Advertisement
ಕಾರವಾರ: ಇಲ್ಲಿನ ನಗರಸಭೆ ಘಜತ್ಯಾಜ್ಯ ವಿಲೇವಾರಿ ನಿರ್ಹಣೆಗೆ ಹೆಸರು ಮಾಡಿರುವಂತೆ, ರಸ್ತೆಬದಿಗೆ ಹಾಗೂ ಗಾರ್ಡನ್‌ಗಳಲ್ಲಿ ಸಸೀಕರಣ ಮಾಡುವ ಕಾರ್ಯಕ್ಕೂ ಮುಂದಾಗಿದೆ. ಇದರ ಫಲವಾಗಿ ನಗರದ ಹಲವು ಕಡೆ ಎರಡನೇ ತಲೆಮಾರಿನ ಸಸಿಗಳು ಈಗ ಗಿಡವಾಗಿ ನಗರದ ಹಲವು ಕಡೆ ನಳನಳಿಸುತ್ತಿವೆ.
Related Articles
Advertisement
ಕೋವಿಡ್‌ಜಾಗೃತಿ,ನಗರಸಭೆ ತೆರಿಗೆಮಾಹಿತಿಗಳನ್ನು ಹಾಗೂ ಆರೋಗ್ಯ ಮಾಹಿತಿಗಳನ್ನು, ನಿಷೇಧಾಜ್ಞೆ ಮಾಹಿತಿಗಳ ಪ್ರಚಾರಕ್ಕೆ ಕಸ ಸಂಗ್ರಹ ವಾಹನದ ಪ್ರಬಲ ಮಾಧ್ಯಮವಾಗಿದೆ. ನಗರಸಭೆ ಹಿಡಿತದಈಪ್ರಚಾರ ಮಾಧ್ಯಮದ ಮೂಲಕ ಸಸೀಕರಣ ಹಾಗೂ ಸಸಿಯ ಬೆಳವಣಿಗೆ ಜೊತೆ ದೇಣಿಗೆ ನೀಡಿದವರ ಹೆಸರು ಇಡಲು ನಿರ್ಧರಿಸಿದ್ದು, ಹಲವರನ್ನು ಆಕರ್ಷಿಸಿತು. ಪ್ರತಿ ಸಸಿಗೆ ಹೆಸರಿಡಬೇಕಾದರೆ, ದೇಣಿಗೆ 1000 ರೂ. ನೀಡಬೇಕು. ಇದು ಆಕರ್ಷಕ ಯೋಜನೆ ಆದ ಕಾರಣ ನಗರಸಭೆ ಸದಸ್ಯರು ತಮ್ಮ ತಮ್ಮ ಹೆಸರಲ್ಲಿ ಸಾವಿರ ರೂ. ದೇಣಿಗೆ ನೀಡಿ ಅವರ ಹೆಸರಿನಲ್ಲಿ ಒಂದೊಂದು ಸಸಿ ನೆಟ್ಟರು. ಇದನ್ನು ಜಿಲ್ಲಾಧಿಕಾರಿ, ಸಿಇಒ ಸೇರಿದಂತೆ ಹಲವು ಅಧಿಕಾರಿಗಳು ಅನುಸರಿಸಿದರು.
ರಾಜ್ಯದ ವಿವಿಧ ಇಲಾಖೆಗಳ ಕಾರ್ಯದರ್ಶಿಗಳು ಸಹ ಕಾರವಾರಕ್ಕೆ ಭೇಟಿ ನೀಡಿದಾಗ ಅವರ ಹೆಸರಲ್ಲಿ ಸಸಿ ನೆಟ್ಟು ಸಾವಿರ ರೂ. ದೇಣಿಗೆ ನೀಡಿದರು. ಕಾರವಾರದಿಂದ ವರ್ಗಾವಣೆಯಾಗಿ ಹೋದ ಜಿಲ್ಲಾಧಿಕಾರಿ ಹರೀಶ ಕುಮಾರ್, ಸಿಇಒ ಎಂ.ರೋಶನ್, ಐಎಎಸ್ ಅಧಿಕಾರಿ ರವಿಶಂಕರ್, ಈಗಿನ ಜಿಪಂ ಸಿಇಒ ಪ್ರಿಯಂಕಾ ಸಹ ಸಾವಿರರೂ.ದೇಣಿಗೆನೀಡಿಸಸಿನೆಟ್ಟುಬೆಳೆಸುತ್ತಿರುವುದು ಕಾರವಾರದಲ್ಲಿ ಒಂದು ಆದರ್ಶವಾಗಿ ಮಾರ್ಪಟ್ಟಿದೆ.
