Advertisement
ನಗರದ ಹೃದಯ ಭಾಗದಲ್ಲಿ ಪೈಪ್‌ಲೈನ್ ಕಾಮಗಾರಿಗಳು ಚುರುಕುಗೊಂಡಿದ್ದು, ಈಗಾಗಲೇ ಶೇ.67 ಕಾಮಗಾರಿ ಮುಗಿಸಲಾಗಿದೆ. ನಗರ ಸುತ್ತಮುತ್ತ ಸಹಿತ ಒಟ್ಟು 271 ಕಿ.ಮೀ. ಪೈಪ್‌ಲೈನ್ ನಿರ್ಮಿಸಬೇಕಿದ್ದು, 170 ಕಿ.ಮೀ. ಮುಗಿಸಲಾಗಿದೆ. ಇದರಲ್ಲಿ ಈಗಾಗಲೆ ಸುಸ್ಥಿತಿಯಲ್ಲಿರುವ ಪೈಪ್‌ಲೈನ್‌ಗಳನ್ನು ಉಳಿಸಿಕೊಳ್ಳಲಾಗುತ್ತಿದೆ. ಮಣಿಪಾಲ, ಚಿಟ್ಪಾಡಿ, ಮಲ್ಪೆ, ಪರ್ಕಳ, ಗುಂಡಿಬೈಲು, ಸರಳೇಬೆಟ್ಟು, ಸಗ್ರಿ, ಕಲ್ಮಾಡಿ ಸಹಿತ ಕೆಲವು ಪೈಪ್‌ಲೈನ್ ಕಾಮಗಾರಿ ನಡೆಯಲಿದೆ. ಕೆಲವು ಕಡೆಗಳಲ್ಲಿ ಬಾಕಿ ಇದ್ದು, ಅಲ್ಲಲ್ಲಿ ಕಾಮಗಾರಿ ನಿರ್ವಹಿಸಲಾಗುತ್ತಿದೆ.
ಒಟ್ಟು ಕಾಮಗಾರಿ 172 ಕೋ.ರೂ. ವೆಚ್ಚದಲ್ಲಿ ನಡೆಸಲಾಗುತ್ತಿದೆ. ಇದರಲ್ಲಿ ಪೈಪ್‌ಲೈನ್ ವರ್ಕ್, ಒಎಚ್‌ಟಿ ಟ್ಯಾಂಕ್‌ಗಳ ನಿರ್ಮಾಣ ಸೇರಿದೆ. ಕೆಲಸ ಮುಕ್ತಾಯದ ಬಳಿಕ ಗುತ್ತಿಗೆ ವಹಿಸಿಕೊಂಡ ಸಂಸ್ಥೆ 8 ವರ್ಷ ನಿರ್ವಹಣೆ ಮಾಡಬೇಕು. 2046ರವರೆಗಿನ ದೂರದೃಷ್ಟಿ ಯೋಜನೆ
ಮುಂದಿನ 2046ರವರೆಗೆ ನಗರದಲ್ಲಿ 24 ಗಂಟೆಯೂ ಕುಡಿಯುವ ನೀರು ಪೂರೈಸಲು ರೂಪಿಸಿದ ಯೋಜನೆ ಇದಾಗಿದೆ. ನಗರದಲ್ಲಿ ನೀರು ಪೂರೈಕೆ ಸಂಬಂಧಿಸಿ ಎಚ್‌ಡಿಪಿ (ಹೈಡೆನ್ಸಿಟಿ ಪಾಲಿಥಿನ್ ಪೈಪ್)ಗಳನ್ನು ಅಳವಡಿಸಲಾಗುತ್ತಿದೆ. ಅತ್ಯಂತ ಗುಣಮಟ್ಟದಿಂದ ಕೂಡಿರುವ ಪೈಪ್ ಮತ್ತು ವಾಲ್Ì, ಜಾಯಿಂಟ್ ಪರಿಕರಗಳನ್ನು ಅಳವಡಿಸಲಾಗುತ್ತದೆ.
Related Articles
Advertisement