Advertisement
ನನೆಗುದಿಗೆ ಬಿದ್ದ ಕಾಮಗಾರಿ2016ರಲ್ಲಿ ನಾಲೂ¤ರು, ಪಾಟಾಳರ ಹಾಡಿ ಸೇರಿದಂತೆ ಸುಮಾರು 5ಕಿ.ಮೀ. ವ್ಯಾಪ್ತಿಯಲ್ಲಿ ಕಾಲುವೆ ಕಾಮಗಾರಿ ನಡೆದು ನನೆಗುದಿಗೆ ಬಿದ್ದಿದೆ, ಕಾಮಗಾರಿ ಪೂರ್ಣಗೊಂಡ ಕಾಲುವೆ ನಡುವೆ ಗಿಡಗಂಟಿಗಳು ಬೆಳೆದು ನಿಂತಿದ್ದು, ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಪ್ರಸ್ತುತ ಅಲ್ಲಲ್ಲಿ ಕಾಲುವೆಯ ಗೋಡೆಗಳು ಕುಸಿದಿದ್ದು , ಕಾಮಗಾರಿ ಗುಣಮಟ್ಟದ ಬಗ್ಗೆ ಸ್ಥಳೀಯರಲ್ಲಿ ತೀವ್ರ ಅಸಮಾಧಾನವಿದೆ ಎಂದು ಮಾಜಿ ಗ್ರಾ.ಪಂ. ಸದಸ್ಯ ಆನಂದ ಮೊಗವೀರ ಹೇಳಿದ್ದಾರೆ.
ಇಲ್ಲಿ ನ ಜನರ ಬಹು ದೊಡ್ಡ ಬೇಡಿಕೆ ನೀರು. ಇಲ್ಲಿನ ಬಹುತೇಕ ಜನರು ಕೃಷಿಯನ್ನು ನಂಬಿರುವ ವರು, ಆದರೆ ಸಮರ್ಪಕ ನೀರಿನ ವ್ಯವಸ್ಥೆ ಇಲ್ಲ, ಬೇಸಗೆಯಲ್ಲಿ ಕುಡಿಯುವುದಕ್ಕೆ ನೀರಿರುವುದಿಲ್ಲ. ಆದರೆ ವಾರಾಹಿ ಮೂಲಕ ನೀರು ಸರಬರಾಜು ಮಾಡುವ ಉಪ ಕಾಲುವೆ ಕಾಮಗಾರಿ ಅರ್ಧಕ್ಕೆ ನಿಂತು ಹಲವು ವರ್ಷ ಕಳೆದಿದೆ, ಕೆಲವು ಭಾಗದಲ್ಲಿ ಮಳೆ ನೀರು ನುಗ್ಗಿ ಕುಸಿದ ಹೋಗಿದೆ. ಮುಖ್ಯ ಕಾಲುವೆ ಸಂಪರ್ಕ ಕಾಮಗಾರಿ ಇನ್ನೂ ಆರಂಭ ಮಾಡಿಲ್ಲ, ಸಂಬಂಧಪಟ್ಟವರು ಈ ಬಗ್ಗೆ ಕೂಡಲೇ ಗಮನ ಹರಿಸಬೇಕು ಎಂದು ಗ್ರಾಮಸ್ಥ ರಾಘವೇಂದ್ರ ಪ್ರಭು ಗುಡ್ಡೆಅಂಗಡಿ ಆಗ್ರಹಿಸಿದ್ದಾರೆ.
