Advertisement

ಪ್ಯಾಂಥರ್‌ ವಿರುದ್ಧ ಟೈಗರ್‌ ಘರ್ಜನೆ

11:53 AM Sep 02, 2017 | Team Udayavani |

ಬೆಂಗಳೂರು: ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಉದ್ಘಾಟನಾ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ ವಿರುದ್ಧ ಹುಬ್ಬಳ್ಳಿ ಟೈಗರ್ 6 ವಿಕೆಟ್‌ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಕೂಟದಲ್ಲಿ ವಿನಯ್‌ ನೇತೃತ್ವದ ಹುಬ್ಬಳ್ಳಿ ತಂಡ ಶುಭಾರಂಭ ಮಾಡಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಬೆಳಗಾವಿ ಪ್ಯಾಂಥರ್ 8 ವಿಕೆಟ್‌ಗೆ 127 ರನ್‌ ಸಾಧಾರಣ ಮೊತ್ತ ಪೇರಿಸಲಷ್ಟೇ ಸಾಧ್ಯವಾಯಿತು. ಇದಕ್ಕೆ ಪ್ರತಿಯಾಗಿ ಹುಬ್ಬಳ್ಳಿ 4ವಿಕೆಟ್‌ಗೆ 128 ರನ್‌ ಗಳಿಸಿ ಜಯ ಸಾಧಿಸಿತು.

Advertisement

ಸಿದ್ಧಾರ್ಥ್ ಅರ್ಧಶತಕ: ಸಾಧಾರಣ ಮೊತ್ತಕ್ಕೆ ಉತ್ತರ ನೀಡಲು ಆರಂಭಿಸಿದ ಹುಬ್ಬಳ್ಳಿ ಟೈಗರ್ ಆರಂಭದಲ್ಲಿ 45 ರನ್‌ಗೆ 3 ವಿಕೆಟ್‌ ಕಳೆದುಕೊಂಡಿತು. ಆದರೆ ಈ ಹಂತದಲ್ಲಿ ಸಿದ್ಧಾರ್ಥ್ (ಅಜೇಯ 61 ರನ್‌) ಬ್ಯಾಟಿಂಗ್‌ ನೆರವಿನಿಂದ 17.5 ಓವರ್‌ಗೆ 128ಕ್ಕೆ 4 ವಿಕೆಟ್‌ ಕಳೆದುಕೊಂಡು ಸುಲಭವಾಗಿ ಜಯ ಸಾಧಿಸಿತು. ಇದಕ್ಕೂ ಮೊದಲು ಬೆಳಗಾವಿ ಬ್ಯಾಟಿಂಗ್‌ ವಿಭಾಗವನ್ನು ವಿನಯ್‌ ಕುಮಾರ್‌ (19ಕ್ಕೆ2), ಅಭಿಷೇಕ್‌ ಸಕುಜಾ (11ಕ್ಕೆ2) ಹಾಗೂ ರಿತೇಶ್‌ ಭಟ್ಕಳ್‌ (12ಕ್ಕೆ2) ವಿಕೆಟ್‌ ಸೇರಿಕೊಂಡು ಮುರಿದಿದ್ದರು.

