Advertisement

“Vanantara’ ಶಿಬಿರದಲ್ಲಿ ಆನೆಗಳಿಗೆ ಪುನರ್ಜನ್ಮ: ಆನೆಗಳಿಗೆ ಆಯಿಲ್‌ ಮಸಾಜ್‌, ಜಲ ಚಿಕಿತ್ಸೆ

11:22 PM Feb 27, 2024 | Team Udayavani |

ನವದೆಹಲಿ: ಗುಜರಾತ್‌ನ ಜಾಮ್‌ನಗರದಲ್ಲಿರುವ ವನತಾರಾ ಆನೆ ಕ್ಯಾಂಪ್‌ನಲ್ಲಿ ಸರ್ಕಸ್‌ ಮುಂತಾದ ಪ್ರದೇಶಗಳಿಂದ ರಕ್ಷಿಸಲ್ಪಟ್ಟ ಆನೆಗಳು ಪುನರ್ಜನ್ಮ ಪಡೆಯುತ್ತಿವೆ.

Advertisement

ರಿಲಯನ್ಸ್‌ ಸಂಸ್ಥೆಯು ಜಾಮ್‌ನಗರದ ಮೂರು ಸಾವಿರ ಎಕರೆ ಪ್ರದೇಶದಲ್ಲಿ ಎಲಿಫೆಂಟ್‌ ಕ್ಯಾಂಪ್‌ ಸ್ಥಾಪಿಸಿದ್ದು, ಬೇರೆ ಬೇರೆ ಕಾರಣದಿಂದ ತೊಂದರೆಗೆ ಸಿಲುಕಿದ್ದ ಆನೆಗಳನ್ನು ರಕ್ಷಿಸಿ ಇಲ್ಲಿ ಅವುಗಳಿಗೆ ಚಿಕಿತ್ಸೆ ಹಾಗೂ ತರಬೇತಿ ನೀಡಲಾಗುತ್ತಿದೆ. ಇದು ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ರಿಲಯನ್ಸ್‌ ಫೌಂಡೇಷನ್‌ ಮುಖ್ಯಸ್ಥ ಅನಂತ್‌ ಅಂಬಾನಿಯ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಈಗಾಗಲೇ ಇಲ್ಲಿ 200 ಆನೆಗಳು ಆಯಿಲ್‌ ಮಸಾಜ್‌, ಜಲ ಚಿಕಿತ್ಸೆ, ಆಕ್ಯುಪಂಕ್ಚರ್‌ ಚಿಕಿತ್ಸೆ, ಲೇಸರ್‌ ಚಿಕಿತ್ಸೆ ಪಡೆಯುತ್ತಿವೆ.

ಈ ರೀತಿಯ ದೇಶದ ಏಕೈಕ ಕೇಂದ್ರ ವನತಾರಾವಾಗಿದ್ದು ಇಲ್ಲಿ ಮೃಗಾಲಯ, ಸರ್ಕಸ್‌, ರಸ್ತೆ ಅಪಘಾತ ಹಾಗೂ ಪರಿಸರದ ಇಕ್ಕಟ್ಟಿಗೆ ಸಿಲುಕಿ ಜೀವನದ ಅಂತಿಮ ಹಂತಕ್ಕೆ ಸಿಲುಕಿದ ಗಜಗಳನ್ನು ಆರೈಕೆ ಮಾಡಲಾಗುತ್ತಿದೆ. ಸರ್ಕಸ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಗಂಭೀರ ಗಾಯಗೊಂಡಿದ್ದ ಲೀಲಾವತಿ ಹೆಸರಿನ ಆನೆ ಇಲ್ಲಿ ಚಿಕಿತ್ಸೆ ಪಡೆದು ಗುಣಮುಖವಾಗುತ್ತಿದೆ. ಇದೇ ರೀತಿ ಬೇರೆ ಬೇರೆ ರೀತಿಯಲ್ಲಿ ತೊಂದರೆಗೆ ಸಿಲುಕಿ ಸಹಜ ಬದುಕಿನತ್ತ ಹೆಜ್ಜೆ ಇಡುತ್ತಿರುವ ಹಲವಾರು ಆನೆಗಳು ಇಲ್ಲಿವೆ. ಮುಂದಿನ ದಿನಗಳಲ್ಲಿ ದೇಶ, ವಿದೇಶದಲ್ಲಿ ಸಮಸ್ಯೆಗೆ ಸಿಲುಕಿದ ಪ್ರಾಣಿಗಳನ್ನು ರಕ್ಷಣೆ ಮಾಡುವುದಾಗಿ ಸಂಸ್ಥೆ ಘೋಷಣೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next