Advertisement
ಇಡಿ ಅಧಿಕಾರಿಗಳು ಜಪ್ತಿ ಮಾಡಿರುವ ದಾಖಲೆಗಳು ಹಾಗೂ ಸಾಕ್ಷ್ಯ ಮುಂದಿಟ್ಟು ನಾಗೇಂದ್ರ ಅವರನ್ನು ಮಂಗಳವಾರ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ. ಆದರೆ ನಾಗೇಂದ್ರ ಗೊಂದಲದ ಹೇಳಿಕೆ ಮುಂದುವರಿಸಿದ್ದಾರೆ.
Related Articles
Advertisement
ಸರಿಯಾದ ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಆಗಬೇಕು: ನಾಗೇಂದ್ರ ಪರ ವಕೀಲರುನಾಗೇಂದ್ರ ಪರ ವಕೀಲ ಶ್ಯಾಮ್ ಸುಂದರ್ ವಾದ ಮಂಡಿಸಿ, ನಾಗೇಂದ್ರ ಅವರಿಗೆ ವಕೀಲರೊಂದಿಗೆ ಚರ್ಚೆ ನಡೆಸಲು ಖಾಸಗಿ ಸ್ಥಳಾವಕಾಶ ವ್ಯವಸ್ಥೆ ಮಾಡಬೇಕು. ಈಗಾಗಲೇ ನಾಗೇಂದ್ರ ಅವರಿಗೆ ಸ್ಟಂಟ್ ಹಾಕಿಸಲಾಗಿದೆ. ಹೀಗಾಗಿ ಸರಿಯಾದ ರೀತಿಯಲ್ಲಿ ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕಾಗಿದೆ. ಸಾಕ್ಷಿ ದಾಖಲಿಸುವಾಗ, ಸಾಕ್ಷಿ ಕಲೆ ಹಾಕುವಾಗ ಒತ್ತಡ ಹಾಕುವಂತಿಲ್ಲ. ವಕೀಲರು ಇಡಿ ವಶದಲ್ಲಿರುವ ನಾಗೇಂದ್ರ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುವ ಸಂದರ್ಭದಲ್ಲಿ ಅಧಿಕಾರಿಗಳು ಪಕ್ಕದಲ್ಲಿ ಬಂದು ನಿಲ್ಲುತ್ತಾರೆ. ಏನೇ ಮಾತನಾಡಿದರೂ ನಮ್ಮ ಮುಂದೆಯೇ ಮಾತನಾಡಬೇಕೆಂದು ಹೇಳುತ್ತಾರೆ. ಇನ್ನು ಅರ್ಜಿದಾರರಿಂದ ವಶಕ್ಕೆ ಪಡಿಸಿಕೊಂಡಿರುವ ಮೊಬೈಲ್ ಅನ್ನು ಮಿರರ್ ಇಮೇಜ್ ಮಾಡುವುದಕ್ಕೆ ಅವಕಾಶ ನೀಡಬಾರದು. ತನಿಖಾಧಿಕಾರಿಗಳು ಕಾನೂನು ಉಲ್ಲಂ ಸುತ್ತಿದ್ದಾರೆ ಎಂದು ವಾದಿಸಿದರು. ಆಧಾರ ರಹಿತವಾಗಿ ಏನನ್ನೂ ಹೇಳಬಾರದು: ಇಡಿ ಪರ ವಕೀಲರು
ಇಡಿ ಪರ ವಕೀಲ ಪ್ರಸನ್ನ ಕುಮಾರ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಕಾನೂನಿನಲ್ಲಿ ಇರುವ ಅಂಶಗಳು ಹಾಗೂ ನ್ಯಾಯಾಲಯದ ಆದೇಶಗಳನ್ನು ಸ್ಪಷ್ಟವಾಗಿ ತಿಳಿಸಿ ವಾದ ಮಂಡಿಸಬೇಕೇ ಹೊರತು ಅರ್ಜಿದಾರರ ಪರ ವಕೀಲರು ಆಧಾರ ರಹಿತವಾಗಿ ಏನನ್ನೂ ಹೇಳಬಾರದು. ಆರೋಪಿ ವೀಡಿಯೋ ಗ್ರಾಫ್ಗೆ ರೆಡಿ ಇದ್ದರೂ ಮಾಡಲು ಅವಕಾಶ ಇಲ್ಲ. ಆರೋಪಿಗೆ ಲಾಭದ ರೀತಿಯಲ್ಲಿ ಪ್ರಾಸಿಕ್ಯೂಷನ್ ಕೆಲಸ ಮಾಡಲು ಸಾಧ್ಯವಿಲ್ಲ. ಪ್ರಕರಣದಲ್ಲಿ ಪರಿಣಾಮಕಾರಿ ವಿಚಾರಣೆ ನಡೆಸಬೇಕಾಗಿದೆ ಎಂದರು. ಇಡಿ ವಿಚಾರಣೆಗೆ ಹಾಜರಾಗದ ದದ್ದಲ್
ಬೆಂಗಳೂರು: ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವನಗೌಡ ದದ್ದಲ್ ಜಾರಿ ನಿರ್ದೇಶನಾಲಯ (ಇಡಿ) ಬಂಧನ ಭೀತಿಗೆ ಸಿಲುಕಿದ್ದು, ಇಡಿ ನೋಟಿಸ್ ಕೊಟ್ಟರೂ ಹಾಜರಾಗಿಲ್ಲ. ವಿಧಾನಸಭೆ ಅಧಿವೇಶನಕ್ಕೆ ಹಾಜರಾಗಿರುವ ದದ್ದಲ್ ಇಡಿ ಗಾಳಕ್ಕೆ ಸಿಗದಂತೆ ಭಾರೀ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಸದ್ಯ ಅಧಿವೇಶನವಿರುವ ಹಿನ್ನೆಲೆಯಲ್ಲಿ ಇಡಿ ವಿಚಾರಣೆಗೆ ಹಾಜರಾಗಿಲ್ಲ ಎಂದು ಕಾರಣ ಕೊಡುವ ಸಾಧ್ಯತೆಗಳಿವೆ. ಶೀಘ್ರದಲ್ಲೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ.