Advertisement

Vande Bharat: 2024ರ ಆರಂಭದಲ್ಲಿ ವಂದೇ ಭಾರತ್‌ ಮೆಟ್ರೋ ಸಂಚಾರ

12:21 AM Oct 19, 2023 | Team Udayavani |

ಹೊಸದಿಲ್ಲಿ: 2024ರ ಆರಂಭದಲ್ಲಿ ವಂದೇ ಭಾರತ್‌ ಮೆಟ್ರೋರೈಲುಗಳ ಸಂಚಾರ ಆರಂಭವಾಗಲಿದೆ. ಕಡಿಮೆ ಅಂತರದ ಪ್ರಯಾಣಕ್ಕಾಗಿ ವೇಗದ, ಸಂಪೂರ್ಣ ವಾಯುನಿ ಯಂತ್ರಿತ ವಂದೇ ಭಾರತ್‌ ಮೆಟ್ರೋ ರೈಲುಗಳನ್ನು ಪರಿಚಯಿ ಸಲಾಗುತ್ತಿದೆ. ಇದರ ಗರಿಷ್ಠ ವೇಗ ಗಂಟೆಗೆ 130 ಕಿ.ಮೀ. ಇರಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

“300 ಕಿ.ಮೀ. ವರೆಗಿನ ದೂರದ ಪ್ರಯಾಣಕ್ಕಾಗಿ ವಂದೇ ಮೆಟ್ರೋರೈಲುಗಳನ್ನು ವಿನ್ಯಾಸಗೊಳಿಸಲಾಗಿದೆ. ಭವಿಷ್ಯದಲ್ಲಿ ಇದು ಮೇನ್‌ಲೈನ್‌ ಇಎಂಯು(ಎಲೆಕ್ಟ್ರಿಕಲ್‌ ಮಲ್ಟಿಪಲ್‌ ಯುನಿಟ್‌) ರೈಲುಗಳ ಪರ್ಯಾ ಯವಾ ಗಲಿದೆ. ಮೊದಲ ವಂದೇ ಭಾರತ್‌ ಮೆಟ್ರೋರೈಲಿನ ತಯಾರಿಕೆ ಕಾರ್ಯವು ಚೆನ್ನೈನ ರೈಲ್ವೆ ಇಂಟಿಗ್ರೇಟೆಡ್‌ ಕೋಚ್‌ ಫ್ಯಾಕ್ಟರಿ(ಐಸಿಎಫ್)ಯಲ್ಲಿ ನಡೆಯು ತ್ತಿದೆ’ ಎಂದು ಐಸಿಎಫ್ ಪ್ರಧಾನ ವ್ಯವಸ್ಥಾಪಕ ಬಿ.ಜಿ.ಮಲ್ಯ ತಿಳಿಸಿದ್ದಾರೆ.

“ವಂದೇ ಭಾರತ್‌ ಮೆಟ್ರೋರೈಲುಗಳ ಪ್ರತಿ ಕೋಚ್‌ನಲ್ಲಿ ಪ್ರಯಾ ಣಿಕರು ಕುಳಿತುಕೊಳ್ಳಲು 100 ಆಸನಗಳು ಇರಲಿದ್ದು, 200 ಮಂದಿ ಪ್ರಯಾಣಿಕರು ನಿಂತು ಪ್ರಯಾಣಿಸಲು ಸ್ಥಳಾವಕಾಶ ಇರಲಿದೆ. ಸಿಸಿಟಿವಿ ಕ್ಯಾಮೆರಾಗಳು, ಎಲ್‌ಸಿಡಿ ಡಿಸ್ಪೇ, ಹವಾ ನಿಯಂತ್ರಿತ ವ್ಯವಸ್ಥೆ, ಮಾಡ್ನೂಲರ್‌ ಶೌಚಾಲಯ, ಮೊಬೈಲ್‌ ಚಾರ್ಜಿಂಗ್‌ ಸಾಕೆಟ್‌ ಸೇರಿ ಅತ್ಯಾಧುನಿಕ ಸೌಲಭ್ಯ ಹೊಂದಿರಲಿದೆ’ ಎಂದು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next