Advertisement
ಪುರುಷರ ಪಂದ್ಯಗಳು ರಾತ್ರಿ 8 ಗಂಟೆಗೆ ನಡೆದರೆ, ಸಂಜೆ 4 ಗಂಟೆ ವನಿತೆಯರ ಪಂದ್ಯಗಳನ್ನಾಡಿಸಲು ಬಿಸಿಸಿಐ ತೀರ್ಮಾನಿಸಿದೆ. ರೌಂಡ್ ರಾಬಿನ್ ರೀತಿಯಲ್ಲಿ ಪಂದ್ಯಗಳು ನಡೆಯಲಿದ್ದು, ಅಗ್ರ 2 ತಂಡಗಳು ಫೈನಲ್ ಪ್ರವೇಶಿಸಲಿವೆ. ಫೈನಲ್ ಕೂಡ ಪುರುಷರ ಫೈನಲ್ಸ್ ದಿನವೇ (ಮೇ 12) ಸಂಜೆ 4 ಗಂಟೆಗೆ ನಡೆಯಲಿದೆ.
ಕಳೆದ ವರ್ಷ ಮುಂಬಯಿನಲ್ಲಿ 2 ತಂಡಗಳ ಪ್ರದರ್ಶನ ಪಂದ್ಯ ಆಯೋಜಿಸಲಾಗಿತ್ತು. ಈ ವರ್ಷ 14 ಆಟಗಾರ್ತಿಯರನ್ನು ಒಳಗೊಂಡ 3 ತಂಡಗಳು ಈ ಪ್ರದರ್ಶನ ಕೂಟದಲ್ಲಿ ಸ್ಪರ್ಧಿಸಲಿವೆ. 6 ದೇಶಗಳ ಆಟಗಾರ್ತಿಯರು ಈ ಬಾರಿಯ ಕೂಟದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. ಕಳೆದ ವರ್ಷ ಕೂಟದಲ್ಲಿ ಭಾಗವಹಿಸಿದ ಅಗ್ರ ಆಟಗಾರ್ತಿಯರಾದ ಡೇನ್ ವಾನ್ ನೀಕರ್ಕ್, ಡಿಯಾಂಡ್ರಾ ಡಾಟಿನ್, ಮರಿಜಾನ್ ಕಾಪ್, ಚಾಮರಿ ಅತ್ತಪಟ್ಟು ಈ ಬಾರಿಯೂ ಪಾಲ್ಗೊಳ್ಳಲಿದ್ದಾರೆ.