Advertisement

Valmiki Nigama Scam: ಶಾಸಕ ಬಸವನಗೌಡ ದದ್ದಲ್‌ ಬಂಧನ ಶೀಘ್ರ?

11:33 PM Jul 13, 2024 | Team Udayavani |

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಗರಣದಲ್ಲಿ ನಿಗಮದ ಅಧ್ಯಕ್ಷ ಹಾಗೂ ರಾಯಚೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಬಸವನಗೌಡ ದದ್ದಲ್‌ಗೆ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಶೋಧ ನಡೆಸುತ್ತಿದ್ದು, ಬಂಧನದ ಭೀತಿ ಎದುರಾಗಿದೆ.

Advertisement

ನಿಗಮದ ಹಗರಣದಲ್ಲಿ ಅವರ ಪಾತ್ರವಿರುವ ಬಗ್ಗೆ ಇ.ಡಿ.ಗೆ ಸುಳಿವು ಸಿಕ್ಕಿದೆ ಎಂದು ತಿಳಿದು ಬಂದಿದೆ. ಬುಧವಾರ ದದ್ದಲ್‌ ಅವರ ಯಲಹಂಕದಲ್ಲಿರುವ ನಿವಾಸ, ರಾಯಚೂರಿನ ನಿವಾಸ ಸೇರಿ ವಿವಿಧೆಡೆ ಇಡಿ ದಾಳಿ ನಡೆಸಿ ದಾಖಲೆ ಕಲೆ ಹಾಕಿತ್ತು. ಶುಕ್ರವಾರ ಇಡಿ ಅಧಿಕಾರಿಗಳು ದಾಳಿ ಮುಂದುವರಿಸಿದ್ದರೂ ಅವರ ಕಣ್ತಪ್ಪಿಸಿ ದದ್ದಲ್‌ ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದರು. ಇದೀಗ ಮತ್ತೆ ಇಡಿ ಅಧಿಕಾರಿಗಳು ದದ್ದಲ್‌ ಮೇಲೆ ಕಣ್ಣಿಟ್ಟಿದ್ದು, ನಿಗಮದಲ್ಲಿ ನಡೆದಿರುವ ಅಕ್ರಮದಲ್ಲಿ ದದ್ದಲ್‌ಗ‌ೂ ಪಾಲು ಹೋಗಿದೆಯಾ ಎಂಬುದಕ್ಕೆ ಪುರಾವೆಗಳನ್ನು ಹುಡುಕುತ್ತಿದ್ದಾರೆ.

ಗೌಪ್ಯ ಸ್ಥಳದಲ್ಲಿ?
ಬಂಧನ ಭೀತಿ ಇರುವ ಹಿನ್ನೆಲೆಯಲ್ಲೇ ಶುಕ್ರವಾರ ದದ್ದಲ್‌ ಎಸ್‌ಐಟಿ ವಿಚಾರಣೆಗೆ ಹಾಜರಾಗಿರುವ ಅನುಮಾನ ಹುಟ್ಟಿಕೊಂಡಿದೆ. ಎಸ್‌ಐಟಿ ವಿಚಾರಣೆ ಬಳಿಕ ದದ್ದಲ್‌ ಗೌಪ್ಯ ಸ್ಥಳಕ್ಕೆ ತೆರಳಿ ಇ.ಡಿ. ಕಣ್ಣಿಗೆ ಬೀಳದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ ಎನ್ನಲಾಗಿದೆ.

ತನಿಖೆ ಹೊತ್ತಲ್ಲೇ ದದ್ದಲ್‌ ಪುತ್ರನ ಆಸ್ತಿ ಸದ್ದು
ರಾಯಚೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ತನಿಖೆ ನಡೆಯುತ್ತಿರುವಾಗಲೇ ನಿಗಮದ ಅಧ್ಯಕ್ಷ, ಶಾಸಕ ಬಸನಗೌಡ ದದ್ದಲ್‌ ಪುತ್ರ ತ್ರಿಶೂಲ್‌ ಕುಮಾರ ಹೆಸರಲ್ಲಿ ಆಸ್ತಿ ನೋಂದಣಿಯಾಗಿರುವುದು ಬೆಳಕಿಗೆ ಬಂದಿದೆ.

