ಬಂಟ್ವಾಳ : ಆರ್ಥಿಕ ವ್ಯವ ಹಾರದಲ್ಲಿ ಪಾರದರ್ಶಕತೆ, ನಂಬಿಕೆ ವಿಶ್ವಾಸ ಉಳಿಸಿಕೊಂಡು ಬರಬೇಕು. ಸಹಕಾರಿ ಕ್ಷೇತ್ರ ಪರಸ್ಪರ ಕೊಡುಕೊಳ್ಳುವ ವ್ಯವಹಾರವಾಗಿ ಪ್ರತಿಯೊಬ್ಬರಿಗೆ ಬಾದ್ಯ ಸ್ತರಂತೆ ನಡೆದುಕೊಳ್ಳುವುದಾಗಿದೆ ಎಂದು ಮೂಡುಬಿದಿರೆ ಜೈನ ಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾ ಚಾರ್ಯವರ್ಯ ಮಹಾಸ್ವಾಮೀಜಿ ಅವರು ಹೇಳಿದರು.
ಮೇ 1ರಂದು ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿ. ಇದರ 8ನೇ ನೂತನ ಶಾಖೆಯನ್ನು ಅವರು ವಾಮದಪದವು ಬಸ್ತಿಕೋಡಿ ಅರುಹಶ್ರೀ ಕಟ್ಟಡದಲ್ಲಿ ಉದ್ಘಾಟಿಸಿ, ವ್ಯವಹಾರದಲ್ಲಿ ನಾವು ವ್ಯವಸ್ಥೆಗಳನ್ನು ನಡೆಸಿಕೊಡುವುದಕ್ಕಾಗಿ ಒಂದಂಶವನ್ನು ಉಳಿಸಿ-ಬಳಸಿಕೊಳ್ಳುವ ಮೂಲಕ ಸಹಕಾ ರದ ಮನೋಭಾವದಿಂದ ನಡೆದು ಕೊಳ್ಳು ವುದು ಮುಖ್ಯವಾಗಿದೆ ಎಂದರು.
ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ ಸುದರ್ಶನ ಜೈನ್ ಭದ್ರತಾ ಕೊಠಡಿ ಉದ್ಘಾಟಿಸಿದರು.ಜಿ.ಪಂ. ಸದಸ್ಯರಾದ ಎಂ. ತುಂಗಪ್ಪ ಬಂಗೇರ ಕಂಪ್ಯೂಟರ್ ಜಾಲವನ್ನು ಉದ್ಘಾಟಿಸಿದರು. ಬಿ. ಪದ್ಮಶೇಖರ ಜೈನ್ ನಿತ್ಯನಿಧಿ ಠೇವಣಿ ಯೋಜನೆಗೆ ಚಾಲನೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಮಾತನಾಡಿ, ತಾಲೂಕಿನಾದ್ಯಂತ ಸಂಘವು 8 ಶಾಖೆಗಳನ್ನು ಹೊಂದಿದೆ. ಸಹಕಾರಿ ಸಂಘವು 2018-19ನೇ ಸಾಲಿನ ಆರ್ಥಿಕ ವರ್ಷದಲ್ಲಿ 121 ಕೋಟಿ ರೂ. ವ್ಯವಹಾರ ನಡೆಸಿ 40 ಲಕ್ಷ ರೂ. ನಿವ್ವಳ ಲಾಭ ಪಡೆದಿದೆ. 4,753 ಮಂದಿ ಸದಸ್ಯರಿಂದ 96.28 ಲಕ್ಷ ರೂ. ಪಾಲು ಬಂಡವಾಳ, 24.42 ಕೋಟಿ ರೂ. ಠೇವಣಿ ಹೊಂದಿದೆ. ಪ್ರಸ್ತುತ 28.46 ಕೋಟಿ ರೂ. ದುಡಿಯುವ ಬಂಡವಾಳವನ್ನು ಹೊಂದಿರುತ್ತದೆ. 15 ಸಾವಿರಕ್ಕೂ ಅಧಿಕ ಹೆಚ್ಚು ಗ್ರಾಹಕರು ಸಂಸ್ಥೆಯಲ್ಲಿ ವ್ಯವಹಾರ ನಡೆಸುತ್ತಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಚೆನ್ನೈತ್ತೋಡಿ ತಾ.ಪಂ. ಸದಸ್ಯೆ ರತ್ನಾವತಿ ಜೆ. ಶೆಟ್ಟಿ, ಚೆನ್ನೈತ್ತೋಡಿ ಗ್ರಾ.ಪಂ. ಅಧ್ಯಕ್ಷ ಯತೀಶ್ ಎನ್. ಶೆಟ್ಟಿ, ವಾಮದಪದವು ವ್ಯ.ಸೇ.ಸ. ಸಂಘ ಅಧ್ಯಕ್ಷ ಯಶೋಧರ ಶೆಟ್ಟಿ, ವಾಮದಪದವು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಚೌಟ, ಮಹಿಳಾ ವಿ.ಸ. ಸಂಘ ವಾಮದಪದವು ಅಧ್ಯಕ್ಷೆ ರಾಧಿಕಾ ಎಂ. ನಾಯಕ್ ಉಪಸ್ಥಿತರಿದ್ದರು. ಕಟ್ಟಡ ಮಾಲಕ ಅರುಣ್ ಕುಮಾರ್ ಇಂದ್ರ ಅವರನ್ನು ಸಮ್ಮಾನಿಸಲಾಯಿತು.
ಉದಯ ಕುಮಾರ್ ಕಟ್ಟೆಮನೆ, ಚಂದ್ರಶೇಖರ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಅಮ್ಮು ರೈ, ನವೀನ್‌ಚಂದ್ರ ಶೆಟ್ಟಿ, ಜಿ.ಕೆ. ಭಟ್, ಹಂಝ ಬಸ್ತಿಕೋಡಿ, ಪ್ರವೀಣ್ ಗಟ್ಟಿ, ಸಂಘದ ಉಪಾಧ್ಯಕ್ಷ ಮಂಜುನಾಥ ರೈ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಜಿತ್ ಕುಮಾರ್, ನಿರ್ದೇಶಕರಾದ ಸ್ವಪ್ನರಾಜ್, ರಾಜೇಶ್ ಬಿ., ಗಜೇಂದ್ರ ಪ್ರಭು, ದಿವಾಕರ್‌ದಾಸ್, ವಿಜಯಕುಮಾರಿ ಇಂದ್ರ, ಸುಧಾಕರ ಸಾಲ್ಯಾನ್, ಮೈಕಲ್ ಡಿ’ಕೋಸ್ತಾ, ಹೇಮಂತ್ ಕುಮಾರ್ ಜೈನ್, ರವೀಂದ್ರ ಮತ್ತು ನಾರಾಯಣ ಸಿ. ಪೆರ್ನೆ ಉಪಸ್ಥಿತರಿದ್ದರು.
ನಿರ್ದೇಶಕರಾದ ದಿವಾಕರ ದಾಸ್ ಸ್ವಾಗತಿಸಿ, ಸುಧಾಕರ ಸಾಲ್ಯಾನ್ ವಂದಿಸಿದರು. ನ್ಯಾಯವಾದಿ ಶಿವಪ್ರಕಾಶ್ ನಿರೂಪಿಸಿದರು.