ರಾಮದುರ್ಗ: ವಿವಿಧ ಬೇಡಿಕೆ ಏಡೇರಿಕೆಗೆ ಆಗ್ರಹಿಸಿ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಗಳು ತಹಶೀಲ್ದಾರ್ ಮುಖಾಂತರ ಸರ್ಕಾರಕ್ಕೆ ಶುಕ್ರವಾರ ಮನವಿ ಸಲ್ಲಿಸಿದರು.
ಇತ್ತೀಚೆಗೆ ಬೈಲಹೊಂಗಲ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿ ಬಸವರಾಜ ನಾಯಿಕರ ಅತಿಯಾದ ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದು, ತುಂಬಾ ನೋವಿನ ಸಂಗತಿಯಾಗಿದೆ. ವಿವಿದ ಇಲಾಖೆ ಕೆಲಸದ ಹೊರೆಯನ್ನು ಗ್ರಾಮ ಲೆಕ್ಕಾಧಿಕಾರಿಗಳಿಗೆ ಹೆರುವುದು ಸರಿಯಲ್ಲ ಕೂಡಲೇ ಅದನ್ನೂ ಸರಿಪಡಿಸಬೇಕೆಂದು ಮನವಿ ಮೂಲಕ ಒತ್ತಾಯಿಸಿದರು.
ಕೇವಲ ಸರ್ಕಾರದ ಹೆಚ್ಚಿನ ಕಾರ್ಯ ಮಾಡಿಸಿಕೊಂಡು ಅವರಿಗೆ ಸೌಲಭ್ಯಗಳನ್ನು ನೀಡುವಲ್ಲಿ ಹಿಂದೇಟು ಹಾಕುತ್ತಿರುವುದು ವಿಷಾಧನೀಯ ಸಂಗತಿ. ಗ್ರಾಮ ಲೆಕ್ಕಾಧಿಕಾರಿಗಳ ಕುರಿತು ಹಲವು ಭಾರೀ ಧರಣಿ, ಪ್ರತಿಭಟನೆ ನಡೆಸಿ ಬೇಡಿಕೆ ಏಡೇರಿಕೆಗೆ ಸರ್ಕಾರ ಹಾಗೂ ಕಂದಾಯ ಇಲಾಖೆಯ ಕಾರ್ಯದರ್ಶಿಗಳನ್ನು ಆಗ್ರಹಿಸಿದರೂ ಬೇಡಿಕೆಗೆ ಇದುವರೆಗೂ ಈಡೇರಿಲ್ಲ ಎಂದು ಮನವಿಯಲ್ಲಿ ಆರೋಪಿದ್ದಾರೆ.
ಇನ್ನು ಮುಂದಾದರೂ ಸರ್ಕಾರ ಎಚ್ಚೆತ್ತುಕೊಂಡು ಗ್ರಾಮ ಲೆಕ್ಕಾ ಧಿಕಾರಿಗಳ ಬೇಡಿಕೆಗೆ ಸ್ಪಂದಿಸಬೇಕು. ಇನ್ನೂ ಮುಂದಾದರೂ ಕೆಲಸದ ಒತ್ತಡವನ್ನು ಕಡಿಮೆಗೊಳಿಸಿ ನಮ್ಮ ಕಾರ್ಯವನ್ನು ಸರಿಯಾಗಿ ನಿರ್ವಹಿಸಲು ಅನುಕೂಲ ಮಾಡಬೇಕೇಂದು ಮನವಿ ಮೂಲಕ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ತಾಲೂಕಾಧ್ಯಕ್ಷ ಸಂತೋಷಗೌಡ ಪಾಟೀಲ, ಗ್ರಾಮ ಲೆಕ್ಕಾಧಿಕಾರಿಗಳಾದ ಆನಂದ ಮರದಬುಡಕಿನ, ಪ್ರವೀಣ ಖಾನಾಪೂರ, ಶಿವು ಗೊರವನಕೊಳ್ಳ, ಸುನೀಲ ಕಂಬಳಿ, ಎನ್.ಆರ್. ಚಿಗದಮ್ಮನವರ, ಮಹೇಶ ಟೆಂಗಿನಕಾಯಿ, ಎಸ್.ಬಿ. ಗೌಡರ, ಸಂಗಣ್ಣ ಹೊಸಮನಿ, ಮೋಹನ್ ಬನನ್ನವರ, ಸಂತೋಷ ಬೀಳಗಿರಿ, ಬಸು ಕುಂಬಾರ, ಶಿವಲೀಲಾ ಬಾಗೇವಾಡಿ, ಸವಿತಾ ಪಂಡರಿ, ಮೀನಾಕ್ಷಿ ಲಮಾಣಿ, ಸುನಂದಾ ತಿಮ್ಮಾಪೂರ, ರೇಖಾ ಹುಲ್ಲೆನ್ನವರ, ಫಾತಿಮಾ ಅತ್ತಾರ, ಮಂಜುಳಾ ಸೇರಿದಂತೆ ಇತರರು ಇದ್ದರು.