Advertisement

ವರ್ಕಾಡಿ: ಆಟಿಟೊಂಜಿ ದಿನ

05:44 PM Jul 22, 2019 | mahesh |

ವಿದ್ಯಾನಗರ: ಮನುಷ್ಯ ಮತ್ತು ಪ್ರಕೃತಿಯೊಂದಿಗಿನ ಅವಿನಾಭಾವ ಸಂಬಂಧವನ್ನು. ಪರಂಪರೆಯ ಆಳವಾದ ಜೀವನ ಸತ್ಯವನ್ನು ನೆನಪಿಸುವ ಆಟಿ ಆಚರಣೆಯು ಇಂದಿನ ಕಾಲಘಟ್ಟದಲ್ಲಿ ಅನಿವಾರ್ಯ. ಕಠಿಣವಾದ ಕಾಲಘಟ್ಟದಲ್ಲಿ ತಯಾರಿಸುತ್ತಿದ್ದ ವಿವಿಧ ಗಿಡಮೂಲಿಕೆಗಳ, ಹಲಸು ಮುಂತಾದ ಕಾಯಿ ಹಣ್ಣುಗಳ ಆಹಾರವು ಔಷಧದ ಕಣಜವಾಗಿತ್ತು. ಬಗೆಬಗೆಯ ಮದ್ದಿನ ತಿನಿಸುಗಳು, ಪ್ರಕೃತಿಯನ್ನೇ ಅವಲಂಬಿಸಿರುವ ಜೀವನಕ್ರಮ ಸತ್ವಯುತವಾದ ಸಾರವನ್ನೊಳಗೊಂಡ ಆಚರಣೆಗಳಲ್ಲಿ ಕಂಡುಬರುತ್ತಿತ್ತು. ಆದರೆ ಆಧುನಿಕತೆ ನಮ್ಮ ಜೀವನದ ಹಾದಿಯನ್ನೇ ಬದಲಾಯಿಸುವಲ್ಲಿ ಸಫಲವಾಗಿದೆ. ಆದುದರಿಂದ ಜಾನಪದ ಸಂಸ್ಕೃತಿ ಸಂವರ್ಧನೆಗೆ ಉತ್ತು ನೀಡದಿದ್ದಲ್ಲಿ ಭವಿಷ್ಯದ ತಲೆಮಾರಿಗೆ ಅಪಾಯವಿದೆ. ತುಳು ಭಾಷೆ, ಸಂಸ್ಕೃತಿಯೊಂದಿಗೆ ಹೆಜ್ಜೆಹಾಕಿ ಬೆಳೆದುಬಂದ ಕನ್ನಡ ನಾಡು-ನುಡಿ ತೌಳವ-ಕನ್ನಡ ಸಮಾಗಮವಾಗಿ ವಿಶಿಷ್ಟವೆನಿಸಿದೆ ಎಂದು ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ತಿಳಿಸಿದರು.

