Advertisement
ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧ ನಡೆದ 3 ಪಂದ್ಯಗಳ ಏಕದಿನ ಸರಣಿ ಯಲ್ಲಿ 2 ಶತಕ ಬಾರಿಸಿದ್ದು ಚಾಮರಿ ಅತಪಟ್ಟು ಅವರ ರ್‍ಯಾಂಕಿಂಗ್ ಪ್ರಗತಿಗೆ ಮೂಲ. ಮೊದಲ ಪಂದ್ಯದಲ್ಲಿ 83 ಎಸೆತಗಳಿಂದ ಅಜೇಯ 108 ರನ್, ಸೋಮವಾರದ ಅಂತಿಮ ಪಂದ್ಯದಲ್ಲಿ 80 ಎಸೆತಗಳಿಂದ ಅಜೇಯ 140 ರನ್ ಬಾರಿಸಿದ್ದು ಚಾಮರಿ ಸಾಧನೆಯಾ ಗಿದೆ. ಅವರು ಒಟ್ಟು 758 ಅಂಕ ಹೊಂದಿದ್ದಾರೆ. ಮೇ 10ರಿಂದ ಅಗ್ರಸ್ಥಾನದಲ್ಲಿದ್ದ ಆಸ್ಟ್ರೇಲಿಯದ ಬೆತ್ ಮೂನಿ, ಹರ್ಮನ್‌ಪ್ರೀತ್ ಸಿಂಗ್, ಮೆಗ್ ಲ್ಯಾನಿಂಗ್, ಲಾರಾ ವೋಲ್ವಾರ್ಟ್ ಮೊದಲಾದವರನ್ನು ಚಾಮರಿ ಹಿಂದಿಕ್ಕಿದರು.
ಇದೇ ವೇಳೆ ಭಾರತದ ಹರ್ಮನ್‌ಪ್ರೀತ್ ಕೌರ್ ಮತ್ತು ಸ್ಮತಿ ಮಂಧನಾ ಒಂದೊಂದು ಸ್ಥಾನ ಕುಸಿತ ಕಂಡಿದ್ದಾರೆ. ಆಲ್‌ರೌಂಡರ್ ರ್‍ಯಾಂಕಿಂಗ್‌ನಲ್ಲಿ ದೀಪ್ತಿ ಶರ್ಮ ತೃತೀಯ ಸ್ಥಾನ ಕಾಯ್ದು ಕೊಂಡಿ ದ್ದಾರೆ. ಕೌರ್ ಮತ್ತು ಮಂಧನಾ ಕ್ರಮ ವಾಗಿ 6ನೇ, 7ನೇ ಸ್ಥಾನಕ್ಕೆ ಇಳಿದರು.
Related Articles
Advertisement
ಟಿ20 ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಸ್ಮತಿ ಮಂಧನಾ 3ನೇ ಸ್ಥಾನ ಕಾಯ್ದು ಕೊಂಡಿದ್ದಾರೆ (722). ದೀಪ್ತಿ ಶರ್ಮ ಒಂದು ಸ್ಥಾನ ಮೇಲೇರಿದ್ದು, 4ಕ್ಕೆ ಬಂದಿದ್ದಾರೆ (729). ರೇಣುಕಾ ಸಿಂಗ್‌ಗೆ 9ನೇ ಸ್ಥಾನ (700).