Advertisement

ಕೋಣಗಳಿಗೆ ಹಿಂಸೆ ನೀಡದೆ ಕಂಬಳ ಉಳಿಸೋಣ: ಜಗದೀಶ್‌

06:28 AM Feb 17, 2019 | |

ವಾಮಂಜೂರು : ಕಂಬಳದ ಕೋಣಗಳಿಗೆ ಹಿಂಸೆ ನೀಡದೆ ಕ್ರೀಡಾ ಮನೋಭಾವದಲ್ಲಿ ಕಂಬಳ ನಡೆಸಿ ಮುಂದೆ ಯಾವುದೇ ಸಮಸ್ಯೆ ಆಗದಂತೆ ಮಾಡಿಕೊಳ್ಳೋಣ ಎಂದು ವಿಹಿಂಪ ಮುಖಂಡ ಜಗದೀಶ್‌ ಶೇಣವ ಹೇಳಿದ್ದಾರೆ.

Advertisement

ವಾಮಂಜೂರಿನ ತಿರುವೈಲುಗುತ್ತು ಸಂಕು ಪೂಂಜ- ದೇವುಪೂಂಜ ಜೋಡುಕರೆ ಕಂಬಳ ಸಮಿತಿ ವತಿಯಿಂದ ಶನಿವಾರ ಬೆಳಗ್ಗೆ ತಿರುವೈಲು ಶ್ರೀ ಅಮೃತೇಶ್ವರ ದೇವಸ್ಥಾನದ ಎದು ರಿನ ಕಂಬಳ ಗದ್ದೆಯಲ್ಲಿ ನಡೆದ ತುಳುನಾಡಿನ ಕಂಬಳ- ತಿರುವೈಲೋತ್ಸವದ ಉದ್ಘಾಟನ ಸಮಾರಂಭದಲ್ಲಿ ಅವರು ಮಾತನಾಡಿದರು.

ಆದಿಶಕ್ತಿ ಭುವನೇಶ್ವರಿ ಆದಿನಾಥ ಸಿದ್ಧಪೀಠದ ಶ್ರೀ ಪ್ರವೀಣ್‌ ರಾಜ್‌ ಮಚ್ಚೇಂದ್ರನಾಥ ಬಾಬಾ ಅವರು ಕಂಬಳ ಉದ್ಘಾಟಿಸಿದರು. ಕಂಬಳ ಸಮಿತಿಯ ಗೌರವ ಅಧ್ಯಕ್ಷ ಮಿಥುನ್‌ ರೈ ಮಾತನಾಡಿ, ಕಂಬಳ ಉಳಿಸಲು ಹಲವಾರು ಮಂದಿ ಪ್ರಯತ್ನಿಸಿದ್ದಾರೆ. ಈ ಪೈಕಿ ನವೀನ್‌ ಚಂದ್ರ ಆಳ್ವರೂ ಕೂಡ ಮುಂಚೂಣಿಯಲ್ಲಿ ಹೋರಾಟ ನಡೆಸಿ ದ್ದಾರೆ. ಇಂತಹ ಕಂಬಳವನ್ನು ಮುಂದೆಯೂ ಉಳಿಸೋಣ ಎಂದು ಹೇಳಿದರು.

ನೆನಪಿಸುವ ಕಾರ್ಯವಾಗಲಿ
ಮಾಜಿ ಶಾಸಕ ಮೊಯಿದಿನ್‌ ಬಾವಾ ಮಾತನಾಡಿ, ಕಂಬಳ ಉಳಿಸಲು ಸಾಕಷ್ಟು ಮಂದಿ ಹೋರಾಟ ನಡೆಸಿದ್ದು ಅವರನ್ನು ನೆನಪಿಸಿವುದು ಅಗತ್ಯ ಎಂದರು.

