Advertisement
ನವದೆಹಲಿ: ವಾರಣಾಸಿಯ ಪ್ರಮುಖ ರೈಲು ನಿಲ್ದಾಣ ಬಹು ವಿಸ್ತಾರವಾದ ಕಟ್ಟಡ. ಐದು ಶತಮಾನದಿಂದ ಹಲವಾರು ಬಾರಿ ಇಲ್ಲಿ ರೈಲುಗಳಿಗಾಗಿ ಜನರು ಕಾದಿದ್ದಾರೆ. ಕೆಲವೊಮ್ಮೆ ಬಹಳ ತಾಸುಗಳು, ಇನ್ನು ಕೆಲವೊಮ್ಮೆ ಕೆಲವೇ ನಿಮಿಷಗಳು. ಆದರೆ, ಇಷ್ಟು ದಿನ ಕಾದದ್ದು ಇಲ್ಲವೇ ಇಲ್ಲ. ವಿಪರ್ಯಾಸವೆಂದರೆ ಬಾರದ ರೈಲುಗಳಿಗೆ ಕಾಯಲಾಗುತ್ತಿದೆ.
Related Articles
Advertisement
ವಾರಣಾಸಿಯ ಮುಖ್ಯ ರೈಲ್ವೇ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಪ್ರಯಾಣಿಕರು ದೂರದರ್ಶನದಲ್ಲಿ ಮಹಾಭಾರತ-ರಾಮಾಯಣ ವೀಕ್ಷಿಸುತ್ತಾ ಸಮಯ ನೂಕುತ್ತಿದ್ದಾರೆ. ಲಾಕ್‌ಡೌನ್‌ನಿಂದ ಸಿಲುಕಿರುವವರಿಗೆ ಸ್ಥಳೀಯ ಅಧಿಕಾರಿಯೊಬ್ಬರು ಸಹಾಯದ ಮುಂದಾಳತ್ವ ವಹಿಸಿದ್ದಾರೆ. ಆದರೆ ಇಲ್ಲಿ ಹಲವು ಕಥೆಗಳಿವೆ.
ಮಹಾರಾಷ್ಟ್ರದ ಕಾರ್ಮಿಕ ರಘು ಉತ್ತಮ್ ಶಿಂಧೆ (25) ನಾಲ್ಕು ಮಕ್ಕಳು ಸೇರಿದಂತೆ ಅವರ ಕುಟುಂಬದ 10 ಸದಸ್ಯರೊಂದಿಗೆ ಬಿಹಾರ ರಾಜ್ಯದಲ್ಲಿ ಕೇಬಲ್ ಹಾಕಲು ಗ್ರಾಹಕರ ಮನೆಗಳಿಗೆ ತೆರಳುತ್ತಿದ್ದರು. ಅವರ ರೈಲು ಮಧ್ಯರಾತ್ರಿಯಲ್ಲಿ ವಾರಣಾಸಿಯ ಹೊರಗಿನ ನಿಲ್ದಾಣದಲ್ಲಿ ನಿಂತು, ಎಲ್ಲರಿಗೂ ಇಳಿಯುವಂತೆ ಆದೇಶಿಸಲಾಯಿತು. ನಗರದ ರೈಲು ನಿಲ್ದಾಣವನ್ನು ತಲುಪಲು ಶಿಂಧೆ ಮತ್ತು ಅವರ ಕುಟುಂಬ ನಾಲ್ಕು ಗಂಟೆಗಳ ಕಾಲ ನಡೆದು ಮತ್ತೂಂದು ರೈಲು ಹಿಡಿಯುವ ಆಶಯದೊಂದಿಗೆ ಇದ್ದರು.ಸರಕಾರಿ ವಕೀಲ ನರೇಂದ್ರ ಸಿಂಗ್ ಕೆಲಸದ ಪ್ರವಾಸದಿಂದ ಹಿಂದಿರುಗುವಾಗ ವಾರಣಾಸಿಯಲ್ಲಿ ಒಂದು ದಿನ ಸ್ಥಳ ವೀಕ್ಷಣೆಗೆಂದು ನಿಂತರು. ಪ್ರತಿದಿನ ಬೆಳಗ್ಗೆ, ರೈಲ್ವೆ ಸಿಬಂದಿಯೊಬ್ಬರು ಸಿಕ್ಕಿಬಿದ್ದ ಪ್ರಯಾಣಿಕರಿಗಾಗಿ ಯೋಗ ಅಧಿವೇಶನ ನಡೆಸುತ್ತಾರೆ. ಪ್ರಯಾಣಿಕರು ಯೋಗ, ಅನಂತರ ಬೇಯಿಸಿದ ತರಕಾರಿಗಳು ಮತ್ತು ಕರಿದ ಬ್ರೆಡ್‌ನ ಸರಳ ಉಪಹಾರ, ಸಂಜೆ ಊಟ ಮುಗಿಸುತ್ತಾರೆ. ಲೋಹದ ಬೆಂಚುಗಳ ಮೇಲೆ ಅಥವಾ ನೆಲದ ಮೇಲೆ ತೆಳುವಾದ ರಗ್ಗುಗಳನ್ನು ಹಾಸಿಕೊಂಡು ಮಲಗುತ್ತಾರೆ. ಪ್ರತಿಯೊಬ್ಬರೂ ಸರಿ ಸುಮಾರು ಒಂದೇ ಸಮಯಕ್ಕೆ ಮಲಗುತ್ತಾರೆ, ಏಳೂವುದು ಸಹ. ಸಣ್ಣ ಶಬ್ದಗಳೂ ಪ್ರತಿಧ್ವನಿಸುವ ಗುಹೆಯಲ್ಲಿ ಮೌನವಾಗಿರಲು ಪ್ರಯತ್ನಿಸುತ್ತವೆ. ಇದು ಒಂದು ರೈಲು ನಿಲ್ದಾಣಗಳ ಕಥೆಯಲ್ಲ; ಹಲವು ಊರುಗಳ ಕಥೆ. ಬಹುತೇಕ ನಗರಗಳಲ್ಲಿ ಇಂಥದ್ದೇ ಕಥೆಗಿಳಿವೆ. ಇನ್ನೇನು ಹೊರಟು ಬಿಡಬೇಕು ಎಂದುಕೊಂಡವರೆಲ್ಲಾ ಈಗ ಸುಮ್ಮನೆ ಕುಳಿತಿದ್ದಾರೆ. ಏನೂ ಮಾಡುವಂತಿಲ್ಲ; ಅಸಹಾಯಕತೆಯನ್ನೇ ಹೊದ್ದುಕೊಂಡು ಮಲಗಬೇಕು.