Advertisement

ಕಣಿವೆಗೆ ಬಿದ್ದ ಹಣ ತುಂಬಿದ ವಾಹನ: ನಾಲ್ವರ ಸಾವು

09:20 AM Nov 06, 2019 | keerthan |

ಕಥುವಾ: ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ನ ಹಣ ತುಂಬಿದ್ದ ವ್ಯಾನ್ ಒಂದು 500 ಮೀಟರ್ ಕಣಿವೆಗೆ ಬಿದ್ದು ನಾಲ್ವರು ಮೃತಪಟ್ಟ ಘಟನೆ ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯ ಬನಿಯಲ್ಲಿ ನಡೆದಿದೆ.

Advertisement

ಸೋಮವಾರ ರಾತ್ರಿ ಸುಮಾರು ಒಂದು ಕೋಟಿ ಹಣ ತುಂಬಿದ್ದ ವ್ಯಾನ್ ಕಥುವಾದಿಂದ ಬನಿಗೆ ಹೊರಟಿತ್ತು. ಬನಿ ನಗರಕ್ಕೆ 18 ಕಿ.ಮೀ ದೂರದಲ್ಲಿ ಕಡಿದಾದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ. ವ್ಯಾನ್ ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next