ಇ.ಡಿ. ಅಧಿಕಾರಿಗಳು 2 ದಿನ ದದ್ದಲ್‌ ಹಾಗೂ ಮಾಜಿ ಆಪ್ತ ಸಹಾಯಕ ಪಂಪಣ್ಣ ಅವರ ಮನೆಯಲ್ಲಿ ಶೋಧ ನಡೆಸಿದ್ದರು. ಈ ವೇಳೆ ಕೆಲವೊಂದು ದಾಖಲೆಗಳ ಜತೆಗೆ ಆಸ್ತಿ ಪತ್ರಗಳು ಸಿಕ್ಕಿವೆ ಎನ್ನಲಾಗುತ್ತಿದೆ. ಜೂ. 27ರಂದು ದದ್ದಲ್‌ ಪುತ್ರ ತ್ರಿಶೂಲ್‌ ಹೆಸರಲ್ಲಿ 4.31 ಎಕರೆ ಜಮೀನು ಮ್ಯುಟೇಶನ್‌ ಆಗಿರುವ ದಾಖಲೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಸಿರವಾರ ತಾಲೂಕಿನ ಗಣದಿನ್ನಿ ಗ್ರಾಮದ ಸೀಮೆಯಲ್ಲಿ 4.31 ಎಕರೆ ಜಮೀನು ಪುತ್ರನ ಹೆಸರಲ್ಲಿ ನೋಂದಣಿಯಾಗಿದೆ. ತ್ರಿಶೂಲ್‌ ಇನ್ನೂ ಎಂಬಿಬಿಎಸ್‌ ಅಧ್ಯಯನ ಮಾಡುತ್ತಿದ್ದಾರೆ.

Advertisement

ವೀರಯ್ಯ ಬಂಧನವೂ ಆಗಿಲ್ಲವೇ: ಸಿದ್ದು ಮರುಪ್ರಶ್ನೆ !
ಕೆಪಿಸಿಸಿ ಕಾರ್ಯಕರ್ತರ ಅಹವಾಲು ಸ್ವೀಕರಿಸಿ ಹೊರಟಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ತಡೆದು ನಿಲ್ಲಿಸಿದ ಮಾಧ್ಯಮದವರು ನಾಗೇಂದ್ರ ಬಂಧನದ ಬಗ್ಗೆ ಕೇಳಿದಾಗ, ಬರೀ ನಾಗೇಂದ್ರ ಬಗ್ಗೆ ಕೇಳುತ್ತೀರಲಿÅà? ಡಿ.ಎಸ್‌. ವೀರಯ್ಯ ಬಂಧನ ಆಗಿಲ್ಲವೇ? ಅದರ ಬಗ್ಗೆ ಕೇಳುವುದೇ ಇಲ್ಲ. ವೀರಯ್ಯ ಬಂಧನದ ಬಗ್ಗೆ ಬಿಜೆಪಿಯವರು ಏನು ಹೇಳುತ್ತಾರೆ? ಅವರ್ಯಾರು ಏಕೆ ಮಾತನಾಡುತ್ತಿಲ್ಲ ಎಂದು ಮರುಪ್ರಶ್ನೆ ಹಾಕಿದರು. ಮುಡಾ ಹಗರಣದ ಬಗ್ಗೆ ಪ್ರಶ್ನಿಸುತ್ತಿದ್ದಂತೆ ಕೈ ಅಲ್ಲಾಡಿಸುತ್ತಾ ಹೊರಟೇ ಬಿಟ್ಟರು!

“ನಾಗೇಂದ್ರ ಬಂಧನ ಆಗಿದೆ. ಅದಕ್ಕೆ ನಾನೇನು ಹೇಳಲಿ? ಸಿಬಿಐ ಆಗಲೀ, ಇಡಿ ಆಗಲೀ ಅಥವಾ ಯಾವುದೇ ತನಿಖಾ ಸಂಸ್ಥೆಗಳಾಗಲೀ ರಾಜಕೀಯದ ಅಸ್ತ್ರ ಆಗಬಾರದು ಎಂಬುದು ಮೊದಲಿ ನಿಂದಲೂ ನಮ್ಮ ಅಭಿಪ್ರಾಯ . ಜಾರಿ ನಿರ್ದೇಶನಾಲಯಕ್ಕೆ ಯಾವ ಮಾಹಿತಿ ಸಿಕ್ಕಿದೆಯೋ ಅದರ ಆಧಾರದ ಮೇಲೆ ಬಂಧಿಸಿದ್ದಾರೆ. ಇದು ಕಾನೂನು ಪ್ರಕಾರ ನಡೆಯುವ ಪ್ರಕ್ರಿಯೆ.”  -ಡಾ.ಜಿ. ಪರಮೇಶ್ವರ್‌, ಗೃಹಸಚಿವ

Advertisement

Udayavani is now on Telegram. Click here to join our channel and stay updated with the latest news.

Next