Related Articles
Advertisement
ಇದನ್ನೂ ಓದಿ : ಕುಷ್ಟಗಿ : ಹೆಂಡತಿ ಮಕ್ಕಳಿದ್ದರೂ ಈ ಸರಕಾರಿ ನೌಕರ ಮಾತ್ರ ಅನಾಥ
ಬೆಮ್ಮರ್ಕಿ: ಕಾಮಗಾರಿ ಸ್ಥಗಿತಗೊಂಡಲ್ಲಿ ಕಸದ ರಾಶಿಬೆಮ್ಮರ್ಕಿಯ ಪ್ರಮುಖ ಕಾಲುವೆ ಕಾಮಗಾರಿ ಕಳೆದ 5 ವರ್ಷಗಳಿಂದ ಸ್ಥಗಿತಗೊಂಡಿರುವ ಪರಿಣಾಮ ಎಲ್ಲೆಂದರಲ್ಲಿ ಕಸರಾಶಿಗಳನ್ನು ತಂದು ಎಸೆಯಲಾಗಿದ್ದು ಡಂಪಿಂಗ್ ಯಾರ್ಡ್‌ನಂತಾಗಿರುವ ದೃಶ್ಯ. ಬೇಸಗೆಯಲ್ಲಿ ಸಂಕಷ್ಟ
ವಾರಾಹಿ ನದಿಯಿಂದ ಕಾರ್ಕಳ, ಹೆಬ್ರಿ, ಕಾಪುಗೆ ನೀರು ತೆಗೆದುಕೊಂಡು ಹೋಗುವ ಬಗ್ಗೆ ತಯಾರಿ ನಡೆಯತ್ತಿದೆ. ಆದರೆ ಇಲ್ಲೇ ಸ್ಥಳೀಯವಾಗಿ ಯಡಾಡಿ ಮತ್ಯಾಡಿ ಗ್ರಾಮಕ್ಕೆ ಇನ್ನೂ ನೀರು ಹರಿಯದಿರುವುದು ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯವಾಗಿ ದೆ. ಬೇಸಗೆಯಲ್ಲಿ ಇಲ್ಲಿನರೈತರ ಪಾಡು ಹೇಳತೀರದು. ಶೀಘ್ರ ಯೋಜನೆ ಆದರೆ ಕುಡಿಯುವ ನೀರಿಗೆ ಹಾಗೂ ಎರಡನೇ ಬೆಳೆಗೆ, ತೋಟಗಳಿಗೆ ತುಂಬಾ ಪ್ರಯೋಜನಕಾರಿಯಾಗುತ್ತಿತ್ತು.
– ಸತೀಶ ಅಡಿಗ ಮತ್ಯಾಡಿ, ಕೃಷಿಕರು ಬೇಸಗೆಯಲ್ಲಿ ಸಂಕಷ್ಟ
ಈಗಾಗಲೇ ಬೆಮ್ಮರ್ಕಿಯಿಂದ ಡಿಸ್ಟಿಬ್ಯೂಟರ್ ನಂ.29 ಹಾಗೂ 31 ಕಾಲುವೆ ಕಾಮಗಾರಿಯ ಸಂದರ್ಭದಲ್ಲಿ ಬಂಡೆಗಳನ್ನು ಒಡೆಯುವ ಸಂದರ್ಭದಲ್ಲಿ ಆಕ್ಷೇಪಗಳು ಬಂದಿರುವ ಪರಿಣಾಮ ಕಳೆದ ಐದು ವರ್ಷಗಳಿಂದಲೂ ಪ್ರಮುಖ ನಾಲೆಯ ಕಾಮಗಾರಿ ಸ್ಥಗಿತಗೊಂಡಿದೆ. ಪ್ರಸ್ತುತ ಈ ಎರಡು ಕಾಲುಮೆ ಕಾಮಗಾರಿ ಮರು ಟೆಂಡರ್ ಆಗಿದ್ದು, ಎಪ್ರಿಲ್ ತಿಂಗಳಿನಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ. ಈಗಾಗಲೇ ಸಮಸ್ಯೆಗಳಿರುವ ಪ್ರದೇಶಗಳಿಗೆ ತೆರಳಿ ಪರಿಶೀಲನೆ ಮಾಡಲಾಗಿದೆ ,ಮುಂದಿನ ವರ್ಷ ಮೇ ತಿಂಗಳ ಒಳಗೆ ಈ ಎರಡು ಕಾಲುವೆಗಳಲ್ಲಿ ಈ ಗ್ರಾಮೀಣ ಭಾಗಗಳಿಗೆ ನೀರು ಹರಸುವ ಎಲ್ಲ ಪ್ರಯತ್ನ ಮಾಡಲಿದ್ದೇವೆ.
-ಎನ್.ಜಿ.ಭಟ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ – ಟಿ. ಲೋಕೇಶ್ ಆಚಾರ್ಯ ತೆಕ್ಕಟ್ಟೆ