Advertisement

ಭಾರತೀಯ ರೈಲ್ವೇಯ ವಂದೇ ಮಾತರಂ ಯೋಜನೆ : ಲಾತೂರ್‌ನಲ್ಲಿ 100 ರೈಲು ನಿರ್ಮಾಣ

10:50 AM Oct 05, 2022 | Team Udayavani |

ಮುಂಬಯಿ : ಭಾರತೀಯ ರೈಲ್ವೇ ಮುಂದಿನ ಕೆಲವು ವರ್ಷಗಳಲ್ಲಿ ದೇಶಾದ್ಯಂತ 400 ವಂದೇ ಭಾರತ್‌ ರೈಲುಗಳನ್ನು ಪರಿಚಯಿಸಲಿದ್ದು, ಅದರಲ್ಲಿ 100 ರೈಲುಗಳು ಮಹಾರಾಷ್ಟ್ರದ ಲಾತೂರ್‌ನಲ್ಲಿರುವ ರೈಲ್‌ ಕೋಚ್‌ ಫ್ಯಾಕ್ಟರಿಯಲ್ಲಿ ನಿರ್ಮಾಣಗೊಳ್ಳಲಿದೆ.

Advertisement

ಕೇಂದ್ರ ರೈಲ್ವೇ ಸಚಿವ ಅಶ್ವಿ‌ನಿ ವೈಷ್ಣವ್‌ ಅವರು ಔರಂಗಾಬಾದ್‌ನಲ್ಲಿ ರೈಲ್ವೇ ನಿಲ್ದಾಣದಲ್ಲಿ ಕೋಚ್‌ ನಿರ್ವಹಣ ಸೌಲಭ್ಯಕ್ಕೆ ಶಂಕುಸ್ಥಾಪನೆ ಸಮಾರಂಭದಲ್ಲಿ ಇದನ್ನು ಘೋಷಿಸಿದರು. ಔರಂಗಾಬಾದ್‌ ನಿಲ್ದಾಣದಲ್ಲಿನ ನಿರ್ವಹಣ ಸೌಲಭ್ಯವು ರೈಲುಗಳ ನಿರ್ವಹಣೆಯನ್ನು ಸುಗಮ ಗೊಳಿಸುವುದಲ್ಲದೆ ಹೆಚ್ಚಿನ ಪ್ರಯಾಣಿಕರ ಮತ್ತು ಪಾರ್ಸೆಲ್‌ ರೈಲುಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮರಾಠವಾಡ ಪ್ರದೇಶದ ಜನರಿಗೆ ರೈಲು ಸಂಪರ್ಕವನ್ನು ಬಲಪಡಿಸುತ್ತದೆ ಮತ್ತು ಸರಕು ಸಾಗಣೆ ಗ್ರಾಹಕರಿಗೆ ಪ್ರಯೋಜನವನ್ನು ನೀಡುತ್ತದೆ. ಹೊಸ ಪಿಟ್‌ಲೆàನ್‌ ವಂದೇ ಭಾರತ್‌ ರೈಲುಗಳ ನಿಗದಿತ ನಿರ್ವಹಣೆಗೆ ಅನುಕೂಲವಾಗಬಹುದು ಎಂದು ವೈಷ್ಣವ್‌ ಹೇಳಿದ್ದಾರೆ.

ಮರಾಠವಾಡ ರೈಲ್‌ ಕೋಚ್‌ ಫ್ಯಾಕ್ಟರಿಯು ಆಧುನಿಕ ಕೈಗಾರಿಕಾ ಪರಿಸರ ವ್ಯವಸ್ಥೆಯನ್ನು ಘೋಷಿಸುವ ಮೂಲಕ ಮಹಾರಾಷ್ಟ್ರದ ಒಟ್ಟಾರೆ ಅಭಿವೃದ್ಧಿಗೆ ಗಣನೀಯವಾಗಿ ಕೊಡುಗೆ ನೀಡಲಿದೆ ಎಂದು ರೈಲ್ವೇ ಅಧಿಕಾರಿಯೊಬ್ಬರು ಹೇಳಿದರು. ಕಾರ್ಖಾನೆಯನ್ನು 250 ಎಂವಿಎಂಯು ತಯಾ ರಿಕೆಯ ಆರಂಭಿಕ ಸಾಮರ್ಥ್ಯದೊಂದಿಗೆ ವಿನ್ಯಾಸ ಗೊಳಿಸಲಾಗುವುದು. ಲೇಔಟ್‌ ಯೋಜನೆಯಲ್ಲಿ ಸಾಕಷ್ಟು ಖಾಲಿ ಜಾಗವನ್ನು ಗುರುತಿಸಿರುವುದರಿಂದ ಅದರ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ.

ಕಾರ್ಖಾನೆಯು 350 ಎಕರೆ ಪ್ರದೇಶದಲ್ಲಿ 52,000 ಚದರ ಮೀಟರ್‌ಗಳಲ್ಲಿ ನಿರ್ಮಾಣಗೊಳ್ಳಲಿದ್ದು, ಪೂರ್ವ ಎಂಜಿನಿಯರಿಂಗ್‌ ಕಟ್ಟಡದ ಶೆಡ್‌ಗಳು, ಮೂರು ರೈಲು ಮಾರ್ಗಗಳೊಂದಿಗೆ ಯಾರ್ಡ್‌, ವಸತಿ ಕಾಲನಿ ಸಹಿತ ಸರ್ವ ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ರಾವಾÕಹೇಬ್‌ ಪಾಟೀಲ್‌ ದಾನ್ವೆ ಹೇಳಿದ್ದಾರೆ.

ಇದನ್ನೂ ಓದಿ : ಶಿವಸೇನೆಯ ಎರಡು ಬಣಗಳ ಮೇಲಾಟ : ಇಂದು ಎರಡು ಪ್ರತ್ಯೇಕ ದಸರಾ ರ್‍ಯಾಲಿ, ಪೊಲೀಸ್‌ ಸರ್ಪಗಾವಲು

Advertisement
Advertisement

Udayavani is now on Telegram. Click here to join our channel and stay updated with the latest news.

Next