Advertisement
ಇದರಲ್ಲಿ ಇಂದ್ರಾಳಿ ಶ್ಮಶಾನದ ಬಳಿ ಇರುವ ಓವರ್ ಹೆಡ್ ಟ್ಯಾಂಕ್ (ಒಎಚ್‌ಟಿ: ಮೇಲ್ಮಟ್ಟದ ಜಲ ಸಂಗ್ರಹಾಗಾರ) ಕೆಲಸ ಪೂರ್ಣಗೊಂಡಿದ್ದು, ಇದಕ್ಕೆ ನೀರನ್ನು ತುಂಬಿಸಲಾಗಿದೆ. ನಗರ ಹೃದಯ ಭಾಗದಲ್ಲಿ ಪೈಪ್‌ಲೈನ್ ಕಾಮಗಾರಿಗಳು ನಡೆದಿದ್ದು ಹಲವೆಡೆ ಅವ್ಯವಸ್ಥೆ, ವಿಳಂಬ ಕಾಮಗಾರಿಯಿಂದಾಗಿ ಸಾರ್ವಜನಿಕರು ತೀವ್ರ ಸಮಸ್ಯೆ ಅನುಭವಿಸಿದ್ದರು. ಶೇ. 80 ರಷ್ಟು ಕೆಲಸಗಳು ನಡೆದಿವೆ. ನಗರ ಸುತ್ತಮುತ್ತ ಸಹಿತ ಒಟ್ಟು 271 ಕಿ.ಮೀ ಪೈಪ್‌ಲೈನ್ ನಿರ್ಮಾಣ ಕಾಮಗಾರಿ ಹಲವು ಕಡೆಗಳಲ್ಲಿ ನಡೆದಿದೆ. ಕೆಲವು ಕಡೆಗಳಲ್ಲಿ ಬಾಕಿ ಇದ್ದು, ಅಲ್ಲಲ್ಲಿ ಕಾಮಗಾರಿ ನಿರ್ವಹಿಸಲಾಗುತ್ತಿದೆ.
ಇಂದ್ರಾಳಿ ಓವರ್‌ಹೆಡ್ ಟ್ಯಾಂಕ್ 9.9 ಲಕ್ಷ ಲೀಟರ್ ಸಾಮರ್ಥ್ಯ ಹೊಂದಿದೆ. ಈ ಟ್ಯಾಂಕ್ ಮೂಲಕ ಇಂದ್ರಾಳಿ ಸುತ್ತಮುತ್ತಲಿನ 1,500ಕ್ಕೂ ಅಧಿಕ ಮನೆಗಳಿಗೆ ನೀರನ್ನು ಪೂರೈಸಲಾಗುತ್ತದೆ. ಟ್ಯಾಂಕ್‌ನ ಪೈಂಟಿಂಗ್ ಕೆಲಸ ಬಾಕಿ ಇದ್ದು, ಶೀಘ್ರವೇ ಮುಗಿಯಲಿದೆ. ಹೈಡ್ರೋ ಫಂಕ್ಷನಿಂಗ್ ಟೆಸ್ಟ್ ನಲ್ಲಿ ಟ್ಯಾಂಕ್‌ನಲ್ಲಿ ಇತ್ತೀಚೆಗೆ ನೀರು ಸೋರಿಕೆ ಕಂಡುಬಂದಿದ್ದು, ಇದನ್ನು ಸರಿಪಡಿಸಲಾಗಿದೆ ಎಂದು ಕುಡ್ಸೆಂಪ್ ಎಂಜಿನಿಯರ್ ಮಾಹಿತಿ ನೀಡಿದ್ದಾರೆ. ಒಟ್ಟು ನಗರದಲ್ಲಿ 18 ಸಾವಿರ ಮನೆಗಳಿಗೆ ಹಳೆ ನೀರಿನ ಸಂಪರ್ಕವಿದ್ದು, ಹೊಸದಾಗಿ 17 ಸಾವಿರ ನೀರಿನ ಸಂಪರ್ಕ ನೀಡಲಾಗುತ್ತಿದೆ. 7 ಕಡೆಗಳಲ್ಲಿ ಟ್ಯಾಂಕ್
ಯೋಜನೆಯ ಭರವಸೆಯಂತೆ ಈ ವರ್ಷ ಬೇಸಗೆ ಒಳಗೆ ನಗರಕ್ಕೆ ನೀರು ಪೂರೈಸುವ ಬಗ್ಗೆ ತಿಳಿಸಲಾಗಿತ್ತು. ಸದ್ಯಕ್ಕೆ ಇಂದ್ರಾಳಿ ಓವರ್‌ಹೆಡ್ ಟ್ಯಾಂಕ್ ಮಾತ್ರ ಪೂರ್ಣಗೊಂಡಿದ್ದು, ಉಳಿದ ಕಡೆಗಳಲ್ಲಿನ ಟ್ಯಾಂಕ್ ನಿರ್ಮಾಣ ಪೂರ್ಣಗೊಳ್ಳಲು ಒಂದು ತಿಂಗಳು ಬೇಕಿದೆ ಎನ್ನುತ್ತಾರೆ ಎಂಜಿನಿಯರ್‌ಗಳು. ಯೋಜನೆ ಭಾಗವಾಗಿ ಒಟ್ಟು 7 ಕಡೆಗಳಲ್ಲಿ ನೀರು ಶೇಖರಣ ಟ್ಯಾಂಕ್‌ಗಳನ್ನು ನಿರ್ಮಿಸಲಾಗುತ್ತಿದೆ.
Related Articles
Advertisement
ತಿಂಗಳೊಳಗೆ ಬಹುತೇಕ ಕಾಮಗಾರಿ ಪೂರ್ಣಇಂದ್ರಾಳಿ ಓವರ್‌ಹೆಡ್ ಟ್ಯಾಂಕ್ ಕೆಲಸ ಮುಗಿದಿದ್ದು, ಉಳಿದ ಕಡೆಗಳಲ್ಲಿರುವ ಟ್ಯಾಂಕ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಒಂದು ತಿಂಗಳ ಒಳಗೆ ಬಹುತೇಕ ಕಾಮಗಾರಿ ಮುಗಿಯಲಿದೆ. ಪೈಪ್‌ಲೈನ್ ಮತ್ತಿತರ ಕೆಲಸಗಳು ಹಂತಹಂತವಾಗಿ ನಡೆಯುತ್ತಿದ್ದು, ವಿಳಂಬವಾಗದಂತೆ ಕೆಲಸ ನಿರ್ವಹಿಸಲಾಗುತ್ತಿದೆ.
– ರಾಜಶೇಖರ್, ಎಂಜಿನಿಯರ್, ಕೆಯುಐಡಿಎಫ್ ಸಿ.