Advertisement

ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾಸರಗೋಡು ಜಿಲ್ಲಾ ಘಟಕ ಮತ್ತು ಪ್ರಗತಿಬಂಧು-ಸ್ವಸಹಾಯ ಸಂಘಗಳ ಒಕ್ಕೂಟ ಪಾವಳ ಪೈವಳಿಕೆ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ವರ್ಕಾಡಿಯ ಸೆ„ಂಟ್‌ ಜೋಸೆಫ್‌ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಆಟಿಟೊಂಜಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗಡಿನಾಡು ಕಾಸರಗೋಡಿನ ಬಹುಭಾಷೆ, ಸಂಸ್ಕೃತಿಯ ನೆಲದಲ್ಲಿ ಪರಸ್ಪರ ಸೌಹಾರ್ಧತೆಯನ್ನು ಕಾಯ್ದುಕೊಳ್ಳುವಲ್ಲಿ ಜಾನಪದ ಪರಿಷತ್ತಿನ ಕಾರ್ಯಚಟುವಟಿಕೆಗಳು ಗಮನಾರ್ಹವಾಗಿದೆ ಎಂದು ತಿಳಿಸಿದ ಅವರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಹುಮುಖದ ಕಾರ್ಯಚಟುವಟಿಕೆಗಳ ಸ್ವಾವಲಂಬನೆ, ನೈತಿಕ ಶಿಕ್ಷಣ, ಪಿಡುಗುಗಳ ವಿರುದ್ದ ಜಾಗ್ರತಿ, ಅಜೀರ್ಣ ಆರಾಧನಾಲಯಗಳ ಪುನರುಜ್ಜೀವನ ಮೊದಲಾದ ಅಸಾಧ್ಯ ಸಾಧನೆಗಳಿಂದ ಸಮಾಜವನ್ನು ಕಟ್ಟಿಬೆಳೆಸುತ್ತಿರುವುದು ಈ ಕಾಲದ ಜನರ ಸುಯೋಗ ಎಂದು ಶ್ಲಾಘಿಸಿದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಅವರು ಮಾತನಾಡಿ, ಸ್ಪಷ್ಟತೆ, ಶುದ್ಧತೆಯಿಂದ ಕೂಡಿದ ನಮ್ಮ ಸಂಸ್ಕೃತಿಯ ಬಗ್ಗೆ ಜಾಗ್ರತಾವಸ್ಥೆಗೆ ಹೋಗಬೇಕಾದ ಅಗತ್ಯವಿದೆ. ಸೂರ್ಯನೇ ಗಡಿಯಾರವಾಗಿದ್ದ ಕಾಲದಲ್ಲಿ ಬದುಕಿನ ಒಳರಹಸ್ಯ ಹಿರಿಯರಿಗೆ ತಿಳಿದಿತ್ತು. ಆಚರಣೆಗಳಿಗೂ ಅದರದ್ದೇ ಆದ ಮಹತ್ವವಿತ್ತು. ಶಾರೀರಿಕ ಮಾನಸಿಕ ದೃಢತೆಯಿತ್ತು. ಹಾಗೆಯೇ ಹಿರಿಯರೇ ಮಾರ್ಗದರ್ಶಕರಾಗಿದ್ದರು. ಆದರೆ ಈ ಹಾದಿಯನ್ನು ಕಾಸರಗೋಡಿನ ಜನತೆ ಜೀವಂತವಾಗಿಸುವಲ್ಲಿ ತೋರುವ ಆಸಕ್ತಿ ಅಪಾರವಾದುದು. ಗಡಿನಾಡು ಕಾಸರಗೋಡಿನ ಸಾಹಿತ್ಯ, ಜಾನಪದ, ಸಾಮಾಜಿಕ ಸೇವೆಗಳು ಔನ್ನತ್ಯದಿಂದ ಇತರೆಡೆಗಳಿಗೆ ಮಾದರಿಯಾದುದು. ಬಹುಭಾಷೆ, ಸಂಸ್ಕೃತಿಗಳ ನೆಲೆವೀಡಾಗಿ ಏಕತೆಯಿಂದ ಮುನ್ನಡೆಯುತ್ತಿರುವ ಜನಸಾಮಾನ್ಯರ ಕೊಡುಗೆಗಳು ಅಪರಿಮಿತವಾದುದು ಎಂದು ತಿಳಿಸಿದರು.

