ಧಾರವಾಡ: ಸರಕಾರದಿಂದ ರಚಿಸಲ್ಪಟ್ಟ ರಾಜ್ಯದ 21 ಟ್ರಸ್ಟ್/ಪ್ರತಿಷ್ಠಾನಗಳ ಅಧ್ಯಕ್ಷರು ಹಾಗೂ ಸದಸ್ಯರ ಅಧಿಕಾರಾವಧಿ ಮುಕ್ತಾಯಗೊಂಡ ಹಿನ್ನಲೆ ಹೊಸ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸಿ, ರಾಜ್ಯ ಸರಕಾರವು ಆದೇಶ ಹೊರಡಿಸಿದೆ.
ಈ ಪೈಕಿ ಧಾರವಾಡದ ಐದು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಗಳಿಗೂ ಹೊಸ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕಗೊಳಿಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ (ಸಂಸ್ಕೃತಿ) ಸರಕಾರದ ಕಾರ್ಯದರ್ಶಿ ಕೆ.ಆರ್. ರಮೇಶ ಆದೇಶ ಹೊರಡಿಸಿದ್ದಾರೆ. ಈ ಟ್ರಸ್ಟ್ ಗಳಿಗೆ ಧಾರವಾಡದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಡಾ|ದ.ರಾ.ಬೇಂದ್ರೆ (ಅಂಬಿಕಾತನಯದತ್ತ) ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನ ಅಧ್ಯಕ್ಷರನ್ನಾಗಿ ಮನೋಜ ಪಾಟೀಲ, ಸದಸ್ಯರನ್ನಾಗಿ ಹುಬ್ಬಳ್ಳಿಯ ಉಮೇಶ ದೂಶಿ, ಡಾ|ಆನಂದಪ್ಪ ಜೋಗಿ, ಧಾರವಾಡದ ಶ್ರೀರಾಮ ಭಟ್ಟ, ಡಾ|ವೀರಣ್ಣ ರಾಜೂರ, ಅರವಿಂದ ಯಳಗಿ, ಬೆಳಗಾವಿಯ ವೀಣಾ ಕಟ್ಟಿ, ಕವಿವಿಯ ಸಹಾಯಕ ಪ್ರಾಧ್ಯಾಪಕ ಸುಭಾಶಚಂದ್ರ ನಾಟೇಕರ ಅವರನ್ನು ನೇಮಕ ಮಾಡಲಾಗಿದೆ.
ಮಲ್ಲಿಕಾರ್ಜುನ ಮನ್ಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟನ ಅಧ್ಯಕ್ಷರನ್ನಾಗಿ ನಾಗರಾಜ ಹವಾಲದಾರ, ಸದಸ್ಯರನ್ನಾಗಿ ಲಲಿತ ಭಂಡಾರಿ, ರೇಣುಕಾ ನಾಕೋಡ, ಶಕ್ತಿ ಪಾಟೀಲ, ಮಂಗಳೂರಿನ ರಫೀಕ ಖಾನ್, ಧಾರವಾಡದ ಗಾಯಕಿ ನಂದಾ ಪಾಟೀಲ, ಅನಸೂಯಾ ಹಿರೇಮಠ, ಡಾ|ನಂದನ್ ಅವರನ್ನು ನೇಮಿಸಲಾಗಿದೆ.
ಸ್ವರ ಸಾಮಾಟ್ರ ಪಂ.ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟನ ಅಧ್ಯಕ್ಷರನ್ನಾಗಿ ಧಾರವಾಡದ ಶ್ರೀಪಾದ ಹೆಗಡೆ, ಸದಸ್ಯರನ್ನಾಗಿ ಹುಬ್ಬಳ್ಳಿಯ ಹನುಮಂತ ಹರಿವಾಣ, ಬೆಂಗಳೂರಿನ ರವೀಂದ್ರ ಯಾವಗಲ್, ಪೂರ್ಣಿಮಾ ಭಟ್, ಉಸ್ತಾದ ಹಫೀಜ ಖಾನ್, ಡಾ|ಅರ್ಜುನ ವಥಾರ, ಧಾರವಾಡದ ಶಾಂತೇಶ ಚಿಕ್ಕಲಕಿ, ಮೋಹನ ರಾಮದುರ್ಗ ಅವರನ್ನು ನೇಮಕಗೊಳಿಸಲಾಗಿದೆ.
ಕನ್ನಡ ಕುಲ ಪುರೋಹಿತ ಆಲೂರು ವೆಂಕಟರಾವ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನ ಅಧ್ಯಕ್ಷರನ್ನಾಗಿ ಧಾರವಾಡದ ಡಾ|ಶ್ರೀನಿವಾಸ ಪಾಡಿಗಾರ, ಸದಸ್ಯರನ್ನಾಗಿ ಧಾರವಾಡದ ಹರ್ಷವರ್ಧನ ಶೀಲವಂತ, ನಾಗೇಂದ್ರ ದೊಡ್ಡಮನಿ, ಜಿನದತ್ತ ಹಡಗಲಿ, ಮೃಣಾಲ ಜೋಶಿ, ಪ್ರೊ|ಧನವಂತ ಹಾಜವಗೋಳ, ಸಿದ್ದರಾಮ ಮಠಪತಿ, ಕಲಬುರ್ಗಿಯ ಡಾ|ಚೆ.ರಾಮಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ.
ಚಿತ್ರಕಲಾ ಶಿಲ್ಪಿ ಡಿ.ವಿ.ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟನ ಅಧ್ಯಕ್ಷರನ್ನಾಗಿ ಪಿ.ಎಸ್.ಕಡೇಮನಿ, ಸದಸ್ಯರನ್ನಾಗಿ ಬಾಲಪ್ಪ ಗೋಗಿಹಾಳ್, ಪ್ರಮೋದ ಕಾರಕೂನ, ಡಾ|ಶಂಕರ ಕುಂದಗೋಳ, ಸುರೇಶ ಹಾಲಭಾವಿ, ಸವಿತಾ ಪಾಟೀಲ, ರಾಘವೇಂದ್ರ ಜಾಧವ, ಗುರುಸಿದ್ದಪ್ಪ ಅವರನ್ನು ನೇಮಿಸಲಾಗಿದೆ.