Advertisement
ಸ್ವಿಫ್ಟ್ ಡೀಸೆಲ್ ಕಾರ್ದೇಶದ ಪ್ರಮುಖ ಕಾರು ತಯಾರಕ ಮಾರುತಿ ಸುಜುಕಿ ಪ್ರಸ್ತುತ ಸ್ವಿಫ್ಟ್ ಡೀಸೆಲ್ ಕಾರುಗಳಿಗೆ 77,600 ರೂ. ವರೆಗೆ ರಿಯಾಯಿತಿಯನ್ನು ನೀಡುತ್ತಿದ್ದು, ಇದರಲ್ಲಿ 30,000 ರೂ. ನಗದು ರಿಯಾಯಿತಿ, 20,000 ವಿನಿಮಯ ಬೋನಸ್ ಹಾಗೂ 10 ಸಾವಿರ ರೂ. ಕಾರ್ಪೊರೆಟ್ ತೆರಿಗೆ ದರ ರಿಯಾಯಿತಿಯನ್ನು ನೀಡುತ್ತಿದೆ. ಜತೆಗೆ 17,600 ರೂ. ಮೌಲ್ಯದ 5 ವರ್ಷಗಳ ಗ್ಯಾರಂಟಿ ವೋಚರ್ ನೀಡಿದ್ದು, ಸೆಲೆರಿಯೊ ಹಾಗೂ ಆಲ್ಟೊ 800 ಖರೀದಿಯ ಮೇಲೆಯೂ 60,000 ರೂ. ವರೆಗೆ ರಿಯಾಯಿತಿಯನ್ನು ಘೋಷಿಸಿದೆ.
ಹ್ಯುಂಡೈ ತನ್ನ ಗ್ರ್ಯಾಂಡ್ ಐ 10 ಆವೃತ್ತಿಯ (ಪೆಟ್ರೋಲ್/ಡೀಸೆಲ್) ಮೇಲೆ 95,000 ರೂ. ವರೆಗೆ ರಿಯಾಯಿತಿ ಪ್ರಯೋಜನಗಳನ್ನು ನೀಡುತ್ತಿದ್ದು, ಐ 20 (ಪೆಟ್ರೋಲ್ / ಡೀಸೆಲ್) ಮತ್ತು ಸ್ಯಾಂಟ್ರೊ (ಪೆಟ್ರೋಲ್) ಕಾರುಗಳ ಖರೀದಿಯ ಮೇಲೆ 65,000 ರೂ. ವರೆಗೆ ಆಫರ್‌ಗಳನ್ನು ನೀಡುತ್ತಿದೆ. ನೀಡಿದೆ. ಹೋಂಡಾ
ಹೋಂಡಾ ಕಾರ್ ಇಂಡಿಯಾ ತನ್ನ ಪ್ರೀಮಿಯಂ ಹ್ಯಾಚ್ ಬ್ಯಾಕ್ ಹೋಂಡಾ ಜಾಝ್ ಖರೀದಿಯ ಮೇಲೆ 50,000 ರೂ. ರಿಯಾಯಿತಿ ನೀಡುತ್ತಿದೆ. ಇದರಲ್ಲಿ 25 ಸಾವಿರ ರೂ. ನಗದು ರಿಯಾಯಿತಿ ಹಾಗೂ 25,000 ರೂ. ವಿನಿಮಯ ರಿಯಾಯಿತಿಯನ್ನು ನೀಡಿದೆ.
Related Articles
ಫೋಕ್ಸ್ ವ್ಯಾಗನ್ ಇಂಡಿಯಾ ಪೊಲೊದ ಖರೀದಿಯ ಮೇಲೆ 1.01 ಲಕ್ಷ ರೂ. ಆಫರ್ ನೀಡಿದ್ದು, 81 ಸಾವಿರ ರೂ. ನಗದು ರಿಯಾಯಿತಿ ಹಾಗೂ 20 ಸಾವಿರ ರೂ. ವಿನಿಮಯ ರಿಯಾಯಿತಿಯನ್ನು ಕೊಡುತ್ತಿದೆ.
Advertisement
ರೆನೊಫ್ರೆಂಚ್ ಕಾರು ತಯಾರಕ ಕಂಪೆನಿ ರೆನೊ ತನ್ನ ಕ್ವಿಡ್ ಹ್ಯಾಚ್ ಬ್ಯಾಕ್ ಆವೃತ್ತಿಗಳ ಮೇಲೆ 1 ರೂ. ವಿಮೆ ಯೋಜನೆಯೊಂದಿಗೆ 2 ಸಾವಿರ ರೂ ಕಾರ್ಪೊರೆಟ್ ತೆರಿಗೆ ರಿಯಾಯಿತಿಯನ್ನು ನೀಡುತ್ತಿದೆ. ಮಹೀಂದ್ರಾ
ಮಹೀಂದ್ರಾ ಕಂಪೆನಿ ಕೆಯುವಿ100 ನೆಕ್ಸ್ಟ್ ಕಾರು ಖರೀದಿಯ ಮೇಲೆ 56 ಸಾವಿರ ರೂ.ವರೆಗೆ ದರ ಕಡಿತ ಮಾಡಿದೆ. ಇದರಲ್ಲಿ 35,000 ರೂ. ನಗದು ರಿಯಾಯಿತಿ ಮತ್ತು 29,000 ರೂ. ವಿನಿಮಯ ಬೋನಸ್ ಸೇರಿದೆ. ಟಾಟಾ
ಟಾಟಾ ಮೋಟಾರ್ಸ್ ಟಿಯಾಗೋ ಖರೀದಿ ಮೇಲೆ 15,000 ರೂ. ವಿನಿಮಯ ಬೋನಸ್ ಮತ್ತು 5000 ರೂ. ಕಾರ್ಪೊರೇಟ್ ತೆರಿಗೆ ರಿಯಾಯಿತಿಯೊಂದಿಗೆ 25 ಸಾವಿರ ನಗದು ರಿಯಾಯಿತಿ ಆಫರ್ ಅನ್ನು ನೀಡಿದೆ. ಫೋರ್ಡ್
ಫೋರ್ಡ್ ಇಂಡಿಯಾ ಫಿಗೋ ಖರೀದಿ ಮೇಲೆ ಶೇ.7.99 ರಷ್ಟು ಬಡ್ಡಿದರವನ್ನು ನೀಡುತ್ತಿದ್ದು, ಫ್ರೀಸ್ಟೈಲ್ ಆವೃತ್ತಿಯ ಮೇಲೆ 10 ಸಾವಿರ ರೂ. ನಗದು ರಿಯಾಯಿತಿ ಹಾಗೂ 15 ಸಾವಿರ ರೂ. ವಿನಿಮಯ ಬೋನಸ್ ದೊರೆಯಲಿದೆ. ಟೊಯೋಟಾ
ಟೊಯೋಟಾ ಇಟಿಯೋಸ್‌ನ ಆವೃತ್ತಿಯ ವಾಹನಗಳ ಖರೀದಿ ಮೇಲೆ 15 ಸಾವಿರ ರೂ. ಮೌಲ್ಯದ ಪರಿಕರಗಳನ್ನು ನೀಡುತ್ತಿದ್ದು, ಕಾರ್ಪೊರೇಟ್ ತೆರಿಗೆ ರಿಯಾಯಿತಿ ಇದೆ.