ವಾರಾಣಸಿಯ ಜ್ಞಾನವಾಪಿ ಪ್ರಕರಣ, ಮಥುರಾದಲ್ಲಿರುವ ಕೃಷ್ಣ ಜನ್ಮಭೂಮಿ ಪ್ರಕರಣಗಳು ಸುದ್ದಿಯಲ್ಲಿರುವಂತೆಯೇ ಪೂಜಾ ಸ್ಥಳಗಳ ಕಾಯ್ದೆ-1991 ಮತ್ತೂಮ್ಮೆ ಸುದ್ದಿಗೆ ಬಂದಿದೆ.
ಪಿ.ವಿ.ನರಸಿಂಹ ರಾವ್ ನೇತೃತ್ವದ ಕೇಂದ್ರ ಸರಕಾರ ಪೂಜಾಸ್ಥಳಗಳ ಕಾಯ್ದೆ 1991ನ್ನು ರಚಿಸಿ ಜಾರಿಗೊಳಿಸಿತ್ತು. ಈಗ ಈ ಕಾಯ್ದೆಯನ್ನು ರದ್ದುಪಡಿಸಬೇಕೆಂಬ ಆಗ್ರಹ ವ್ಯಕ್ತವಾಗುತ್ತಿದೆ.
1991 ಪೂಜಾಸ್ಥಳ ಕಾಯ್ದೆಯಲ್ಲಿ ಏನಿದೆ?: ಕಾಯ್ದೆಯ ಪ್ರಕಾರ 1947ರ ಆ.15ನೇ ತಾರೀ ಖೀನ ಬಳಿಕ ದೇಶದಲ್ಲಿ ಇರುವ ಪೂಜಾ ಸ್ಥಳಗಳಲ್ಲಿ ಯಥಾ ಸ್ಥಿತಿಯನ್ನು ಕಾಪಾ ಡಿ ಕೊಂಡು ಬರಬೇಕು. ಆಯೋಧ್ಯೆ ಪ್ರಕರಣದ ಅನಂತರದ ಪರಿಸ್ಥಿತಿಯಲ್ಲಿ ಪಿ.ವಿ.ನರಸಿಂಹ ರಾವ್ ನೇತೃತ್ವದ ಸರಕಾರ ಈ ಕಾಯ್ದೆ ಜಾರಿಗೊಳಿಸಿತ್ತು. ಕಾಯ್ದೆಯ ಸೆಕ್ಷನ್ ಮೂರರ ಅನ್ವಯ ಧಾರ್ಮಿಕ ಸ್ಥಳದ ಸ್ಥಿತಿಯನ್ನು ಬದಲಾಯಿಸುವುದನ್ನು ನಿಷೇಧಿಸಲಾಗಿದೆ.
– ಸೆಕ್ಷನ್ 4 (2)ರಲ್ಲಿ ಉಲ್ಲೇಖವಾಗಿರು ವಂತೆ ಯಾವುದೇ ಧಾರ್ಮಿಕ ಕ್ಷೇತ್ರದ ವಿರುದ್ಧ ಕೋರ್ಟ್‌ಗಳಲ್ಲಿ 1947ರ ಆ.15ರ ಒಳಗೆ ಸಲ್ಲಿಕೆ ಮಾಡಲಾಗಿರುವ ಅರ್ಜಿಗಳ ವಿಚಾರಣೆ ಮಾತ್ರ ನಡೆಯಬೇಕು. ಈ ದಿನಾಂ ಕದ ಅನಂತರ ಸಲ್ಲಿಕೆಯಾಗುವ ಹೊಸ ಅರ್ಜಿಗಳ ವಿಚಾರಣೆಯನ್ನು ಪರಿಗಣಿಸಬಾರದು.
-ಆದರೆ ರಾಷ್ಟ್ರೀಯ ಸ್ಮಾರಕ ಅಥವಾ ಐತಿಹಾಸಿಕ ಎಂದು ಪರಿಗಣಿತವಾಗಿರುವ, ಐತಿಹಾಸಿಕ ಸ್ಥಳಗಳು ಮತ್ತು ಪಳೆಯುಳಿಕೆಗಳ ಕಾಯ್ದೆ 1958ರ ಅನ್ವಯ ನಿಗದಿತ ಸ್ಥಳ ಘೋಷಣೆಯಾಗಿದ್ದರೆ ಕಾಯ್ದೆ ಅನ್ವಯವಾಗುವುದಿಲ್ಲ ಎಂದು ಸೆಕ್ಷನ್4ರಲ್ಲಿಯೇ ಉಲ್ಲೇಖಗೊಂಡಿದೆ.
– ಇದೇ ಅಂಶವನ್ನು ಜ್ಞಾನವಾಪಿ ಕೇಸಿ ನಲ್ಲಿ ಹಿಂದೂ ಸಂಘಟನೆಗಳು ನ್ಯಾಯಾ ಲಯಗಳಲ್ಲಿ ಸಲ್ಲಿಕೆ ಮಾಡಿರುವ ಅರ್ಜಿ ಯಲ್ಲಿ ಅರಿಕೆ ಮಾಡಿಕೊಂಡಿವೆ.
– ಈ ಕಾಯ್ದೆಯಿಂದ ಅಯೋಧ್ಯೆ ವಿವಾದವನ್ನು ಹೊರಗೆ ಇರಿಸಲಾಗಿತ್ತು.
ಮೊಕದ್ದಮೆ ಹೂಡಿದವರು ಯಾರು?: ಬಿಜೆಪಿ ನಾಯಕ ಡಾ| ಸುಬ್ರಹ್ಮಣ್ಯನ್ ಸ್ವಾಮಿ ಈ ಕಾಯ್ದೆ ಪ್ರಶ್ನಿಸಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಇನ್ನು ಜ್ಞಾನವಾಪಿ ಕೇಸಿನಲ್ಲಿ ಲಕ್ನೋ ಮೂಲದ ವಿಶ್ವಭದ್ರ ಪೂಜಾರಿ ಪುರೋಹಿತ ಮಹಾ ಸಂಘ ಮೊದಲ ಅರ್ಜಿ ಸಲ್ಲಿಕೆ ಮಾಡಿದೆ. 1991ರ ಕಾಯ್ದೆ ಅಸಾಂವಿಧಾನಿಕ ಮತ್ತು ಮಥುರಾ ಮತ್ತು ಕಾಶಿ ಹಿಂದೂಗಳಿಗೆ ಸೇರಿದ್ದು ಎಂದು ಘೋಷಣೆ ಮಾಡುವಲ್ಲಿ ಅಡ್ಡಿಯಾಗಿದೆ ಎನ್ನುವುದು ಅವರ ವಾದ.
ಈಗ ಕೆಲವು ಮಸೀದಿಯ ಆವರಣದೊಳಗೆ ಮಂದಿರದ ಕುರುಹು ಸಿಗುತ್ತಿರುವ ಬೆನ್ನಲ್ಲೇ ಈ ಕಾಯ್ದೆ ರದ್ದತಿಗೆ ಆಗ್ರಹ ಕೇಳಿಬಂದಿದೆ.