Advertisement

Vande Mataram ; ಎಸ್ ಪಿ ಶಾಸಕ ಅಬು ಅಜ್ಮಿ ವಿವಾದಾತ್ಮಕ ಹೇಳಿಕೆ

02:41 PM Jul 19, 2023 | Team Udayavani |

ಮುಂಬಯಿ : ಮಹಾರಾಷ್ಟ್ರ ವಿಧಾನ ಸಭೆಯಲ್ಲಿ ಸಮಾಜವಾದಿ ಪಕ್ಷದ ಶಾಸಕ ಬುಧವಾರ ನೀಡಿದ ಹೇಳಿಕೆ ತೀವ್ರ ಕೋಲಾಹಲಕ್ಕೆ ಕಾರಣವಾಗಿದ್ದು, ಬಿಜೆಪಿ, ಶಿವಸೇನೆ ಸೇರಿ ಶಾಸಕರು ತೀವ್ರ ಆಕ್ರೋಶ ಹೊರಹಾಕಿ ಕ್ಷಮೆ ಯಾಚನೆಗೆ ಪಟ್ಟು ಹಿಡಿದಿದ್ದಾರೆ. ಶಾಸಕ ಅಬು ಅಜ್ಮಿ ”ನಾವು ವಂದೇ ಮಾತರಂ ಹೇಳುವುದಿಲ್ಲ, ನಾವು ಅಲ್ಲಾನಲ್ಲಿ ನಂಬಿಕೆಯುಳ್ಳವರು” ಎಂದು ವಿವಾದಕ್ಕೆ ಕಾರಣವಾದರು.

Advertisement

ಅಧಿವೇಶನದಲ್ಲಿ ಮಾತನಾಡಿದ ಅಬು ಅಜ್ಮಿ ”ಅಫ್ತಾಬ್ ಪೂನಾವಾಲಾ ತಪ್ಪು ಮಾಡಿದ್ದಾರೆ, ಆದರೆ ದೇಶದೆಲ್ಲೆಡೆ ಮುಸ್ಲಿಮರ ವಿರುದ್ಧ ಘೋಷಣೆಗಳನ್ನು ಕೂಗಲಾಗುತ್ತಿದೆ. ಹಿಂದೂ ಪರ ಸಂಘಟನೆಗಳು ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ರ‍್ಯಾಲಿ ನಡೆಸಿ ಮುಸ್ಲಿಮರಿಗೆ ತೀವ್ರ ಅವಮಾನ ಮಾಡಿದ್ದಾರೆ” ಎಂದರು.

”ಔರಂಗಾಬಾದ್ ನ ರಾಮ ಮಂದಿರದ ಬಳಿ ಈ ದೇಶದಲ್ಲಿ ನೀವು ಉಳಿಯಬೇಕಾದರೆ ವಂದೇ ಮಾತರಂ ಹೇಳಬೇಕು ಎಂದು ಮೂವರು ಘೋಷಣೆಗಳನ್ನು ಕೂಗಿದ್ದಾರೆ. ನಾವು ಅಲ್ಲಾ ನಲ್ಲಿ ನಂಬಿಕೆ ಉಳ್ಳವರು. ಅಲ್ಲಾಹು ಹೊರತು ಪಡಿಸಿ ಬೇರೆಯವರಿಗೆ ತಲೆ ಬಾಗುವುದಿಲ್ಲ” ಎಂದರು.

ಡಿಸಿಎಂ ದೇವೇಂದ್ರ ಫಡ್ನವಿಸ್ ಮಾತನಾಡಿ” ಈ ದೇಶದಲ್ಲಿ ಕೋಟ್ಯಂತರ ಮಂದಿ ವಂದೇ ಮಾತರಂ ರೇ ಗೌರವ ನೀಡುತ್ತಾರೆ. ಯಾವುದೇ ಧರ್ಮ ತಾಯಿಯನ್ನು ನಿಂದಿಸಲು ಹೇಳುವುದಿಲ್ಲ. ವಂದೇ ಮಾತರಂ ಧಾರ್ಮಿಕ ಗೀತೆಯಲ್ಲ. ದೇಶ ಭಕ್ತಿ ಗೀತೆ” ಎಂದು ತಿರುಗೇಟು ನೀಡಿದರು. ಬಿಜೆಪಿ ಮತ್ತು ಶಿವಸೇನೆ ಶಾಸಕರು ಅಜ್ಮಿ ಹೇಳಿಕೆಗೆ ವ್ಯಾಪಕ ಆಕ್ರೋಶ ಹೊರ ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next