Advertisement

ಅಣ್ಣಾ ಎಂದರೂ ಥಳಿಸಿದರು : ಅಪಹರಣಕಾರರ ಕುರಿತು ವರ್ತೂರು ಪ್ರಕಾಶ್ ಕಾರು ಚಾಲಕನ ಹೇಳಿಕೆ

11:55 AM Dec 05, 2020 | sudhir |

ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್‌ರನ್ನು ಅಪಹರಣಕಾರರು ಹಿಗ್ಗಾ ಮುಗ್ಗಾ ಥಳಿಸುತ್ತಿದ್ದರು, ಹೊಡೆಯ ಬೇಡಿ ಅಣ್ಣಾ ಎಂದು ವರ್ತೂರು ಪ್ರಕಾಶ್‌ ನಿರ್ಜನ ಪ್ರದೇಶದಲ್ಲಿ ಅಂಗಲಾಚುತ್ತಿದ್ದರು, ನಾನು ತಪ್ಪಿಸಿಕೊಳ್ಳದಿದ್ದರೆ ನನ್ನನ್ನು
ಸಾಯಿಸಿ ಬಿಡುತ್ತಿದ್ದರು…ಇದು ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿರುವ ವರ್ತೂರು ಪ್ರಕಾಶ್‌ ಕಿಡ್ನಾಪ್‌ ಪ್ರಕರಣದ ಪ್ರತ್ಯಕ್ಷ
ಸಾಕ್ಷಿ ಪ್ರಕಾಶ್‌ರ ಕಾರು ಚಾಲಕ ಸುನೀಲ್‌ ಘಟನೆ ಕುರಿತಂತೆ ಮಹತ್ವದ ಹೇಳಿಕೆ ನೀಡಿದ್ದಾರೆ.

Advertisement

ಕೈ ಮತ್ತು ಕಾಲುಗಳಿಗೆ ತೀವ್ರ ಗಾಯಗಳಾಗಿ ಬ್ಯಾಂಡೇಜ್‌ ಸುತ್ತಿದ ಸ್ಥಿತಿಯಲ್ಲಿ ನಡೆಯಲು ಸಾಧ್ಯವಾಗದೆ ತಾಲೂಕಿನ ಬೆಗ್ಲಿ ಮನೆಯಲ್ಲಿಯೇ ಚೇತರಿಸಿ ಕೊಳ್ಳುತ್ತಿರುವಕಾರು ಚಾಲಕ ಸುನೀಲ್‌, ಪ್ರಕಾಶ್‌ ಅಪಹರಣ ಘಟನೆ ಬಗ್ಗೆ ರೋ ಚಕ ಸಂಗತಿಗಳನ್ನು ಬಿಚ್ಚಿಟ್ಟರು. ಕಿಡ್ನಾಪ್‌ ಆಗಿ ಅಲ್ಲಿಂದ ತಪ್ಪಿಸಿಕೊಂಡು ಬಂದ ಬಗ್ಗೆ ಇಂಚಿಂಚು ಮಾಹಿತಿ ನೀಡಿದರು.

ಮಂಕಿ ಕ್ಯಾಪ್‌ಹಾಕಿ ಕಿಡ್ನಾಪ್‌: ಪ್ರಕಾಶ್‌ ರಿದ್ದ ಕಾರನ್ನು ತಾವು ಚಲಾಯಿಸುತ್ತಿದ್ದಾಗ ಅಡ್ಡಗಟ್ಟಿದ ಅಪಹರಣಕಾರರು, ಕಾರು
ಗಾಜುಗಳನ್ನು ಒಡೆದು ಹಾಕಿದರು. ಪ್ರಕಾಶ್‌, ನನಗೆ ಗನ್‌ ತೋರಿಸಿ ಮಂಕಿ ಕ್ಯಾಪ್‌ ಹಾಕಿ ಕಿಡ್ನಾಪ್‌ ಮಾಡಿದರು.

ಇದನ್ನೂ ಓದಿ:ತುಮಕೂರಿನಲ್ಲಿ ಎಂದಿನಂತೆ ನಡೆಯುತ್ತಿದೆ ವ್ಯಾಪಾರ ವಹಿವಾಟು: ಬಂದ್ ಗಿಲ್ಲ ಬೆಂಬಲ

3ದಿನ ಕಾರಲ್ಲೇ ಓಡಾಟ: ಲಾಂಗ್‌, ಮಚ್ಚುಗಳಿಂದ ಕಾರು ಗಾಜು ಒಡೆದು ನನ್ನನ್ನು ಒಳಗಿನಿಂದಲೇ ಅವರಿದ್ದ ಕಾರುಗಳಿಗೆ ಎಳೆದೊಯ್ದರು, ಅಪಹರಣ ಆದ ನಂತರಮೂರು ದಿನಗಳಕಾಲಕೋಲಾರ ಜಿಲ್ಲೆಯ ಗಡಿ ಭಾಗಗಳಲ್ಲಿ ಅವರ ಕಾರುಗಳಲ್ಲಿಯೇ ಓಡಾಟ ನಡೆಸಿದ್ದು ತಿಳಿಯುತ್ತಿತ್ತು. ಆದರೆ ಯಾವ ಸ್ಥಳ ಎಂಬುದು ಗೊತ್ತಾಗುತ್ತಿರಲಿಲ್ಲ ಎಂದರು.

