Advertisement

Modi ಪದಗ್ರಹಣ ಕಾರ್ಯಕ್ರಮಕ್ಕೆ ವಂದೇ ಭಾರತ್ ಲೋಕೋ ಪೈಲಟ್ ಐಶ್ವರ್ಯ ಮೆನನ್ ಗೆ ಆಹ್ವಾನ

09:59 AM Jun 08, 2024 | Team Udayavani |

ಹೊಸದಿಲ್ಲಿ: ಭಾನುವಾರ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ನೂತನ ಸರಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ 8,000 ವಿಶೇಷ ಅತಿಥಿಗಳಲ್ಲಿ ದಕ್ಷಿಣ ರೈಲ್ವೇಯ ಚೆನ್ನೈ ವಿಭಾಗದ ಹಿರಿಯ ಸಹಾಯಕ ಲೋಕೋ ಪೈಲಟ್ ಐಶ್ವರ್ಯ ಎಸ್ ಮೆನನ್ ಕೂಡ ಇರಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಪ್ರಸ್ತುತ ವಂದೇ ಭಾರತ್ ರೈಲುಗಳಲ್ಲಿ ಕೆಲಸ ಮಾಡುತ್ತಿರುವ ಶ್ರೀಮತಿ ಮೆನನ್ ಅವರು ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಜನ ಶತಾಬ್ದಿಯಂತಹ ವಿವಿಧ ರೈಲುಗಳನ್ನು ಪ್ರಾಯೋಗಿಕವಾಗಿ 2 ಲಕ್ಷಕ್ಕೂ ಹೆಚ್ಚು ಫುಟ್‌ಪ್ಲೇಟ್ ಗಂಟೆಗಳನ್ನು ಪೂರ್ಣಗೊಳಿಸಿದ್ದಾರೆ.

ಅವರು ಚೆನ್ನೈ- ವಿಜಯವಾಡ, ಚೆನ್ನೈ – ಕೊಯಮ್ಮತ್ತೂರು ವಂದೇ ಭಾರತ್ ಎಕ್ಸ್ ಪ್ರೆಸ್ ಗಳು ಆರಂಭವಾಗಿದ್ದರಿಂದ ಅದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ರವಿವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ನರೇಂದ್ರ ಮೋದಿ ಅವರು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಐಶ್ವರ್ಯ ಮೆನನ್ ಭಾಗಿಯಾಗಲಿದ್ದಾರೆ.

ಏಷ್ಯಾದ ಮೊದಲ ಮಹಿಳಾ ಲೋಕೋ ಪೈಲಟ್ ಭಾಗಿ

Advertisement

ಏಷ್ಯಾದ ಮೊದಲ ಮಹಿಳಾ ಲೋಕೋ ಪೈಲಟ್ ಸುರೇಖಾ ಯಾದವ್ ಅವರು ಕೂಡಾ ಪ್ರಮಾಣ ವಹಚ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್-ಸೋಲಾಪುರದಿಂದ ವಂದೇ ಭಾರತ್ ರೈಲನ್ನು ಪೈಲಟ್ ಮಾಡುತ್ತಿರುವ ಸುರೇಖಾ ಯಾದವ್, ಸಮಾರಂಭಕ್ಕೆ ಆಹ್ವಾನಿಸಲಾದ ಹತ್ತು ಲೋಕೋ ಪೈಲಟ್‌ ಗಳಲ್ಲಿ ಸೇರಿದ್ದಾರೆ ಎಂದು ವರದಿಯಾಗಿದೆ.

ಅವರು 1988ರಲ್ಲಿ ಏಷ್ಯಾದ ಮೊದಲ ಮಹಿಳಾ ಲೋಕೋ ಪೈಲಟ್ ಎಂಬ ಖ್ಯಾತಿಗೆ ಭಾಜರಾದರು. ಅವರು ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್ ಪ್ರೆಸ್ ನ ಮೊದಲ ಮಹಿಳಾ ಲೋಕೋ ಪೈಲಟ್ ಕೂಡಾ ಹೌದು.

ನೈರ್ಮಲ್ಯ ಕಾರ್ಯಕರ್ತರು, ತೃತೀಯ ಲಿಂಗಿಗಳು ಮತ್ತು ಸೆಂಟ್ರಲ್ ವಿಸ್ಟಾ ಯೋಜನೆಯಲ್ಲಿ ಕೆಲಸ ಮಾಡಿದ ಕಾರ್ಮಿಕರು ಹೊಸ ಸರ್ಕಾರದ ಪ್ರಮಾಣ ವಚನ ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿರುತ್ತಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next