Advertisement

Festival; ಕರಾವಳಿಯಲ್ಲಿ ಸಂಭ್ರಮದ ವರಮಹಾಲಕ್ಷ್ಮೀ ಹಬ್ಬ

01:07 AM Aug 17, 2024 | Team Udayavani |

ಮಂಗಳೂರು/ ಉಡುಪಿ: ಶುಕ್ರವಾರ ಉಭಯ ಜಿಲ್ಲೆಯಲ್ಲಿ ಶ್ರೀ ವರಮಹಾಲಕ್ಷ್ಮಿಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಖ್ಯವಾಗಿ ಮಹಿಳೆಯರೇ ಮುಂದಾಗಿ ಆಚರಿಸುವ ಈ ಹಬ್ಬದಲ್ಲಿ ತಮ್ಮ ಮನೆ ಶೃಂಗರಿಸಿ, ಮಹಾಲಕ್ಷ್ಮೀ ದೇವರಿಗೆ ಅರಿಶಿನ ಕುಂಕುಮ ವಸ್ತ್ರ ಇರಿಸಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು. ವಿವಿಧ ದೇವಾಲಯಗಳಲ್ಲಿ ಹೆಚ್ಚಿನ ಭಕ್ತ ಸಮೂಹ ಕಂಡುಬಂತು.

Advertisement

ಮಂಗಳೂರಿನ ಶ್ರೀ ಮಂಗಳಾದೇವಿ ದೇವಳ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ, ಬೋಳಾರ ಹಳೆಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನ, ಕುದ್ರೋಳಿ ಶ್ರೀ ಭಗವತಿ ಕ್ಷೇತ್ರ, ಉರ್ವ ಬೋಳೂರು ಶ್ರೀ ಮಾರಿಯಮ್ಮ ದೇಗುಲ, ಕುಲಶೇಖರ ಶ್ರೀ ವೀರನಾರಾಯಣ ದೇಗುಲ, ಮರೋಳಿ ಶ್ರೀ ಸೂರ್ಯ ನಾರಾಯಣ ದೇಗುಲ, ಶ್ರೀ ಕಾಳಿಕಾಂಬಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಭಜನೆ, ಲಲಿತಾ ಸಹಸ್ರನಾಮ ಪಾರಾಯಣ, ಕುಂಕುಮಾರ್ಚನೆ ಇತ್ಯಾದಿ ನಡೆಯಿತು. ಅನೇಕ ದೇವಸ್ಥಾನಗಳಲ್ಲಿ ಅನ್ನ ಪ್ರಸಾದವಿತ್ತು.

ಉಡುಪಿ ಜಿಲ್ಲೆಯ ಕಡಿಯಾಳಿ, ಅಂಬಲಪಾಡಿ ಸಹಿತ ಪ್ರಮುಖ ದೇವಿ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಿತ್ತು.

ಕೊಲ್ಲೂರಿನಲ್ಲಿ ಭಕ್ತಸಂದಣಿ
ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಆ.16ರಂದು ಮಹಿಳೆಯರಿಗೆ ಅರಶಿನ ಕುಂಕುಮ ಮತ್ತು ಗಾಜಿನ ಬಳೆ ಪ್ರಸಾದ ವಿತರಣೆ ನಡೆಯಿತು.

ದೇಗುಲಕ್ಕೆ ಬೆಳಗ್ಗಿನಿಂದಲೇ ಶ್ರೀ ವರಮಹಾಲಕ್ಷ್ಮೀ ಹಬ್ಬದ ಸಲುವಾಗಿ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ದ್ದರು. ದೇಗುಲದ ಒಳ ಹಾಗೂ ಹೊರಪೌಳಿಯಲ್ಲಿ 20 ಸಾವಿರಕ್ಕೂ ಮಿಕ್ಕಿ ಭಕ್ತರು ಸೇರಿದ್ದು, ಹೊರಾವರಣದ ಮುಖ್ಯ ರಸ್ತೆ ತನಕ ಭಕ್ತರ ಸಾಲಿತ್ತು.

Advertisement

ಕೇಂದ್ರ ಸಚಿವ ಸೋಮಣ್ಣ, ಮಾಜಿ ಸಿಎಂ ಡಿವಿಎಸ್‌ಕೇಂದ್ರ ಸಚಿವವಿ.ಸೋಮಣ್ಣ ಹಾಗೂ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಅವರು ಕುಟುಂಬ ಸಹಿತ ಕೊಲ್ಲೂರಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next