ಗ್ರಾಮಾಭಿವೃದ್ದಿ ಯೋಜನೆಯ ದಕ್ಷಿಣ ಕನ್ನಡ-ಕಾಸರಗೋಡು ಜಿಲ್ಲೆಯ ಯೋಜನಾ ನಿರ್ದೇಶಕ ಸತೀಶ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದಕಾರ್ಯಕ್ರಮದಲ್ಲಿ ವಿಶೇಷಾಹ್ವಾನಿತರಾಗಿ ಪಾಲ್ಗೊಂಡಿದ್ದ ಕರ್ನಾಟಕ ವಿಧಾನ ಪರಿಷತ್ತಿನ ಪ್ರತಿಪಕ್ಷದಮಾಜಿ ಮುಖ್ಯ ಸಚೇತಕ ಕ್ಯಾಪ್ಟನ್‌.ಗಣೇಶ್‌ ಕಾರ್ಣಿಕ್‌ ಅವರು ಮಾತನಾಡಿ, ಭಾರತೀಯ ಪರಂಪರೆಯ ಸಾವಿರಾರು ವರ್ಷಗಳ ಆಚರಣೆ-ನಂಬಿಕೆಗಳನ್ನು ಬೆಳೆಸಿ ಉಳಿಸುವಲ್ಲಿ ಇಂತಹ ಕಾರ್ಯಕ್ರಮಗಳು ಪರಿಣಾಮಕಾರಿ ಎಂದು ತಿಳಿಸಿದರು. ಪ್ರಕೃತಿಯೊಂದಿಗಿನ ಹೆಜ್ಜೆ ಸಂಸ್ಕೃತಿಯಾಗಿದ್ದು, ಪ್ರಕೃತಿಯ ವಿರುದ್ದ ನಡೆ ವಿಕೃತಿಯಾಗುತ್ತದೆ. ಆಧುನಿಕ ಬದುಕಿಗೆತೆರೆದುಕೊಂಡಿರುವ ನಮ್ಮಲ್ಲಿ ಪರಂಪರೆ ಸಾಗಿಬಂದ ಪ್ರಕೃತಿಯೊಂದಿಗಿನ ಬದುಕು ಅಸಹ್ಯವಾಗದಿರಲಿ ಎಂದು ಕರೆನೀಡಿದರು. ಪರಂಪರೆ, ಸಂಸ್ಕೃತಿಗಳಂತಹ ಜೀವನ ಮೌಲ್ಯಗಳು ಬದುಕನ್ನು ಸುಂದರಗೊಳಿಸುತ್ತದೆ.ಅದರ ಮರೆವು ದುಃಖಕ್ಕೆ ಕಾರಣವಾಗುತ್ತದೆ. ಯುವ ತಲೆಮಾರಿಗೆ ಒಳಿತಿನ ಪಾಠವನ್ನು ನೀಡೋಣ, ಜೀವನ ಮೌಲ್ಯದ ಉಳಿವಿಗಾಗಿ ಗ್ರಾಮದ ಬದುಕನ್ನು ಗೌರವಿಸೋಣಎಂದು ತಿಳಿಸಿದರು.

Advertisement

ಅಖೀಲ ಕರ್ನಾಟಕ ಜನಜಾಗ್ರತಿ ವೇದಿಕೆಯ ಜಿಲ್ಲಾಧ್ಯಕ್ಷ ಅಶ್ವಥ್‌ ಪೂಜಾರಿ ಲಾಲ್‌ಬಾಘ…, ವರ್ಕಾಡಿ ಗ್ರಾ.ಪಂ.ಅಧ್ಯಕ್ಷ ಅಬ್ದುಲ್‌ ಮಜೀದ್‌, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎ.ಆರ್‌.ಸುಬ್ಬಯ್ಯಕಟ್ಟೆ, ಯಕ್ಷದ್ರುವ ಪಟ್ಲ ಫೌಂಡೇಶನ್‌ ಕುಂಬಳೆ ಘಟಕಾಧ್ಯಕ್ಷ ಎಸ್‌.ಜಗನ್ನಾಥ ಶೆಟ್ಟಿ ಕುಂಬಳೆ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ, ಜನಜಾಗƒತಿ ವೇದಿಕೆಯ ಹರೀಶ್‌ ಕಡಂಬಾರ್‌, ಶಂಕರ ಭಂಡಾರಿ, ಜಹೀರ್‌ ಅಹಮ್ಮದ್‌ ಬೆಳಪು, ರೋಟರಿ ಕ್ಲಬ್‌ ಅಧ್ಯಕ್ಷಸುನಿಲ್‌ ಶಿರ್ವ, ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಜಿಲ್ಲಾ ಘಟಕದ ಎಸ್‌.ವಿ.ಕರ್ಕೇರ, ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ವಿಶ್ವನಾಥ, ಜಾನಪದ ಪರಿಷತ್ತಿನ ಸಲಹೆಗಾರ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.

ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಟ್‌ ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ.ಸ್ವಾಗತಿಸಿ, ಜಾನಪದ ಪರಿಷತ್ತಿನ ಸಲಹೆಗಾರ ಪ್ರೊ.ಎ.ಶ್ರೀನಾಥ್‌ ವಂದಿಸಿದರು. ಕೋಶಾಧಿಕಾರಿ ರವಿ ನಾಯ್ಕಪು ಕಾರ್ಯಕ್ರಮ ನಿರೂಪಿಸಿದರು. ಶ್ರೀಕಾಂತ್‌ ನೆಟ್ಟಣಿಗೆ, ಝಡ್‌.ಎ.ಕಯ್ನಾರು, ಪುಷ್ಪಾವತಿ ನೆಟ್ಟಣಿಗೆ ಗುತ್ತು, ಸಂಧ್ಯಾಗೀತ ಬಾಯಾರು, ಪೃಥ್ವಿ ಶೆಟ್ಟಿ ಕುಂಬಳೆ, ಗೋವಿಂದ ಭಟ್‌ ಗಿರಿ ಬಾಯಾರು, ಗಣೇಶ್‌.ಕೆ.ಬಿ ಮೊದಲಾದವರು ಸಹಕರಿಸಿದರು.

ತೆಂಗಿನ ಹಸಿರು ಗರಿಗಳಿಂದ ವೇದಿಕೆಯನ್ನು ಆಲಂಕರಿಸಿರುವುದು ಸಮಾರಂಭದ ಅಕರ್ಷಣೆಗಳಲ್ಲಿ ಒಂದು ಬಳಿಕ ಸ್ವಸಹಾಯ ಸಂಘಗಳ ಸದಸ್ಯೆಯರಿಂದ ವಿವಿಧ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಿತು.

ಕಳಂಜನ ಆಗಮನ:
ಕಾರ್ಯಕ್ರಮದ ಉದ್ಘಾಟನೆಯ ವೇಳೆ ಆಟಿಕಳಂಜ ಆಗಮಿಸಿ ಪಾಡªನ ಕುಣಿತಗಳ ಮೂಲಕ ಸಾಂಪ್ರದಾಯಿಕ ಚಾಲನೆ ನೀಡಲಾಯಿತು.ಬಾಬು ಮೀಯಪದವು ಮತ್ತು ನಾರಾಯಣ ಅವರು ಆಟಿಕಳಂಜ ವೇಷಧಾರಿಯಾಗಿ ವೇದಿಕೆಗೆ ಆಗಮಿಸಿ ಸಾಂಪ್ರದಾಯಿಕವಾಗಿ ಡೋಲು ಬಡಿದು ಕುಣಿಸಲಾಯಿತು. ಈ ಸಂದರ್ಭ ಬಾಲಕೃಷ್ಣ ನಾಯ್ಕ-ಗೀತಾ ದಂಪತಿಗಳು ಗೆರಸೆಯಲ್ಲಿ ಆಟಿಯ ತಿಂಡಿ-ಪದಾರ್ಥಗಳನ್ನು ನೀಡಿ ಆಟಿಕಳಂಜನನ್ನು ಬೀಳ್ಕೊಟ್ಟರು.

107 ಬಗೆಯ ಆಟಿ ತಿನಸುಗಳು:
ಕಾರ್ಯಕ್ರಮದಲ್ಲಿ ಯೋಜನೆಯ ಸ್ವಸಹಾಯ ಸಂಘಗಳು ತಯಾರಿಸಿದ 107 ಬಗೆಯ ಆಟಿ ತಿನಸುಗಳ ಪ್ರದರ್ಶನ ಗಮನ ಸೆಳೆಯಿತು. ಉಪ್ಪಡ್‌ ಪಚ್ಚಿಲ್‌(ಉಪ್ಪು ಸೋಳೆ), ಹಲಸಿನ ಹಣ್ಣಿನ ದೋಸೆ, ಹಲಸಿನ ಹಣ್ಣಿನ ಗಾರಿಕೆ, ಗಟ್ಟಿ, ಹಪ್ಪಳ, ಹಲಸಿನ ಬೀಜದ ಚಟ್ನಿ, ಪಲ್ಯ, ಸಾಂತಾಣಿ, ಹಲಸಿನ ಬೀಜದ ದೋಸೆ, ಹಲಸಿನ ಕಾಯಿ ಪ್ರಲ್ಯ, ಕೊಚ್ಚಿ ಪದಾರ್ಥ, ಕಣಿಲೆ ಪಲ್ಯ,ಕಣಿಲೆ ಉಪ್ಪಿನಕಾಯಿ, ಕಡುಬು, ನೀರು ಕಡುಬು, ಬಾಳೆ ದಿಂಡಿನ ಪಲ್ಯ, ತಜಂಕ್‌ ಪಲ್ಯ, ತಜಂಕ್‌ ಅಂಬಡೆ, ಪತ್ರೊಡೆ , ಪಅಯಸ, ಆಕ್ಕಿ ಉಂಡೆ, ಮೊದಲಾದ ತಿಂಡಿ ತಿನಸುಗಳು ಗಮನ ಸೆಳೆದವು. ಜೊತೆಗೆ ಕಷಾಯ, ಪಾನಕ ವ್ಯವಸ್ಥೆ ಮಾಡಲಾಗಿತ್ತು.

