Advertisement

5 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ

10:17 AM May 30, 2020 | Suhan S |

ಬಾಗಲಕೋಟೆ: ಹುನಗುಂದ ತಾಲೂಕಿನ ಅಮೀನಗಡ ಮತ್ತು ಕಮತಗಿ ಪ.ಪಂ. ವ್ಯಾಪ್ತಿಯಲ್ಲಿ ಎಸ್‌ಎಫ್‌ಸಿ ವಿಶೇಷ ಅನುದಾನದಡಿ ತಲಾ 2.50 ಕೋಟಿ ಸೇರಿ ಒಟ್ಟು 5 ಕೋಟಿ ರೂ. ಅನುದಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ| ವೀರಣ್ಣ ಚರಂತಿಮಠ ಶುಕ್ರವಾರ ಚಾಲನೆ ನೀಡಿದರು.

Advertisement

ಅಮೀನಗಡ ಮತ್ತು ಕಮತಗಿ ಪಟ್ಟಣದ ವಿವಿಧ ವಾರ್ಡಗಳಲ್ಲಿ ಸಿಸಿ ರಸ್ತೆ, ಪ್ಲೇವರ್‌ ಬ್ಲಾಕ್‌, ಚರಂಡಿ ನಿರ್ಮಾಣ, ಕಾಬಲ್‌ ಸ್ಟೋನ್‌ ಅಳವಡಿಕೆ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ರಸ್ತೆ ಮಧ್ಯವಿರುವ ವಿದ್ಯುತ್‌ ಕಂಬ ತೆರವುಗೊಳಿಸಬೇಕು. ತಾಂತ್ರಿಕ ಸಮಸ್ಯೆಗಳು ಇದ್ದಲ್ಲಿ ಅವುಗಳನ್ನು ಸರಿಪಡಿಸಿಕೊಂಡು ನಿಗಧಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ತಿಳಿಸಿದರು.

ಅಮೀನಗಡ ಪ.ಪಂ ಗೆ 14ನೇ ಹಣಕಾಸು ಯೋಜನೆಯಡಿ 28.60 ಲಕ್ಷ ರೂ.ಗಳಲ್ಲಿ ಖರೀದಿಸಲಾದ ಹೊಸ ಜೆಸಿಬಿ ಯಂತ್ರಕ್ಕೆ ಬಾಗಲಕೋಟೆ ಡಾ|ಶಾಸಕ ವೀರಣ್ಣ ಚರಂತಿಮಠ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗಣಪತಿ ಪಾಟೀಲ, ತಹಶೀಲ್ದಾರ್‌ ಬಸವರಾಜ ನಾಗರಾಳ, ಅಮೀನಗಡ ಪಪಂ ಮುಖ್ಯಾಧಿಕಾರಿ ಐ.ಬಿ ಕೊಣ್ಣೂರ, ಕಿರಿಯ ಆರೋಗ್ಯ ನಿರೀಕ್ಷಕ ಸಂತೋಷ ವ್ಯಾಪಾರಿಮಠ, ಸದಸ್ಯರಾದ ಶಂಕ್ರಮ್ಮ ಗೌಡರ, ವಿಜಯಕುಮಾರ ಕನ್ನೂರ, ಗುರು ಚಳ್ಳಗಿಡದ, ಕಮತಗಿ ಪ.ಪಂ ಮುಖ್ಯಾಧಿಕಾರಿ ಬಿ.ಟಿ ಬಂಡಿವಡ್ಡರ, ಸದಸ್ಯರಾದ ಸಂಗಣ್ಣ ಗಾಣಿಗೇರ, ಪ್ರಕಾಶ ಗುಳೇದಗುಡ್ಡ, ಗಂಗಾಧರ ಕ್ಯಾದಿಗೇರಿ, ನಾಗರತ್ನ ಪೂಜಾರಿ, ಜಾನಕಿ ಕುಮಚಗಿ, ವಿಜಯಲಕ್ಷ್ಮಿ ಕುಮಚಗಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next