ದರ್ಬಂಗಾ: ಬಿಹಾರದ ಜಿಲ್ಲೆಯ ಸರ್ಕಾರಿ ಸ್ವಾಮ್ಯದ ಲಲಿತ್ ನಾರಾಯಣ ಮಿಥಿಲಾ ವಿಶ್ವವಿದ್ಯಾನಿಲಯದ ಪದವಿ ವಿದ್ಯಾರ್ಥಿಯೊಬ್ಬ ಪತ್ರಿಕೆಯೊಂದರಲ್ಲಿ 100 ರಲ್ಲಿ 151 ಗಳಿಸಿ ಆಶ್ಚರ್ಯಚಕಿತರಾಗಿದ್ದಾನೆ.
ವಿಶ್ವವಿದ್ಯಾನಿಲಯದ ಭಾಗ-2 ಪರೀಕ್ಷೆಯಲ್ಲಿ ಬಿಎ (ಆನರ್ಸ್) ವಿದ್ಯಾರ್ಥಿ ತನ್ನ ರಾಜ್ಯಶಾಸ್ತ್ರ ಪತ್ರಿಕೆ-4 ರಲ್ಲಿ ಈ ರೀತಿ ಅಂಕಗಳನ್ನು ಪಡೆದಿದ್ದಾನೆ.
“ಫಲಿತಾಂಶಗಳನ್ನು ನೋಡಿ ನನಗೆ ನಿಜವಾಗಿಯೂ ಆಶ್ಚರ್ಯವಾಯಿತು. ಇದು ತಾತ್ಕಾಲಿಕ ಅಂಕಪಟ್ಟಿಯಾಗಿದ್ದರೂ ಫಲಿತಾಂಶ ಹೊರತರುವ ಮುನ್ನ ಅಧಿಕಾರಿಗಳು ಪರಿಶೀಲಿಸಬೇಕಿತ್ತು’ ಎಂದಿದ್ದಾನೆ.
ಮತ್ತೊಬ್ಬ ವಿದ್ಯಾರ್ಥಿ ತನ್ನ ಬಿಕಾಂ ಭಾಗ-2 ಪರೀಕ್ಷೆಯಲ್ಲಿ ಅಕೌಂಟೆನ್ಸಿ ಮತ್ತು ಹಣಕಾಸು ಪತ್ರಿಕೆ-4ರಲ್ಲಿ ಶೂನ್ಯ ಪಡೆದಿದ್ದಾನೆ.
“ಇದು ಟೈಪಿಂಗ್ ದೋಷ ಎಂದು ವಿಶ್ವವಿದ್ಯಾನಿಲಯವು ಒಪ್ಪಿಕೊಂಡಿದೆ ಮತ್ತು ಅವರು ನನಗೆ ಪರಿಷ್ಕೃತ ಅಂಕ ಪಟ್ಟಿಯನ್ನು ನೀಡಿದ್ದಾರೆ” ಎಂದು ವಿದ್ಯಾರ್ಥಿ ಹೇಳಿದ್ದಾನೆ.
ಎರಡೂ ಅಂಕಪಟ್ಟಿಗಳಲ್ಲಿ ಟೈಪಿಂಗ್ ದೋಷಗಳಿವೆ ಎಂದು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಮುಷ್ತಾಕ್ ಅಹ್ಮದ್ ಪಿಟಿಐಗೆ ತಿಳಿಸಿದ್ದಾರೆ.
“ಮುದ್ರಣ ದೋಷಗಳನ್ನು ಸರಿಪಡಿಸಿದ ನಂತರ, ಇಬ್ಬರು ವಿದ್ಯಾರ್ಥಿಗಳಿಗೆ ಹೊಸ ಅಂಕಪಟ್ಟಿಗಳನ್ನು ವಿತರಿಸಲಾಯಿತು. ಅವು ಕೇವಲ ಮುದ್ರಣ ದೋಷಗಳು ಹೊರತು ಬೇರೇನೂ ಅಲ್ಲ, ”ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.