Advertisement

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

05:38 AM Jul 10, 2020 | Lakshmi GovindaRaj |

ಮಳವಳ್ಳಿ: ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಗುರುವಾರ ತಾಪಂ ಮುಂದೆ ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದಿಂದ ಪ್ರತಿಭಟನೆ ನಡೆಯಿತು. ಪಟ್ಟಣದ ತಾಪಂ ಮುಂಭಾಗದಲ್ಲಿ ಪ್ರತಿಭಟನಾಕಾರನ್ನು ಉದ್ದೇಶಿಸಿ ಸಿಐಟಿಯುನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್‌.ಕೆ.ತಿಮ್ಮೇಗೌಡ ಮಾತನಾಡಿ, ಸರ್ಕಾರದಿಂದ ಎಲ್ಲಾ ಗ್ರಾಪಂ ಸಿಬ್ಬಂದಿಗೆ 2018 ಮಾರ್ಚ್‌ನಿಂದ ವೇತನ ನೀಡಲಾಗುತ್ತಿದೆ.

Advertisement

ಕನಿಷ್ಠ ವೇತನಕ್ಕೆ ಬೇಕಾಗಿರುವ 900 ಕೋಟಿ ರೂ.ಬೇಕು. ಆದರೆ,  ಹಣಕಾಸು ಇಲಾಖೆಯಿಂದ 518 ಕೋಟಿ ಮಾತ್ರ ಮಂಜೂರಾಗಿದೆ. ವಾರ್ಷಿಕವಾಗಿ ಬಿಡುಗಡೆ ಮಾಡುತ್ತಿರುವ 518 ಕೋಟಿ ಅನುದಾನದಲ್ಲಿ ವರ್ಷದಲ್ಲಿ 8 ತಿಂಗಳು ಮಾತ್ರ ವೇತನ ಪಾವತಿಯಾಗುತ್ತಿದ್ದು, ಉಳಿದ ನಾಲ್ಕು ತಿಂಗಳ ವೇತನ  2018-19ನೇ ಸಾಲಿನಿಂದಲೂ 2020-21ವರೆಗೂ ಪ್ರತಿ ವರ್ಷ ನಾಲ್ಕು ತಿಂಗಳ ವೇತನ ಬಾಕಿಯಿದೆ.

ಬಾಕಿ ಹಣ ಬಿಡುಗಡೆಗೆ ನಿರಂತರವಾಗಿ ಹೋರಾಟದ ಮೂಲಕ ಸರ್ಕಾರ ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ  ಎಂದು ಆರೋಪಿಸಿದರು. ಕರ ವಸೂಲಿಗಾರ ಮತ್ತು ಕಂಪ್ಯೂಟರ್‌ ಆಪರೇಟರ್‌ ಹುದ್ದೆಗೆ ಶೇ.70ರಿಂದ ಶೇ.100 ಕೋಟಾ ಹೆಚ್ಚಿಸಬೇಕು. ಎಲ್ಲಾ ಸಿಬ್ಬಂದಿಗೆ ಪಿಂಚಣಿ ಮಂಜೂರು ಮಾಡಬೇಕು. ವೈದ್ಯಕೀಯ ವೆಚ್ಚ ಸಿಗುವಂತಾಗಬೇಕು.

ಕನಿಷ್ಠ  ವೇತನ ಪಡೆಯುವ ಎಲ್ಲರಿಗೂ ಬಿಪಿಎಲ್‌ ಕಾರ್ಡ್‌ ಉಳಿಸಿಕೊಳ್ಳಲು ಆದಾಯವನ್ನು 1.20 ಲಕ್ಷದಿಂದ 2 ಲಕ್ಷಕ್ಕೆ ಹೆಚ್ಚಿಸಬೇಕು. ಹೀಗೆ ವಿವಿಧ ಬೇಡಿಕೆಗಳ ಈಡೇರಿಕೆ ಸರ್ಕಾರವನ್ನು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ನೌಕರರ ಸಂಘದ  ಹಲಗೂರು ನಾಗರಾಜು, ಬಸವಲಿಂಗೇಗೌಡ, ರೇಣುಕಮ್ಮ, ನವೀನ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next