Advertisement
ಸಿ ವಿಝಿಲ್ ಅಕ್ರಮ ರೂಪದಲ್ಲಿ ಸ್ಥಾಪಿಸಲಾಗುವ ಜಾಹೀರಾತು ಸಾಮಗ್ರಿಗಳ ವಿರುದ್ಧ ಸಾರ್ವಜನಿಕರು ಸಿ ವಿಝಿಲ್ ಎಂಬ ಮೊಬೈಲ್ ಆ್ಯಪ್ ಮೂಲಕ ಫೋಟೋ ಯಾ ವೀಡಿಯೋ ನಡೆಸಿ ಅಪ್ ಲೋಡ್ ನಡೆಸಿದರೆ ಅದನ್ನು ದೂರು ಎಂಬುದಾಗಿ ಪರಿಶೀಲಿಸಲಾಗುವುದು. ಜಿಯೋಗ್ರಾಫಿಕ್ ಇನಾರ್ಮೇಷನ್ ಸಿಸ್ಟಂ ಬಳಸಿ ನೀತಿಸಂಹಿತೆ ಉಲ್ಲಂಘನೆ ನಡೆದಿರುವ ಜಾಗ ಪತ್ತೆ ಮಾಡಲಾಗು ವುದು. ದೂರು ಅಪ್ ಲೋಡ್ ನಡೆಸಿದ ತಕ್ಷಣವೇ ಯೂನಿಕ್ ಐಡಿ ಒಂದು ಲಭಿಸಲಿದೆ. ನಂತರ ಈ ಮೂಲಕ ಈ ಸಂಬಂಧ ಏನೇನು ಕ್ರಮ ನಡೆಸಲಾಯಿತು ಎಂದು ತಿಳಿಯಲು ದೂರುದಾತನಿಗೆ ಸಾಧ್ಯ. 100 ನಿಮಿಷಗಳ ಅವ ಧಿಯೊಳಗೆ ದೂರಿಗೆ ಪರಿಹಾರ ಲಭಿಸಲಿದೆ. ಒಬ್ಬರಿಗೆ ಒಂದಕ್ಕಿಂತ ಅ ಧಿಕ ನೀತಿಸಂಹಿತೆ ಉಲ್ಲಂಘನೆ ಸಂಬಂಧ ದೂರು ನೀಡಲು ಸಾಧ್ಯವಾಗುವುದು ಎಂಬುದು ಈ ಆ್ಯಪ್‌ನ ವಿಶೇಷತೆಯಾಗಿದೆ. ದೂರುದಾತನ ಹೆಸರು, ಮಾಹಿತಿಗಳನ್ನು ಗುಪ್ತವಾಗಿರಿಸಲಾಗುವುದು.
ಅಕ್ರಮ ಜಾಹೀರಾತು ಗಮನಿಸಿದಲ್ಲಿ ಸಾರ್ವಜನಿಕರು “1950′ ಟೋಲ್ ಫ್ರೀ ನಂಬ್ರಕ್ಕೆ ಕರೆಮಾಡಿ ದೂರು ಸಲ್ಲಿಸ ಬಹುದು. ಚುನಾವಣೆ ಆಯೋಗದ ದೂರಿನ ಪ್ರಕಾರ ಜಿಲ್ಲಾ ಧಿಕಾರಿ ಕಚೇರಿ ಯಲ್ಲಿ ಆರಂಭಿಸಲಾದ ಕಾಲ್ ಸೆಂಟರ್ ಮೂಲಕ ದೂರು ಸ್ವೀಕರಿಸಲಾಗುವುದು. ಬೆಳಗ್ಗೆ 9ರಿಂದ ರಾತ್ರಿ 9 ಗಂಟೆ ವರೆಗೆ ಈ ಕೇಂದ್ರ ಚಟುವಟಿಕೆ ನಡೆಸುತ್ತಿದ್ದು, ಲಭಿಸುವ ದೂರು ನೋಂದಣಿ ನಡೆಸಿ ಸಂಬಂಧಪಟ್ಟವರಿಗೆ ಹಸ್ತಾಂತರಿ ಸಲಾಗುವುದು. ಜತೆಗೆ ಮತದಾತರ ಸಂಶಯಗಳನ್ನು ಪರಿಹರಿಸಲಾಗುವುದು. ನಿಯಂತ್ರಣ ಕೊಠಡಿ
ಚುನಾವಣೆ ಸಂಬಂಧ ದೂರುಗಳಿದ್ದಲ್ಲಿ, ಅಕ್ರಮ ಜಾಹೀರಾತು ಸಂಬಂಧ ದೂರುಗಳಿದ್ದಲ್ಲಿ ಸಾರ್ವಜನಿಕರು ಚುನಾವಣೆ ನಿಯಂತ್ರಣ ಕೊಠಡಿಗೆ ದೂರು ನೀಡಬಹುದು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಟುವಟಿಕೆ ನಡೆಸುತ್ತಿರುವ ನಿಯಂತ್ರಣ ಕೊಠಡಿಯ ದೂರುವಾಣಿ ಸಂಖ್ಯೆ: 04994-255825.