ಕಳೆದ ವರ್ಷ 865 ಸಸಿ ನೆಟ್ಟರು: ಕಳೆದ ವರ್ಷ 2020ರಲ್ಲಿ ಕೋವಿಡ್ ಸಂಕಷ್ಟದ ನಡುವೆಯೂ 865 ಸಸಿಗಳನ್ನು ನೆಟ್ಟಿದ್ದು,ಅವುಗಳಲ್ಲಿ ಬಹುತೇಕ ಸಸಿಗಳು ಬೆಳೆಯುತ್ತಿವೆ. ಕಳೆದವರ್ಷಈ ಕಾರ್ಯಕ್ಕೆ ಸಾರ್ವಜನಿಕರಿಂದ65000 ರೂ. ದೇಣಿಗೆ ಬಂದಿತ್ತು. 2021 ಸಾಲಿನಲ್ಲಿ ಈಗಾಗಲೇ 500 ಸಸೀಕರಣ ಮುಗಿದಿದೆ. 1000 ಗಿಡಗಳನ್ನು ನೆಡುವ ಕಾರ್ಯ ಯೋಜನೆ ಜಾರಿಯಲ್ಲಿದೆ. ಈ ಕಾರ್ಯಕ್ಕೆ 2,78000.00 ರೂ, ದೇಣಿಗೆ ಬಂದಿದೆ. ರೋಟರಿ ಹಾಗೂ ಪಹರೆ ವೇದಿಕೆಈಕಾರ್ಯಕ್ಕೆ ಸಹಕಾರ ನೀಡಿವೆ. ಕಾರವಾರ ಕೋಡಿಬಾಗ ರಸ್ತೆಯ ಡಿವೈಡರ್ ಮಧ್ಯೆ ಅಶೋಕ ಸಸ್ಯಗಳು ಬೆಳೆದು ನಿಂತಿದ್ದು, ಇದಕ್ಕೆ ರೋಟರಿ ಕ್ಲಬ್ ಸದಸ್ಯರ ಹಾಗೂ ಪಹರೆ ವೇದಿಕೆ ಸಹಕಾರ ಮುಖ್ಯವಾದುದು. ರಸ್ತೆ ಬದಿ ಹೊರತುಪಡಿಸಿ ನಗರದ ವಿವಿಧ ವಾರ್ಡ್‌ಗಳಲ್ಲಿ ಅಗಲವಾದ ರಸ್ತೆಗಳ ಬದಿಗಳಲ್ಲಿ ಸಸಿಗಳನ್ನು ನೆಟ್ಟು ರಕ್ಷಿಸಲಾಗುತ್ತಿದೆ. ಅಲ್ಲದೇ ಗಾರ್ಡನ್‌ಗಳಲ್ಲಿ ಸಸಿಗಳನ್ನು ಹೊಸದಾಗಿ ಹಾಕಲಾಗಿದೆ. ರಸ್ತೆಯಲ್ಲಿ ವಾಹನ ಪಾರ್ಕಿಂಗ್ ಜಾಗ ಬಿಟ್ಟು ವ್ಯವಸ್ಥಿವಾಗಿ ಸಸಿಗಳನ್ನು ನೆಡಲಾಗಿದೆ. ಅಲ್ಲದೇ ಬೇಸಿಗೆಯಲ್ಲಿ ಸಸಿಗಳಿಗೆ ಅಗತ್ಯ ನೀರು ಹಾಕಲು ಪ್ರತ್ಯೇಕ ಟ್ಯಾಂಕರ್ ಹಾಗೂ ಸಿಬ್ಬಂದಿ ಸಹ ವ್ಯವಸ್ಥೆ ಮಾಡಲಾಗಿದೆ. ನಗರದಲ್ಲಿ ಸಸಿಗಳನ್ನು ಪೋಷಿಸುವ ಪ್ರಜ್ಞೆ ಯುವಕರಲ್ಲಿ, ಯುವತಿಯರಲ್ಲಿ ಹಾಗೂ ಸಾರ್ವಜನಿಕರಲ್ಲಿ ಮೂಡಿದೆ.