Advertisement

ವರ್ತೂರು ಕೆರೆಯಲ್ಲಿ ಮತ್ತೆ ವಿಷಕಾರಿ ನೊರೆ ಕಾಟ; ವಾಹನ ಸವಾರರ ಪರದಾಟ!

12:33 PM May 29, 2017 | Sharanya Alva |

ಬೆಂಗಳೂರು: ಭಾರೀ ಗಾಳಿ ಮಳೆಯಿಂದ ಸಿಲಿಕಾನ್ ಸಿಟಿ ಬೆಂಗಳೂರು ತತ್ತರಿಸಿ ಹೋಗಿರುವ ನಡುವೆ ಇದೀಗ ವರ್ತೂರು ಕೆರೆ ಸುತ್ತಮುತ್ತ ಮತ್ತೆ ನೊರೆ ಕಾಟದಿಂದಾಗಿ ಸಾರ್ವಜನಿಕರು ಹಾಗೂ ವಾಹನ ಸವಾರರ ಸಂಚಾರಕ್ಕೆ ಅಡ್ಡಿ ಉಂಟುಮಾಡುವ ಮೂಲಕ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

Advertisement

ಕಳೆದ ಒಂದು ವಾರದಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಬೆಂಗಳೂರಿನ ತಗ್ಗು ಪ್ರದೇಶ, ಕೊಳಗೇರಿ ಪ್ರದೇಶಗಳು ನೀರಿನಿಂದ ಆವೃತ್ತವಾಗಿದ್ದು, ನೂರಾರು ಮರಗಳು ಧರಾಶಾಹಿಯಾಗಿದ್ದವು.  ಅಷ್ಟೇ ಅಲ್ಲ ಬೆಳ್ಳಂದೂರು ಕೆರೆಯಲ್ಲಿ ಕಾಣಿಸಿಕೊಂಡಿದ್ದ ನೊರೆ ಸಮಸ್ಯೆ ಈಗ ವರ್ತೂರು ಕೆರೆಯಲ್ಲೂ ಕಾಣಿಸಿಕೊಂಡಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಶನಿವಾರ, ಭಾನುವಾರದಿಂದ ವರ್ತೂರು ಕೆರೆಯಿಂದ ರಾಶಿ, ರಾಶಿ ವಿಷಕಾರಿ ರಾಸಾಯನಿಕ ನೊರೆ ದೊಡ್ಡ ಪ್ರಮಾಣದಲ್ಲಿ ವೈಟ್ ಫೀಲ್ಡ್  ಮುಖ್ಯರಸ್ತೆ ಮೇಲೆ ಹಾರಿ ಬರುತ್ತಿದೆ. ಇದರಿಂದಾಗಿ ವಾಹನ ಸವಾರರು, ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ವರ್ತೂರು ಕೆರೆಯಿಂದ ರಾಶಿ, ರಾಶಿಯಾಗಿ ಹಾರಿ ಬರುತ್ತಿರುವ ರಾಸಾಯನಿಕ ಯುಕ್ತ ನೊರೆಯ ದೃಶ್ಯದ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ. ಬೆಳ್ಳಂದೂರು ಕೆರೆ ಪ್ರಕರಣದ ಬಳಿಕ ಎಚ್ಚೆತ್ತುಕೊಳ್ಳದ ಬಿಬಿಎಂಪಿ ಈ ನೊರೆ ಸಮಸ್ಯೆಯನ್ನು ಬಗೆಹರಿಸಲು ವಿಫಲವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಕಟುವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಳಿಕ ಎಚ್ಚೆತ್ತುಕೊಂಡ ಬಿಡಿಎ ಕಮಿಷನರ್ ರಾಕೇಶ್ ಸಿಂಗ್ ಅವರು ವರ್ತೂರು ಕೆರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next