Advertisement
ಕಾಮಗಾರಿಗಳು ನಾಲ್ಕೈದು ತಿಂಗಳುಗಳಲ್ಲಿ ಪೂರ್ಣಗೊಂಡು, ಇನ್ನಾರು ತಿಂಗಳಲ್ಲಿ ಮಂಗಳೂರಿಗೆ ವಂದೇ ಭಾರತ್ ರೈಲು ಬರುವ ಲಕ್ಷಣಗಳು ಇವೆ.
Related Articles
ಒಂದೆಡೆ ದಕ್ಷಿಣ ರೈಲ್ವೇ ಮಂಗಳೂರು ಸೆಂಟ್ರಲ್‌ನಲ್ಲಿ ಪೂರಕ ಕಾಮಗಾರಿ ಕೈಗೊಳ್ಳುತ್ತಿರುವಂತೆಯೇ ಕೇರಳದ ಸಚಿವ ವಿ. ಮುರಳೀಧರನ್ ಅವರ ಒತ್ತಾಸೆಯ ಮೇರೆಗೆ ಕಲ್ಲಿಕೋಟೆ- ಕಣ್ಣೂರು ವಂದೇ ಭಾರತ್ ರೈಲನ್ನು ಕಾಸರ ಗೋಡು ವರೆಗೆ ವಿಸ್ತರಿಸಲು ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಆದೇಶಿಸಿದ್ದಾರೆ. ಅದನ್ನು ಮಂಗಳೂರು ಸೆಂಟ್ರಲ್ ವರೆಗೆ ವಿಸ್ತರಿಸಬೇಕು ಎನ್ನುವುದು ಕೇರಳದ ಜನಪ್ರತಿನಿಧಿಗಳ ಒತ್ತಾಸೆ.
Advertisement
ಆದರೆ ಇದರಿಂದ ಕನ್ನಡಿಗ ರಿಗೆ ಪ್ರಯೋಜನವಿಲ್ಲ, ಮಂಗಳೂರು- ಮುಂಬಯಿ ಮಧ್ಯೆ ವಂದೇ ಭಾರತ್ ರೈಲು ಆರಂಭಿಸಲು ಒತ್ತಾಯಿಸಲಾ ಗುತ್ತಿದೆ ಎನ್ನುತ್ತಾರೆ ಪಶ್ಚಿಮ ರೈಲ್ವೇ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹನುಮಂತ ಕಾಮತ್.
ಮಂಗಳೂರಿನಲ್ಲಿ ನಿರ್ಮಾಣವಾ ಗುತ್ತಿರುವ ಹೆಚ್ಚುವರಿ ಪ್ಲಾಟ್‌ಫಾರಂಗಳನ್ನು ಮುಂಬಯಿ ಹಾಗೂ ಬೆಂಗಳೂರಿನ ಕಡೆಗಿನ ರೈಲುಗಳಿಗೆ ಬಳಕೆ ಮಾಡಿದರೆ ಮಾತ್ರ ಇಲ್ಲಿನ ಜನರಿಗೆ ಉಪಯೋಗ. ಇಲ್ಲವಾದರೆ ಕೇರಳ, ತಮಿಳುನಾಡಿ ನವರಿಗಷ್ಟೇ ಪ್ರಯೋಜನ. ವಿಜಯಪುರ- ಮಂಗಳೂರು ಜಂಕ್ಷನ್ ರೈಲನ್ನು ಸೆಂಟ್ರಲ್‌ಗೆ ವಿಸ್ತರಿಸಬೇಕು, ಗುಲ್ಬರ್ಗ, ದಿಲ್ಲಿ, ವಾರಣಾಸಿ, ಬೆಂಗಳೂರಿಗೆ ಹೊಸ ರೈಲು ಆರಂಭಿಸಬೇಕು. ಹಾಗಾಗಿ ವಂದೇ ಭಾರತ್ ಸದ್ಯಕ್ಕೆ ಕೇರಳದಿಂದ ಇಲ್ಲಿಗೆ ವಿಸ್ತರಣೆ ಬೇಡ ಎನ್ನುತ್ತಾರೆ ರೈಲ್ವೇ ಬಳಕೆದಾರರ ಸಂಘದ ವಿನಯಚಂದ್ರ.
ವಂದೇ ಭಾರತ್ ಕಾಸರಗೋಡುವರೆಗೆ ವಿಸ್ತರಣೆಕಾಸರಗೋಡು, ಎ. 18: ಕೇರಳದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತಿರುವನಂತಪುರದಿಂದ ಕಾಸರಗೋಡು ವರೆಗೆ ಸರ್ವೀಸ್ ನಡೆಸಲಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪ್ರಥಮ ಹಂತದಲ್ಲಿ ಒಂದೂವರೆ ವರ್ಷದಲ್ಲಿ ಗಂಟೆಗೆ 110 ಕಿ.ಮೀ. ವೇಗದಲ್ಲಿ ಸಂಚರಿಸಲು ಸೌಕರ್ಯ ಕಲ್ಪಿಸಲಾಗುವುದು. ಎರಡನೇ ಹಂತದಲ್ಲಿ 130 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ. ಕೆಲವು ಪ್ರದೇಶಗಳಲ್ಲಿ ತಿರುವುಗಳನ್ನು ತೆರವುಗೊಳಿಸಬೇಕಾಗುವುದು. ಅದಕ್ಕಾಗಿ ಭೂಸ್ವಾಧೀನ ನಡೆಸಬೇಕಾಗಿದೆ. ಇದಕ್ಕೆ ಎರಡರಿಂದ ಮೂರು ವರ್ಷ ಬೇಕಾಗಿ ಬರಬಹುದು. ಗರಿಷ್ಠ 160 ಕಿ.ಮೀ. ವೇಗ ನೀಡುವುದು ಮುಖ್ಯ ಉದ್ದೇಶವಾಗಿದೆ ಎಂದರು. ಮಂಗಳೂರು ಸೆಂಟ್ರಲ್‌ಗೆ ಯಾವಾಗ ವಂದೇ ಭಾರತ್ ವಿಸ್ತರಣೆ ಯಾಗುತ್ತದೆ ಎನ್ನುವುದನ್ನು ಹೇಳ ಲಾಗದು. ಆದರೆ ಪೂರಕವಾದ ನಿರ್ವಹಣ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
– ಪ್ರವೀಣ್ ಕುಮಾರ್, ಸೀನಿಯರ್ ಸೆಕ್ಷನ್ ಎಂಜಿನಿಯರ್, ದ. ರೈಲ್ವೇ – ವೇಣುವಿನೋದ್ ಕೆ.ಎಸ್.