Advertisement

ವಂದೇ ಮಾತರಂ ಅಸೋಸಿಯೇಶನ್‌: ಪ್ಲಾಸ್ಮಾ ಪ್ರೀಮಿಯರ್‌ ಲೀಗ್‌ ಸ್ಪರ್ಧೆ

12:46 PM Apr 24, 2021 | Team Udayavani |

ಪುಣೆ: ರಾಜ್ಯದಲ್ಲಿ ಕೊರೊನಾ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರ ಮಧ್ಯೆ ಪ್ಲಾಸ್ಮಾ ಕೊರತೆ ಎದುರಾಗಿದ್ದು, ಪುಣೆಯ ಸರಕಾರೇತರ ಸಂಸ್ಥೆಯು ಪ್ಲಾಸ್ಮಾ ದಾನಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ಲಾಸ್ಮಾ ಪ್ರೀಮಿಯರ್‌ ಲೀಗ್‌ ಸ್ಪರ್ಧೆಯನ್ನು ಆಯೋಜಿಸಿದೆ.

Advertisement

ಕೊರೊನಾ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪ್ಲಾಸ್ಮಾ ದಾನಕ್ಕಾಗಿ ನಾಗರಿಕರು ಸ್ವತಃ ಮುಂದೆ ಬರಬೇಕಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಪ್ಲಾಸ್ಮಾ ದಾನಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ಗಮನಿಸಿದ ಅಖೀಲ ಸದಾಶಿವ್‌ ಶನಿವಾರ್‌ ನಾರಾಯಣ್‌ ಪೇಟೆಯ ಅಂಬೇಡ್ಕರ್‌ ಜಯಂತಿ ಮಹೋತ್ಸವ ಸಮಿತಿ ಮತ್ತು ಯುವ ಫೀನಿಕ್ಸ್‌ ಸೊಸೈಟಿಯು ವಂದೇ ಮಾತರಂ ಸಂಘಟನೆಯೊಂದಿಗೆ ಈ ಸ್ಪರ್ಧೆಯನ್ನು ಆಯೋಜಿಸಿದೆ.

ರಾಜ್ಯದ ಯಾವುದೇ ನೋಂದಾಯಿತ ಗಣೇಶ ಮಂಡಲಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧೆಯು ಎ. 14ರಂದು ಆರಂಭಗೊಂಡಿದ್ದು, ಮೇ 15ರ ವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಕೊರೊನಾ ಗೆದ್ದ ಜನರನ್ನು ಹೆಚ್ಚು ಪ್ಲಾಸ್ಮಾ ದಾನ ಮಾಡಲು ಪ್ರೋತ್ಸಾಹಿಸಬಹುದು.

ಈ ವರೆಗೆ ಪುಣೆ, ಸತಾರಾ, ಥಾಣೆ, ಪಿಂಪ್ರಿ-ಚಿಂಚಾÌಡ್‌, ಅಕುರ್ಡಿ ಮತ್ತು ನಿಗಿx, ನಾಸಿಕ್‌, ಜಲ್ಗಾಂವ್‌ನ ಮಂಡಳಿಗಳು ಮತ್ತು ಸಂಸ್ಥೆಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸಿಕೊಂಡಿವೆ.

ಸ್ಪರ್ಧೆಯ ಮುಖ್ಯ ಉದ್ದೇಶ ಬಹುಮಾನಗಳನ್ನು ಗೆಲ್ಲುವುದು ಅಲ್ಲ, ಪ್ಲಾಸ್ಮಾ ದಾನದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಪ್ಲಾಸ್ಮಾ ದಾನ ಹೆಚ್ಚಿಸುವುದಾಗಿದೆ. ಸ್ಪರ್ಧೆಯಲ್ಲಿ ಅತೀ ಹೆಚ್ಚು ಪ್ಲಾಸ್ಮಾ ದಾನಿಗಳನ್ನು ನೋಂದಾಯಿಸಲ್ಪಡುವ ತಂಡಗಳಿಗೆ ಪ್ರಥಮ ಬಹುಮಾನ 50,000 ರೂ. ಮತ್ತು ಟ್ರೋಫಿ, ದ್ವಿತೀಯ 30,000 ರೂ. ಮತ್ತು ಟ್ರೋಫಿ ಮತ್ತು ತೃತೀಯ 20,000 ರೂ. ಮತ್ತು ಟ್ರೋಫಿ ಹಾಗೂ ಭಾಗವಹಿಸುವ ಎಲ್ಲ ತಂಡಗಳಿಗೆ ವಿಶೇಷ ಬಹುಮಾನ ನೀಡಲಾಗುವುದು.

Advertisement

ಕಳೆದ ವರ್ಷದಿಂದ ಕೊರೊನಾ ಅವಧಿಯಲ್ಲಿ ಪ್ರಮುಖ ಸಾಮಾಜಿಕ ಕಾರ್ಯಗಳನ್ನು ನಿರ್ವಹಿಸುತ್ತಿದ್ದು, ಆಹಾರ ಪ್ಯಾಕೆಟ್‌ಗಳನ್ನು ವಿತರಣೆ, ರೋಗಿಗಳಿಗೆ ಸಹಾಯ, ಬಡವರಿಗೆ ಅಗತ್ಯ ವಸ್ತುಗಳ ಪೂರೈಕೆ, ರಕ್ತದಾನ ಇನ್ನಿತರ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಪುಣೆಯ ವಂದೇ ಮಾತರಂ ಅಸೋಸಿಯೇಶನ್‌ ಈ ಉಪಕ್ರಮವನ್ನು ಪ್ರಾರಂಭಿಸಿತು.

ಸಂಸ್ಥೆಯು ಪ್ಲಾಸ್ಮಾ ಸ್ಟ್ರೆ çಕ್‌ ಎಂಬ ಸಂಘಟನೆಯನ್ನು ಪ್ರಾರಂಭಿಸಿ ಪುಣೆ ಮಹಾನಗರ ಪಾಲಿಕೆಯಿಂದ ಕೊರೊನಾ ಪೀಡಿತ 80 ಸಾವಿರ ರೋಗಿಗಳ ಮಾಹಿತಿಯನ್ನು ಪಡೆದುಕೊಂಡಿರೆ.45 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕೊರೊನಾ ಪೀಡಿತರ ಹೆಸರನ್ನು ಪಟ್ಟಿಯಿಂದ ಕೈಬಿಡುವಂತೆ ಕಾರ್ಯಕರ್ತರಿಗೆ ಸೂಚಿಸಲಾಗಿದೆ.

ಇತರರನ್ನು ಸಂಘಟನೆಯ ಕಾರ್ಯಕರ್ತರು ಕರೆದು ಪ್ಲಾಸ್ಮಾ ದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ವಿನಂತಿಸುತ್ತಿದ್ದಾರೆ. ಈ ಚಟುವಟಿಕೆ ಪುಣೆ ನಗರಕ್ಕೆ ಸೀಮಿತವಾಗಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಲು 9890798903 ನಂಬರ್‌ ಅನ್ನು ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next