Advertisement

Varanasi:ಕಾಳಿ ದೇವಿ ಪ್ರತ್ಯಕ್ಷವಾಗಲಿಲ್ಲ ಎಂದು ಕತ್ತು ಸೀಳಿಕೊಂಡು ಸಾ*ವಿಗೆ ಶರಣಾದ ಅರ್ಚಕ!

11:52 AM Dec 11, 2024 | Team Udayavani |

ನವದೆಹಲಿ: ಕಾಳಿ ದೇವಿಯನ್ನು ಒಲಿಸಿಕೊಳ್ಳಬೇಕೆಂದು ಅರ್ಚಕನೊಬ್ಬ 24ಗಂಟೆಗಳ ಕಾಲ ನಿರಂತರವಾಗಿ ಪೂಜೆ ಮಾಡಿದ ನಂತರವೂ ದೇವಿ ಪ್ರತ್ಯಕ್ಷವಾಗಲಿಲ್ಲ ಎಂದು ಮನನೊಂದು ತನ್ನ ಕತ್ತನ್ನು ಸೀಳಿಕೊಂಡು ಆ*ತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.

Advertisement

ಅರ್ಚಕ ಅಮಿತ್‌ ಶರ್ಮಾ (40ವರ್ಷ) ಗಾಯ್‌ ಘಾಟ್‌ ಪ್ರದೇಶದ ನಿವಾಸಿಯಾಗಿದ್ದು,ತಾನು ವಾಸವಾಗಿದ್ದ ಬಾಡಿಗೆ ಮನೆಯಲ್ಲಿ ಕಾಳಿ ದೇವಿಯನ್ನು ಪೂಜಿಸಿ, ದೇವಿ ಪ್ರತ್ಯಕ್ಷವಾಗಿಲ್ಲ ಎಂದು ಮಾನಸಿಕ ಒತ್ತಡಕ್ಕೆ ಒಳಗಾಗಿ ಕಟ್ಟರ್‌ ನಿಂದ ಗಂಟಲು ಸೀಳಿಕೊಂಡಿರುವುದಾಗಿ ವರದಿ ವಿವರಿಸಿದೆ.

ಈ ಸಂದರ್ಭದಲ್ಲಿ ಮನೆಯಲ್ಲಿ ಪತ್ನಿ ಜೂಲಿ ಅಡುಗೆ ಕೆಲಸದಲ್ಲಿ ನಿರತಳಾಗಿದ್ದಳು. ಆಗ ಕಾಳಿ ಮಾತೇ ದರ್ಶನ ನೀಡು…ಮಾ ಪ್ರತ್ಯಕ್ಷವಾಗು ಎಂದು ಚೀರಾಡುತ್ತಿರುವ ಶಬ್ದ ಕೇಳಿಸಿತ್ತು. ತಕ್ಷಣವೇ ಪತ್ನಿ ಕೋಣೆಗೆ ಹೋಗಿ ನೋಡಿದಾಗ…ಪತಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿತ್ತು. ಆಕೆಯು ಚೀರಾಡಲು ಆರಂಭಿಸಿದಾಗ ನೆರೆಹೊರೆಯವರು ಬಂದು ವಿಚಾರಿಸಿದಾಗ ವಿಷಯ ತಿಳಿದು ಅವರು ಆಘಾತಕ್ಕೊಳಗಾಗಿರುವುದಾಗಿ ವರದಿ ತಿಳಿಸಿದೆ.

ಕೂಡಲೇ ಶರ್ಮಾ ಅವರನ್ನು ಪತ್ನಿ ಹಾಗೂ ನೆರೆಹೊರೆಯವರು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅರ್ಚಕ ಕೊನೆಯುಸಿರೆಳೆದಿರುವುದಾಗಿ ವೈದ್ಯರು ಘೋಷಿಸಿದ್ದರು.

Advertisement

ಪತಿ ಶರ್ಮಾ ಕೋಣೆಯನ್ನು ಲಾಕ್‌ ಮಾಡಿಕೊಂಡು ಕಾಳಿ ದೇವಿ ಪ್ರತ್ಯಕ್ಷಳಾಗುತ್ತಾಳೆ ಎಂಬ ಭ್ರಮೆಯಿಂದ 24ಗಂಟೆಗಳ ಕಾಲ ಕಠಿನ ಪೂಜೆ ಮಾಡುತ್ತಿದ್ದರು. ಆದರೆ ಕಾಳಿ ದೇವಿ ಪ್ರತ್ಯಕ್ಷವಾಗಲಿಲ್ಲ. ಇದರಿಂದ ಮಾನಸಿಕ ಒತ್ತಡಕ್ಕೊಳಗಾಗಿ ತಮ್ಮ ಜೀವವನ್ನೇ ಬಲಿ ಕೊಟ್ಟಿರುವುದಾಗಿ ಪತ್ನಿ ಜೂಲಿ ಪೊಲೀಸರಿಗೆ ತಿಳಿಸಿದ್ದಾರೆ.

ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣದ ಬಗ್ಗೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುವಂತೆ ಆದೇಶಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next