ಕುಂಬಳೆ ಸೀಮೆಯ ಪ್ರಧಾನ ದೆ„ವನರ್ತಕ ಡಾ.ರವೀಶ ಪರವ ಪಡುಮಲೆ, ಸಮಾಜ ಸೇವಕ ಮೊಹಮ್ಮದ್‌ ಫಾರೂಕ್‌ ಚಂದ್ರನಗರ ಅವರನ್ನು ವಿಶೇಷ ಸೇವೆಗಳನ್ನು ಪರಿಗಣಿಸಿ ಸನ್ಮಾನಿಸಿ ಗೌರವಿಸಲಾಯಿತು. ಕುನ್ನಿಲ್‌ ಎಜ್ಯುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಡಾ.ಪಕ್ರುದ್ದೀನ್‌ ಕುನ್ನಿಲ್‌ ಹಾಗೂ ಎಂ.ಫಿಲ್‌ ಪದವಿ ಪಡೆದ ಜಿಲ್ಲೆಯ ಕೊರಗ ಜನಾಂಗದ ಮಹಿಳೆ ಮೀನಾಕ್ಷಿ ಬೊಡ್ಡೋಡಿ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎ.ಆರ್‌.ಸುಬ್ಬಯ್ಯಕಟ್ಟೆಯವರನ್ನು ಅಭಿನಂದಿಸಲಾಯಿತು.

ಬಹುಭಾಷೆಗೆ ಹೆಸರಾಗಿರುವ ಕಾಸರಗೋಡಿನ ಪುಣ್ಯಭೂಮಿಯಲ್ಲಿ ಪರಂಪರೆಯ ಬೇರುಗಳನ್ನು ಗಟ್ಟಿಗೊಳಿಸುವ ಆಚರಣೆಗಳಿಗೆ ಒತ್ತು ನೀಡುವ ಜಾನಪದ ಪರಿಷತ್ತು ಕೇರಳ ಘಟಕದ ಮಹತ್ವದ ಹೆಜ್ಜೆಗಳು ಕರ್ನಾಟಕಕ್ಕೂ ಮಾದರಿಯಾಗಿದೆ. ಜನಪದದ ಹಿರಿಮೆಯನ್ನು ಆಧುನಿಕ ಜಗತ್ತಲ್ಲೂ ಆದರ್ಶಮಯವಾಗಿ ಮುನ್ನಡೆಸುವ ಕಾರ್ಯ ಮೆಚ್ಚತಕ್ಕದ್ದು. ಅಂದಿನ ಒಳ್ಳೆಯ ಕಾಲದ ನೆನಪುಗಳೊಂದಿಗೆ ಜಾಗƒತಿ ಮೂಡಿಸುವ ಕೆಲಸವೂ ಆಗುತ್ತಿದೆ. ಗದ್ದೆಯಲ್ಲಿಂದು ಲೇಲೇ ಸ್ವರವಿಲ್ಲ. ಮೆಶೀನುಗಳ ಕರ್ಕಶ ದನಿಮಾತ್ರವಿದೆ. ಕೃಷಿ ಮಾಡುವಾಗಿನ ಸಂಭ್ರಮದ ಛಾಯೆ ಯಂತ್ರಗಳ ಮಾಯೆಯಲ್ಲಿ ಮಾಯವಾಗಿದೆ. ಅಂದಿನ ಜೀವನಕ್ರಮದ ಚಿಂತನೆಯನ್ನು ಇಂದಿನ ಹಾಗೂ ಮುಂದಿನ ಜನಾಂಗಕ್ಕೆ ನೀಡುವ ಇಂತಹ ಕಾರ್ಯಕ್ರಮಗಳು ಮುಂದೆಯೂ ನಡೆಯುತ್ತಿರಲಿ.
ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next