಟ್ ಗಳ ಕುರಿತು ತೀವ್ರ ಚರ್ಚೆಯ ಸಮಯದಲ್ಲಿ ಈ ಬೆಳವಣಿಗೆ ನಡೆದಿದೆ.
ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ರಾಹುಲ್ ವಿಚಾರದ ಕುರಿತು ಗದ್ದಲಗಳು ನಡೆಯುತ್ತಿದೆ. ರಾಹುಲ್ ಭಾರತೀಯ ಪ್ರಜಾಪ್ರಭುತ್ವಕ್ಕೆ ಗಂಭೀರ ಅವಮಾನ ಮಾಡಿದ್ದಾರೆ, ಹೀಗಾಗಿ ಅವರು ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.