Advertisement

ಇಂದು ವರಮಹಾಲಕ್ಷ್ಮೀ ಪೂಜೆ: ಎಲ್ಲೆಡೆ ಪೂಜಾ ಸಾಮಗ್ರಿ ಖರೀದಿ

03:25 AM Aug 04, 2017 | Karthik A |

ಪುತ್ತೂರು: ಶ್ರಾವಣ ಮಾಸದ ಶುಕ್ಲಪಕ್ಷದ ಶುಕ್ರವಾರ ತಾಲೂಕಿನ ವಿವಿಧ ಭಾಗಗಳಲ್ಲಿ ವರಮಹಾಲಕ್ಷ್ಮೀ ನಡೆಯಲಿರುವ ಹಿನ್ನೆಲೆಯಲ್ಲಿ ಗುರುವಾರ ಅಂಗಡಿ ಮುಂಗಟ್ಟುಗಳಲ್ಲಿ ಗ್ರಾಹಕರು ಅಗತ್ಯ ವಸ್ತು ಗಳು, ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿರುವುದು ಕಂಡುಬಂತು. ಸುಖ, ಶಾಂತಿ, ನೆಮ್ಮದಿ, ಸಂಪತ್ತು ಕರುಣಿಸುವ ನಿಟ್ಟಿನಲ್ಲಿ ಮನೆ ಮತ್ತು ದೇಗುಲ, ಸಭಾಭವನಗಳಲ್ಲಿ ವರ ಮಹಾಲಕ್ಷ್ಮೀ ಪೂಜೆಯಲ್ಲಿ ಮಹಿಳೆಯರು ಹೆಚ್ಚಾಗಿ ಆಚರಿಸುವ ಈ ಹಬ್ಬದಲ್ಲಿ ವ್ರತಚಾರಣೆಯಿಂದ ಸೌಭಾಗ್ಯ ಪ್ರಾಪ್ತಿಯಾಗುವ ನಂಬಿಕೆ ಅಧಿಕ. ವಸ್ತ್ರ ಮಳಿಗೆಗಳು, ಪೂಜಾ ಸಾಮಗ್ರಿಗಳ ಅಂಗಡಿ, ತರಕಾರಿ – ಹಣ್ಣುಗಳ ಅಂಗಡಿ, ಹೂವಿನ ಅಂಗಡಿಗಳಲ್ಲಿ ಮಹಿಳೆಯರು ಖರೀದಿಯಲ್ಲಿ ತೊಡಗಿದ್ದರು.

Advertisement

ಮುಖ್ಯವಾಗಿ ಎಲ್ಲೆಲ್ಲಿ
ಪುತ್ತೂರು ಮಹಾಲಿಂಗೇಶ್ವರ ದೇಗುಲದ ನಟರಾಜ ವೇದಿಕೆ, ಲಕ್ಷ್ಮೀದೇವಿ ಬೆಟ್ಟ, ಬೊಳುವಾರು ಶ್ರೀ ದುರ್ಗಾಪರಮೇಶ್ವರಿ ದೇಗುಲ, ಬೊಳುವಾರು ವಿಶ್ವಕರ್ಮ ಸಭಾಭವನ, ಕಲ್ಲಾರೆ ರಾಘವೇಂದ್ರ ಮಠ, ಸವಣೂರು ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇಗುಲ, ಕೌಡಿಚ್ಚಾರು ಶ್ರೀ ಕೃಷ್ಣ ಭಜನ ಮಂದಿರ, ಕುಂಜೂರು ದುರ್ಗಾಪರಮೇಶ್ವರಿ ದೇಗುಲ, ಪುರುಷರಕಟ್ಟೆ ಗುರು ಪೂರ್ಣಾನಂದ ಮಂದಿರ, ಮಜಲುಮಾರು ಉಮಾ ಮಹೇಶ್ವರ ದೇಗುಲ, ಗೋಳಿತೊಟ್ಟು ಸಿದ್ಧಿ ವಿನಾಯಕ ಭಜನ ಮಂದಿರ, ಕೆಯ್ಯೂರು ಮಹಿಷಾಮರ್ದಿನಿ ದುರ್ಗಾಪರಮೇಶ್ವರಿ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇಗುಲ, ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇಗುಲ ಮೊದಲಾದಡೆ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ನಡೆಯಲಿದೆ.

ತರಕಾರಿ, ಹೂ ಖರೀದಿ
ಸುಳ್ಯ: ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ನಗರದ ಮಾರುಕಟ್ಟೆಗಳಲ್ಲಿ ಹೂ – ತರಕಾರಿ ಖರೀದಿಯಲ್ಲಿ ಜನರು ನಿರತರಾಗಿದ್ದ ದೃಶ್ಯ ಗುರುವಾರ ಕಂಡು ಬಂತು. ದೇಗುಲ, ಸಾರ್ವಜನಿಕ ಸಂಘ – ಸಂಸ್ಥೆಗಳ ಆಶ್ರಯದಲ್ಲಿ ವಿವಿಧ ಭಾಗಗಳಲ್ಲಿ ಈ ಹಬ್ಬ ಆಚರಣೆ ಒಳಪಡುವುದರಿಂದ ಅರ್ಚನೆಗೆ ಹೂ, ತುಳಸಿಗೆ ಬೇಡಿಕೆ ಹೆಚ್ಚಾಗಿತ್ತು. ಸಸ್ಯಹಾರಿ ತಿನಿಸಿಗೆ ಮಹತ್ವ ಇರುವುದರಿಂದ ಧಾರಣೆ ಹೆಚ್ಚಿದ್ದರೂ ಕೊಳ್ಳುವ ಗ್ರಾಹಕರ ಸಂಖ್ಯೆಯಲ್ಲೂ ಏರಿಕೆ ಕಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next