Advertisement

ಕಾರಲ್ಲಿ ಮಹಿಳೆ ಬಂದಿದ್ದೇಗೆಂಬುದು ಗೊತ್ತಿಲ್ಲ: ಅಪಹರಣಕಾರರು ಹಣ ನೀಡುವಂತೆ ಪ್ರಕಾಶ್‌ರನ್ನು ಹಿಂಸಿಸುತ್ತಿದ್ದರು. ಅಣ್ಣಾ ಹೊಡೆಯಬೇಡಿ ಅಣ್ಣ.. ಹೊಡೀಬೇಡಿ.. ಎಂದು ಅಂಗಲಾಚುತ್ತಿದ್ದದ್ದು ಮಾತ್ರ ನನಗೆ ಕೇಳಿಸುತ್ತಿತ್ತು. ತಮ್ಮನ್ನು ಕಿಡ್ನಾಪ್‌ ಮಾಡಿದ ನಂತರ ಪ್ರಕಾಶ್‌ ಕಾರು ಬೇರೆ ಕಡೆ ಕಳುಹಿಸಿದರು.

ಅಪಹರಣಕಾರರು ನಮ್ಮ ಕಾರಿನ ಗಾಜು ಹೊಡೆದಿದ್ದು ನಿಜ. ಆದರೆ ಕಾರದಪುಡಿ ಹಾಕಿರಲಿಲ್ಲ. ಕಾರು ಪತ್ತೆಯಾದ ವೇಳೆ
ಗಾಜು, ಕಾರದಪುಡಿ, ಮಹಿಳೆ ಬಟ್ಟೆ ಹೇಗೆ ಬಂತು ಗೊತ್ತಿಲ್ಲ, ಅಪಹರಣಕಾರರು ಕನ್ನಡ,ತಮಿಳು ಭಾಷೆ ಮಾತನಾಡುತ್ತಿದ್ದರು
ಎಂದು ತಾವು ಅನುಭವಿಸಿದ ಭಯಾನಕ ಅನುಭವವನ್ನು ಬಿಚ್ಚಿಟ್ಟರು.

ನಟಿಸಿ ಎಸ್ಕೇಪ್‌
ಶುಕ್ರವಾರ ರಾತ್ರಿ ಯಾವುದೋ ಜಾಗದಲ್ಲಿ ಅಪಹರಣಕಾರರು ಕುಡಿತದಲ್ಲಿ ಮಗ್ನ ರಾಗಿದ್ದರು. ನಾನು ಊಟ ಮಾಡುವುದಿಲ್ಲ ಎಂದು ಹೇಳಿದೆ. ಅದಕ್ಕವರು ತ್ರೀವವಾಗಿ ಲಾಂಗ್‌ ತಿರುಗಿಸಿ ಹೊಡೆದರು, ರಕ್ತ ಸೋರುತ್ತಿದ್ದರೂ ತಿನ್ನುವಂತೆ ಒತ್ತಾಯಿಸಿದರು. ಆಗ ನಾನು ಸತ್ತಂತೆ ನಟನೆ ಮಾಡಿ ತೊಗರಿ ಬೇಳೆ ತೋಟದಲ್ಲಿ ಅವಿತುಕೊಂಡೆ, ಆಗ ಅಪಹರಣಕಾರರು ನಾನು ತಪ್ಪಿಸಿ
ಕೊಂಡಿದ್ದೇನೆ ಎಂದು ತಿಳಿದು ವರ್ತೂರು ಪ್ರಕಾಶ್‌ ಇದ್ದ ಕಾರನ್ನು ಮೊದಲು ತೆಗೆದುಕೊಂಡು ಹೊರಟರು.

ನಂತರ ಇನ್ನೊಂದು ಕಾರು ಹೊರಟಿತು, ನಾನು ಅಲ್ಲಿಂದ ನಡೆದೇ ಸಮೀಪದ ಯಾವುದೋ ಗ್ರಾಮಕ್ಕೆ ಬಂದೆ. ಗ್ರಾಮಸ್ಥರು ಕೊಟ್ಟ 200 ರೂ.ನೆರವಿನಿಂದ ಸಮೀಪದ ಶ್ರೀನಿವಾಸಪುರಕ್ಕೆ ಬಂದು ಕೋಲಾರಕ್ಕೆ ಬಸ್‌ನಲ್ಲಿ ಬಂದೆ ಎಂದು ವರ್ತೂರು ಪ್ರಕಾಶ್‌ರ ಕಾರು ಚಾಲಕ ಸುನೀಲ್‌ ತಿಳಿಸಿದ್ದಾರೆ.

ತಂಡದಿಂದ ತನಿಖೆ
ಅಪಹರಣ ಪ್ರಕರಣ ಕುರಿತಂತೆ ತಡವಾಗಿ ವರ್ತೂರು ಪ್ರಕಾಶ್‌ ಮೊದಲಿಗೆ ಬೆಳ್ಳಂದೂರು ಠಾಣೆಯಲ್ಲಿ ದೂರು ದಾಖಲಿಸಿದ್ದು, ನಂತರ ಪ್ರಕರಣ ಕೋಲಾರ ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಗಿದೆ. ಕೋಲಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ
ನೇತೃತ್ವದಲ್ಲಿಯೇ ತನಿಖಾ ತಂಡ ರಚನೆಯಾಗಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ. ಸದ್ಯಕ್ಕೆ ತನಿಖಾ ಹಂತದ ಯಾವುದೇ ಮಾಹಿತಿ ಹೊರ ಹಾಕಲು ಪೊಲೀಸ್‌ ಅಧಿಕಾರಿಗಳು ಇಚ್ಚಿಸುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next