Advertisement

ಅಭಿವಾದನೆ ಎಂದರೇನು?

09:14 AM Jun 02, 2019 | Vishnu Das |

ಎದೆ, ಹಣೆ, ಕಣ್ಣು, ಮನಸ್ಸು, ಮಾತು, ಕೈಗಳು ಪದಗಳು ಮತ್ತು ಮೊಣಕಾಲುಗಳನ್ನು ನೆಲಕ್ಕೆ ತಾಗಿಸಿ ನೆಲದಲ್ಲಿ ಉದ್ದಂಡ ನಮಸ್ಕಾರ ಮಾಡುವುದಕ್ಕೆ ಸಾಷ್ಟಾಂಗ ನಮಸ್ಕಾರ ಎನ್ನುತ್ತಾರೆ. ಇದು ದೇವರಿಗೆ ಮತ್ತು ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದು ಕ್ರಮ. ಆಗಲೇ ಸರ್ವ ಸಮರ್ಪಣಾ ಭಾವ ವ್ಯಕ್ತವಾಗುವುದು. ಸ್ತ್ರೀಯರು ಸಾಷ್ಟಾಂಗ ನಮಸ್ಕಾರ ಮಾಡುವುದು ಸೂಕ್ತವಲ್ಲ.

Advertisement

ಶುಭ ದಿನಗಳಲ್ಲಿ ಹಿರಿಯರಿಗೆ ನಮಸ್ಕರಿಸುವುದು ಪದ್ಧತಿ. ಹಿರಿಯರ ಎದುರು ಬಾಗಿ ನಮ್ಮ ಎರಡು ಕೈಗಳಿಂದ ಎರಡು ಕಿವಿಗಳನ್ನೂ ಹಿಡಿದು ಆ ನಂತರ ನಮ್ಮ ಬಲಕೈಯಿಂದ ಅವರ ಬಲಪಾದವನ್ನು ನಮ್ಮ ಎಡಕೈಯಿಂದ ಅವರ ಎಡಪಾದವನ್ನು ಮುಟ್ಟಿ ನಮಸ್ಕಾರ ಮಾಡುವುದಕ್ಕೆ ಅಭಿವಾದನೆ ಎನ್ನುತ್ತೇವೆ. ಹೀಗೆ ಮಾಡುವುದರಿಂದ ಹಿರಿಯರಲ್ಲಿರುವ ಪಾಸಿಟೀವ್‌ ಗುಣಗಳು ನಮಗೂ ರವಾನೆ ಯಾಗುತ್ತವೆ ಎನ್ನುವ ನಂಬಿಕೆ ಉಂಟು. ಉರುಳು ಸೇವೆ, ಸಾಷ್ಟಾಂಗ ನಮಸ್ಕಾರಗಳಲ್ಲಿ ಆರೋಗ್ಯದ ಗುಟ್ಟೂ ಇದೆ. ಇದನ್ನು ಆಗಾಗ ಮಾಡುವುದರಿಂದ ದೇಹದ ಬಹುತೇಕ ಭಾಗಗಳು ಭಾಗಿ ರಕ್ತಚಲನೆಗೆ ಅನುಕೂಲವಾಗುತ್ತದೆ ಎನ್ನುವ ನಂಬಿಕೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next