Advertisement

ಲೋಕಾರ್ಪಣೆಗೊಂಡು ವಾರದ ಒಳಗೆ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹಾನಿ

05:35 PM Oct 06, 2022 | Team Udayavani |

ಗಾಂಧಿನಗರ : ಸೆಪ್ಟೆಂಬರ್ 30 ರಂದು ಲೋಕಾರ್ಪಣೆ ಗೊಳಿಸಲಾಗಿದ್ದ ಮುಂಬಯಿ ಸೆಂಟ್ರಲ್-ಗಾಂಧಿನಗರ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಸಣ್ಣ ಪ್ರಮಾಣದ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ರೈಲ್ರೋಡ್ ವಕ್ತಾರರ ಪ್ರಕಾರ, ಗೈರತ್‌ಪುರ ಮತ್ತು ವತ್ವಾ ನಿಲ್ದಾಣಗಳ ನಡುವೆ ಗುರುವಾರ ಬೆಳಗ್ಗೆ 11.20ರ ಸುಮಾರಿಗೆ ಈ ಘಟನೆ ನಡೆದಿದೆ. ಎಮ್ಮೆಗಳ ಹಿಂಡು ಢಿಕ್ಕಿಯಾದ ನಂತರ, ಇಂಜಿನ್ ನ ಮುಂಭಾಗಕ್ಕೆ ಹಾನಿಯಾಗಿದೆ.

“ಮೂರರಿಂದ ನಾಲ್ಕು ಎಮ್ಮೆಗಳು ಮುಂಬಯಿ -ಗಾಂಧಿನಗರದ ವಂದೇ ಭಾರತ್ ದಾರಿಯಲ್ಲಿ ಇದ್ದಕ್ಕಿದ್ದಂತೆ ಬಂದ ಕಾರಣ , ಎಫ್‌ಆರ್‌ಪಿ (ಫೈಬರ್-ರೀನ್‌ಫೋರ್ಸ್ಡ್ ಪ್ಲಾಸ್ಟಿಕ್) ನಿಂದ ಮಾಡಲ್ಪಟ್ಟ ಮುಂಭಾಗ ಹಾನಿಗೊಳಗಾಗಿದೆ.

ಮಹಾರಾಷ್ಟ್ರ ಮತ್ತು ಗುಜರಾತ್‌ನ ರಾಜಧಾನಿ ನಗರಗಳನ್ನು ಸಂಪರ್ಕಿಸುವ ಈ ರೈಲು ದೇಶದ ಮೂರನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಿದೆ. ಮೊದಲ ರೈಲು ಹೊಸದಿಲ್ಲಿ-ವಾರಣಾಸಿ ಮಾರ್ಗದಲ್ಲಿ, ಹೊಸದಿಲ್ಲಿ-ಶ್ರೀ ಮಾತಾ ವೈಷ್ಣೋದೇವಿ ಕತ್ರಾ ಮಾರ್ಗದಲ್ಲಿ ಪ್ರಾರಂಭವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next