ಶ್ರದ್ಧಾಂಜಲಿ
ಉಗ್ರರ ದಾಳಿಯಿಂದ ಹುತಾತ್ಮರಾದ ಸೈನಿಕರನ್ನು ನೆನೆದು ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ತಿರುವೈಲುಗುತ್ತು ಕಂಬಳ ಸ್ಥಾಪಕ, ಅಧ್ಯಕ್ಷ ನವೀನ್‌ ಚಂದ್ರ ಆಳ್ವ ಶುಭಹಾರೈಸಿದರು. ಜಿಲ್ಲಾ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್‌ ಕುಮಾರ್‌ ರೈ, ಜಯರಾಮ ಸಾಮಾನಿ ತುಂಬೆ, ಶ್ರೀಜಾಣು ಶೆಟ್ಟಿ ಮೆಮೊರಿಯಲ್‌ ಎಜುಕೇಶನಲ್‌ ಚಾರಿಟೇಬಲ್‌ ಟ್ರಸ್ಟ್‌ ತಿರುವೈಲು ಸ್ಥಾಪಕಾಧ್ಯಕ್ಷ ಸೀತಾ ರಾಮ ಜಾಣು ಶೆಟ್ಟಿ, ಕಲ್ಲುಡೇಲು ಶ್ರೀಬ ಸದಾಶಿವ ದೇವಸ್ಥಾನದ ಪ್ರಧಾನ ಅರ್ಚಕ ಸದಾಶಿವ ಭಟ್‌, ರವಿರಾಜ್‌ ಶೆಟ್ಟಿ, ಕೋರ್ದಬ್ಬು ದೇವಸ್ಥಾನ ಪರಾರಿ ಅಧ್ಯಕ್ಷ ಶೇಖರ್‌ ಶೆಟ್ಟಿ ಕೊಳಕೆಬೈಲು, ಉದ್ಯಮಿ ನಿತಿನ್‌ ಶೆಟ್ಟಿ ಪಾದೂರು ಹೊಸಮನೆ, ಸದಾಶಿವ ದೇವಸ್ಥಾನದ ಆಡಳಿತ ಮೊಕ್ತೇಸರ ನಾಗರಾಜ್‌ ರೈ ತಿಮಿರಿಗುತ್ತು, ಉಮೇಶ್‌ ರೈ ಪದವು ಮೇಗಿನ ಮನೆ, ತಾರ್ದೊಲ್ಯ ತರವಾಡು ಮನೆ ಜಪ್ಪಿನಮೊಗರಿನ ಯಜಮಾನ ಯು. ಕರುಣಾಕರ ಶೆಟ್ಟಿ, ಮಾಜಿ ಕಾರ್ಪೊರೇಟರ್‌ ಮೀರಾ ಅಶೋಕ್‌, ಪ್ರತೋಷ್‌ ಮಲ್ಲಿ ತಿರುವೈಲು, ಓಂಪ್ರಕಾಶ್‌ ಶೆಟ್ಟಿ ವಾಮಂಜೂರು, ಕಂಬಳದ ಕಾರ್ಯಾಧ್ಯಕ್ಷ ಪ್ರವೀಣ್‌ ಚಂದ್ರ ಆಳ್ವ ತಿರುವೈಲುಗುತ್ತು, ಕೋಶಾಧಿಕಾರಿ ರಾಜ್‌ ಕುಮಾರ್‌ ಶೆಟ್ಟಿ, ಪ್ರ.ಕಾರ್ಯದರ್ಶಿ ಕೆ. ಅಭಿಷೇಕ್‌ ಆಳ್ವ, ಚಂದ್ರಹಾಸ ರೈ, ಗಂಗಯ್ಯ ಅಮೀನ್‌, ಕಾಪೆಟ್ಟುಗುತ್ತು ಸುರೇಶ್‌ ಶೆಟ್ಟಿ, ಚಂದ್ರಶೇಖರ
ಶೆಟ್ಟಿ, ಅಪ್ಪಣಬೆಟ್ಟು ರಾಜು, ಕಿಂಞಣ್ಣ ಶೆಟ್ಟಿ, ಶುಭಾಷ್‌ ರೈ, ಸದಾಶಿವ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಅಶ್ವಿ‌ನ್‌ ಶೆಟ್ಟಿ ಬೊಂಡಂತಿಲ ಸ್ವಾಗತಿಸಿ, ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next