ಸುನೀಲ್‌ ಏಕಾಂಗಿ ಬ್ಯಾಟಿಂಗ್‌: ಮೀರ್‌ ಕೌನೈನ್‌ ಅಬ್ಟಾಸ್‌ ಜತೆಗೆ ಇನಿಂಗ್ಸ್‌ ಆರಂಭಿಸಿದ ಶರತ್‌ ಬೆಲೂರು ರವಿ ಕೇವಲ 1 ರನ್‌ಗಳಿಸುವಷ್ಟರಲ್ಲಿ ವಿನಯ್‌ ಕುಮಾರ್‌ಗೆ ಎಲ್‌ಬಿ ಆಗಿ ಹೊರ ನಡೆದರು. 2ನೇ ವಿಕೆಟ್‌ಗೆ ಬಂದ ಕೆ.ಗೌತಮ್‌ (15 ರನ್‌)ಕೂಡ ತಂಡದ ಮೊತ್ತ 20 ರನ್‌ ಆಗಿದ್ದಾಗ ವಿಕೆಟ್‌ ಕಳೆದುಕೊಂಡರು. ಅಬ್ಟಾಸ್‌ ಜತೆಗೂಡಿದ ಕೆ.ಎನ್‌ ಭರತ್‌ ತಂಡದ ಮೊತ್ತವನ್ನು ನಿಧಾನವಾಗಿ ಏರಿಸುವ ಪ್ರಯತ್ನ ನಡೆಸಿದರು. ಆದರೆ ತಂಡದ ಮೊತ್ತ 46 ರನ್‌ ಆಗಿದ್ದಾಗ ಅಭಿಷೇಕ್‌ ಎಸೆತದಲ್ಲಿ ಅಬ್ಟಾಸ್‌ ವಿಕೆಟ್‌ ಒಪ್ಪಿಸಿ ಹೊರ ನಡೆದರು. ಆನಂತರ ಕೆ.ಎನ್‌.ಭರತ್‌ ಹಾಗೂ 5ನೇ
ವಿಕೆಟ್‌ಗೆ ಬಂದ ಸ್ಟುವರ್ಟ್‌ ಬಿನ್ನಿ (17 ರನ್‌) ಗೆ ಔಟಾದರು. ಮೇಲಿಂದ ಮೇಲೆ ವಿಕೆಟ್‌ ಬಿದ್ದರೂ ಮಧ್ಯಮ ಕ್ರಮಾಂಕದಲ್ಲಿ ಸುನೀಲ್‌ ಕುಮಾರ್‌ ಜೈನ್‌ (ಅಜೇಯ 39 ರನ್‌) ಭರ್ಜರಿಯಾಗಿ ಬ್ಯಾಟ್‌ ಮಾಡಿದರು.

ಸಂಕ್ಷಿಪ್ತ ಸ್ಕೋರ್‌ : ಬೆಳಗಾವಿ ಪ್ಯಾಂಥರ್ 127/8 (ಸುನೀಲ್‌ ಕುಮಾರ್‌ ಜೈನ್‌ ಅಜೇಯ 39, ಕೆ.ಎನ್‌.ಭರತ್‌ 20, ಅಭಿಷೇಕ್‌ ಸಕುಜಾ 11ಕ್ಕೆ2 ) ಹುಬ್ಬಳ್ಳಿ ಟೈಗರ್ 17.5 ಓವರ್‌ಗೆ 128/4 (ಸಿದ್ಧಾರ್ಥ್ 61, ವಿನಯ್‌ 21, ಸ್ಟುವರ್ಟ್‌ ಬಿನ್ನಿ 25ಕ್ಕೆ2)  ನಟ ಪುನೀತ್‌ರಿಂದ ಅದ್ಧೂರಿ ಚಾಲನೆ
ಕೆಪಿಎಲ್‌ಗೆ ನಟ ಪುನೀತ್‌ ರಾಜ್‌ಕುಮಾರ್‌ ಅದ್ಧೂರಿ ಚಾಲನೆ ನೀಡಿದರು. ಶುಕ್ರವಾರ ನಡೆದ ಉದ್ಘಾಟನೆ ವೇಳೆ ಅವರು ಪ್ರಮುಖ ಆಕರ್ಷಣೆ ಯಾಗಿದ್ದರು. ಉಳಿದಂತೆ ನಟಿ ಶರ್ಮಿಳಾ ಮಾಂಡ್ರೆ ಹಾಗೂ ತಂಡ ಭರ್ಜರಿ ನೃತ್ಯ ಪ್ರದರ್ಶನ ನೀಡಿದರು.  ಇದೇ ವೇಳೆ ಇತರೆ ಸಿನಿಮಾ ತಾರೆಯರು
ಹಾಜರಿದ್ದರು. ಎಲ್ಲ ತಂಡದ ನಾಯಕರು ತಮ್ಮ ತಂಡದ ಲಾಂಛನವಿದ್ದ ಬೋರ್ಡ್‌ ಮೇಲೆ ಸಹಿ ಮಾಡುವ ಮೂಲಕ ಕೂಟಕ್ಕೆ ಮತ್ತಷ್ಟು ಮೆರುಗು ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next