Advertisement

16ರಿಂದ 2ನೇ ಏರ್‌ಲಿಫ್ಟ್ ; 31 ದೇಶಗಳತ್ತ 149 ‘ವಂದೇ ಭಾರತ್‌’ವಿಮಾನಗಳ ಸಂಚಾರ

09:04 PM May 13, 2020 | Hari Prasad |

ನವದೆಹಲಿ: ನಿಂತ ನೆಲ, ದೇಶದಲ್ಲೇ ಅತಂತ್ರರಾಗಿದ್ದ ಅನಿವಾಸಿ ಭಾರತೀಯರನ್ನು ಕರೆತರಲು ಎರಡನೇ ಮೆಗಾ ಏರ್‌ಲಿಫ್ಟ್ ಸಜ್ಜಾಗಿದೆ.

Advertisement

ವಂದೇ ಭಾರತ್‌ನ ಈ ಮುಂದುವರಿದ ಕಾರ್ಯಾಚರಣೆ, ಮೇ 16- 22ರವರೆಗೆ ನಡೆಯಲಿದ್ದು, 31 ದೇಶಗಳ ಭಾರತೀಯರು ಈ ಪ್ರಯೋಜನ ಪಡೆಯಲಿದ್ದಾರೆ.

ಹೌದು, ಇದು ಮೊದಲ ಹಂತದ ಏರ್‌ಲಿಫ್ಟ್ ಗಿಂತ ದೊಡ್ಡ ಕಾರ್ಯಾಚರಣೆ. ಮೊದಲ ಹಂತದಲ್ಲಿ 64 ವಿಶೇಷ ವಿಮಾನಗಳಷ್ಟೇ ಬಳಕೆಯಾಗುತ್ತಿವೆ.

ಆದರೆ, 2ನೇ ಹಂತದಲ್ಲಿ ಬರೋಬ್ಬರಿ 149 ವಿಮಾನಗಳು ಹಾರಾಡಲಿವೆ. ಈಗಾಗಲೇ ಮೊದಲ ಹಂತದಲ್ಲಿ 6,097 ಅನಿವಾಸಿ ಭಾರತೀಯರು ಭಾರತ ತಲುಪಿದ್ದು, ಮೇ 15ರ ಒಳಗಾಗಿ ಇನ್ನೂ 9 ಸಾವಿರ ಮಂದಿ ತಾಯ್ನಾಡಿಗೆ ಮರಳುವ ನಿರೀಕ್ಷೆಯಿದೆ.

2ನೇ ಏರ್‌ಲಿಫ್ಟ್ ಎಲ್ಲೆಲ್ಲಿಂದ?: 2ನೇ ಏರ್‌ಲಿಫ್ಟ್ ನಲ್ಲಿ ಹೆಚ್ಚು ವಿಮಾನಗಳು ಅಮೆರಿಕದತ್ತ ಹಾರಾಡಲಿವೆ. ಯುಎಸ್‌- 13, ಯುಎಇ- 11, ಕೆನಡಾ- 10, ಇಂಗ್ಲೆಂಡ್‌- 9, ಆಸ್ಟ್ರೇಲಿಯಾ- 7 ಹಾಗೂ ರಷ್ಯಾದಲ್ಲಿ 6 “ವಂದೇಭಾರತ್‌’ನ ವಿಶೇಷ ವಿಮಾನಗಳು ಇಳಿಯಲಿವೆ.

Advertisement

ಉಳಿದಂತೆ, ಫ್ರಾನ್ಸ್‌, ಇಟಲಿ, ಜರ್ಮನಿ, ಐರ್ಲೆಂಡ್‌, ಆಗ್ನೇಯಾ ಏಷ್ಯಾ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರನ್ನೂ 2ನೇ ಏರ್‌ಲಿಫ್ಟ್ ಕೈಹಿಡಿಯಲಿದೆ. ನೆರೆ ರಾಷ್ಟ್ರಗಳಾದ ಬಾಂಗ್ಲಾದೇಶ, ನೇಪಾಳಗಳತ್ತಲೂ ತಲಾ ಒಂದೊಂದು ವಿಮಾನ ಹಾರಲಿದೆ.

ಸರ್ಕಾರದ ಗುರಿಯೇನು? ಭಾರತ ಕೈಗೊಂಡಿರುವ ಜಲ ಮತ್ತು ವಾಯು ಮಾರ್ಗ ಮೂಲಕ ಸ್ಥಳಾಂತರ ಯೋಜನೆಯು ಮೇ ಮಧ್ಯಭಾಗದ ಒಳಗಾಗಿಯೇ 2 ಲಕ್ಷ ಜನರನ್ನು ಕರೆತರುವ ಗುರಿ ಹೊಂದಿದೆ. ಜೂನ್‌ ಮಧ್ಯಭಾಗದಲ್ಲಿ ಅಂದಾಜು 3.5 – 4 ಲಕ್ಷ ಭಾರತೀಯ ಪ್ರಜೆಗಳನ್ನು ಕರೆತರುವ ಬೃಹತ್‌ ಗುರಿ, ಕೇಂದ್ರ ಸರ್ಕಾರದ ಮುಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next