Advertisement

Vande Bharat: ಚೆನ್ನೈ-ಬೆಂಗಳೂರು ನಡುವೆ ರಾತ್ರಿ ವೇಳೆ ವಂದೇ ಭಾರತ್‌

12:35 AM Nov 20, 2023 | Team Udayavani |

ಚೆನ್ನೈ: ದೇಶದಲ್ಲಿ ಇದೇ ಮೊದಲ ಮೊದಲ ಬಾರಿಗೆ ರಾತ್ರಿಯೂ ವಂದೇ ಭಾರತ್‌ ರೈಲು ಸಂಚಾರ ಆರಂಭ ಆಗಲಿದೆ. ನ. 21ರಿಂದ ಬೆಂಗಳೂರು-ಚೆನ್ನೈ ನಡುವೆ ಇದು ಕಾರ್ಯಾಚರಣೆ ಆರಂಭಿಸಲಿದೆ.

Advertisement

ಚೆನ್ನೈ ಸೆಂಟ್ರಲ್‌ ನಿಲ್ದಾಣದಿಂದ ಮಂಗಳ ವಾರ (ನ. 21) ರಾತ್ರಿ 11 ಗಂಟೆಗೆ ಹೊರಟು ಬೆಂಗಳೂರಿನ ಯಶವಂತಪುರಕ್ಕೆ ಬುಧವಾರ ಬೆಳಗ್ಗೆ 4.30ಕ್ಕೆ ತಲುಪಲಿದೆ. ಈ ರೈಲಿನಲ್ಲಿ ಒಟ್ಟು ಎಂಟು ಕೋಚ್‌ಗಳು ಇರಲಿವೆ. ಎರಡು ನಿಲ್ದಾಣಗಳ ನಡುವಿನ ದೂರವನ್ನು ಹೊಸ ರೈಲು ಐದೂವರೆ ತಾಸುಗಳಲ್ಲಿ ಕ್ರಮಿಸಲಿದೆ.

ಯಶವಂತಪುರದಿಂದ ನ. 20ರಂದು ಸಂಜೆ 5.45ಕ್ಕೆ ಹೊರಟ ಮತ್ತೂಂದು ವಂದೇ ಭಾರತ್‌ ರೈಲು ಅದೇ ದಿನ ರಾತ್ರಿ 10 ಗಂಟೆಗೆ ಚೆನ್ನೈ ಸೆಂಟ್ರಲ್‌ ರೈಲು ನಿಲ್ದಾಣಕ್ಕೆ ತಲುಪಲಿದೆ.

ದೇಶದಲ್ಲಿ ಒಟ್ಟು 34 ವಂದೇ ಭಾರತ್‌ ರೈಲುಗಳು ಸಂಚರಿಸುತ್ತಿವೆ. ರಜಾಕಾಲದಲ್ಲಿ ಪ್ರಯಾಣಿಕರಿಗಾಗಿ ವಿಶೇಷವಾಗಿ ಹೊಸ ಮಾದರಿಯ ರೈಲುಗಳ ಸಂಚಾರ ಆರಂಭ ಮಾಡಲಾಗುತ್ತಿದೆ ಎಂದು ದಕ್ಷಿಣ ರೈಲ್ವೇಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next