ಮೈಸೂರು: ಮೈಸೂರು ತಾಲೂಕಿನ ವರಕೋಡು ಗ್ರಾಮದಲ್ಲಿರುವ ಶ್ರೀ ಬೀರೇಶ್ವರ ಸ್ವಾಮಿ ದೇವಾಲಯ ಜೀರ್ಣೋದ್ಧಾರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೂಮಿಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಸಿದ್ದರಾಮಯ್ಯ, ಎಲ್ಲಾ ಜಾತಿ ಸಮುದಾಯದವರು ದೇವರನ್ನು ಆರಾಧಿಸುವ ಸಂಪ್ರದಾಯ ಹೊಂದಿದ್ದಾರೆ. ಗುಡಿ ಕಟ್ಟಿ, ಮೂರ್ತಿ ಇಟ್ಟು ಪೂಜಿಸುವ ಪದ್ಧ ತಿಯೂ ಸಂಪ್ರದಾಯದಂತೆ ಎಲ್ಲಾ ವರ್ಗ ದವರು ಅನುಸರಿಸುತ್ತಿದ್ದಾರೆ. ದೇವರು ದೇವಾ ಲಯದಲ್ಲಿ ಮಾತ್ರ ಸೀಮಿತವಾಗಿರದೆ ಸರ್ವಾ ಂತರ್ಯಾಮಿಯಾಗಿದ್ದಾರೆ. ನೀವೆಲ್ಲ ಭಕ್ತ ಪ್ರಹ್ಲಾದ ನಾಟಕ ಅಥವಾ ಸಿನಿಮಾ ನೋಡಿರ ಬಹುದು.
ಆ ಸಿನಿಮಾದಲ್ಲಿ ದೇವರು ಎಲ್ಲೆಲ್ಲೂ ಇದ್ದಾನೆ ಎನ್ನುವುದನ್ನು ಪ್ರತಿಪಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಅವರ ಪದ್ಧತಿಗೆ ಅನು ಗುಣವಾಗಿ ದೇವರನ್ನು ಆರಾಧಿಸುತ್ತಾ ಬಂದಿದ್ದಾರೆ ಎಂದು ವಿವರಿಸಿದರು. ದೇವಾಲಯ ನಿರ್ಮಾಣಕ್ಕೆ ಸರ್ಕಾರದಿಂದನೆರವು ಕೊಡಿಸುವುದರೊಂದಿಗೆ ವೈಯಕ್ತಿಕ ವಾಗಿಯೂ ನೆರವು ನೀಡುತ್ತೇನೆ. ಆದರೆ ದೇಣಿಗೆ ಹೆಸರಿನಲ್ಲಿ ಹಣಕ್ಕಾಗಿ ಯಾರನ್ನೂ ಒತ್ತಾಯ ಮಾಡಬಾರದು. ಒಳ್ಳೆಯ ಮನಸ್ಸಿ ನಿಂದ ಉದಾರವಾಗಿ ಕೊಟ್ಟರೆ ಮಾತ್ರ ದೇಣಿಗೆ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಉಳ್ಳವರು ಶಿವಾಲಯ ಮಾಡುವರು: ದೇವರು ಸರ್ವಾಂತಯಾಮಿ ಎಂಬುದನ್ನು ಅರಿತಿದ್ದ ಬಸವಣ್ಣನವರು 12ನೇ ಶತಮಾನ ದಲ್ಲಿಯೇ “ಉಳ್ಳವರು ಶಿವಾಲಯ ಮಾಡು ವರು, ನಾನೇನ ಮಾಡಲಿ ಬಡವನಯ್ಯ. ಎನ್ನ ಕಾಲೇ ಕಂಬ ದೇಹವೇ ದೇಗಲು, ಶಿರಹೊನ್ನ ಕಳಸವಯ್ನಾ ಕೂಡಲನ ಸಂಗಮ ದೇವ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ದೇವಾ ಲಯ ನಿಮಾಣಕ್ಕೆ ಆರ್ಥಿಕವಾಗಿ ಸದೃಢವಾಗಿ ರುವವರು ದೇಣಿಗೆ ನೀಡಬೇಕು. ಮನುಷ್ಯ ಸಾಯುವಾಗ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ.
ಎಷ್ಟು ದಿನ ಇರುತ್ತೇವೋ ಸಾಧ್ಯವಾದಷ್ಟು ಉತ್ತಮ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಶಕ್ತಿ ಇದ್ದವರು, ಉಳ್ಳವರು ಹೆಚ್ಚಿನ ಪ್ರಮಾಣದಲ್ಲಿ ದೇಣಿಗೆ ನೀಡುವಂತೆ ಕೋರಿದರು. ಶಾಸಕ ಡಾ. ಯತೀಂದ್ರ, ಜಿಪಂ ಮಾಜಿ ಅಧ್ಯಕ್ಷರಾದ ಮರೀಗೌಡ, ಅಪ್ಪಾಜಿಗೌಡ, ಕೆಂಪೀರಯ್ಯ, ಎಪಿಸಿಎಂಸಿ ಅಧ್ಯಕ್ಷ ಪ್ರಭು ಸ್ವಾಮಿ, ಸದಸ್ಯ ಬಸವರಾಜು, ತಾಪಂ ಮಾಜಿ ಅಧ್ಯಕ್ಷ ರವಿ ಕುಮಾರ್, ತಾಪಂ ಸದಸ್ಯ ಮುದ್ದ ರಾಮೇ ಗೌಡ, ಸಿದ್ದರಾಮೇಗೌಡ, ಕಾಂಗ್ರೆಸ್ ಜಿಲ್ಲಾ ಧ್ಯಕ್ಷ ವಿಜಯಕುಮಾರ್ ಇದ್ದರು
ಸಾಮಾಜಿಕ ಅಂತರ ಕಾಯ್ದುಕೊಳ್ಳಿ – ಸಿದ್ದು: ದೇವಾಲಯ ಕಾರ್ಯಕ್ರಮಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮ ಸ್ಥರು ದೇವಾಲಯದ ಆವರಣದಲ್ಲಿ ಸೇರಿದ್ದರು. ವಾಹನದಿಂದ ಕೆಳಗಿಳಿ ಯುತ್ತಿದ್ದಂತೆ ಹಾರ ಹಾಕಲು ಮುಗಿ ಬಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಎಲ್ಲರೂ ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದು ಅನಿವಾರ್ಯ. ಆದರೆ ಇಷ್ಟೊಂದು ಜನರು ಸೇರಿರುವ ವಿಷಯ ತಿಳಿದಿದ್ದರೆ ನಾನು ಬರುತ್ತಿರಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.