Advertisement

ಪ್ರತಿಯೊಬ್ಬರಿಗೂ ವಾಲ್ಮೀಕಿ ಮಹರ್ಷಿ ದಾರಿದೀಪ

05:10 PM Oct 10, 2022 | Team Udayavani |

ಮುಳಬಾಗಿಲು: ಆದಿಕವಿ ವಾಲ್ಮೀಕಿ ಮಹರ್ಷಿಗಳು ಸಮಾಜಕ್ಕೆ ನೀಡಿದ ಸಂದೇಶ ಆದರ್ಶಪ್ರಾಯವಾಗಿದೆ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್‌ ಆರ್‌.ಶೋಬಿತಾ ಹೇಳಿದರು.

Advertisement

ತಾಲೂಕು ನಾಡ ಹಬ್ಬಗಳ ಆಚರಣಾ ಸಮಿತಿಯಿಂದ ಭಾನುವಾರ ನಗರದ ತಾಲೂಕು ಆಡಳಿತ ಭವನದಲ್ಲಿ ನಡೆದ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿ, ಆದಿಕವಿ ಎಂದು ಪ್ರಸಿದ್ಧ ಪಡೆದು ಭಾರತದ ಸಾಂಸ್ಕೃತಿಕ ಪುರುಷ ಶ್ರೀರಾಮನನ್ನು ಸಮಾಜಕ್ಕೆ ಗುರುತಿಸಿದ್ದು ವಾಲ್ಮೀಕಿ ಮಹರ್ಷಿ. ಅವರು ರಚಿಸಿದ ರಾಮಾಯಣ ಹಿಂದುಗಳ ಪವಿತ್ರ ಗ್ರಂಥವಾಗಿ ಪೂಜಿಸಲ್ಪಡುತ್ತಿದೆ. ಅಂತಹ ಮಹಾನುಭಾವರ ಸಮುದಾಯದವರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರಬೇಕು ಎಂದು ತಿಳಿಸಿದರು.

ಸರ್ಕಾರದಿಂದ ಉತ್ತಮ ತೀರ್ಮಾನ: ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಜಯಪ್ರಕಾಶ್‌ ನಾಯ್ಕ ಮಾತನಾಡಿ, ವಾಲ್ಮೀಕಿ ಅನಕ್ಷರಸ್ಥ ಸಮಾಜಕ್ಕೆ ಜ್ಞಾನದ ನಿಧಿಯನ್ನು ನೀಡಿ, ಜಗತ್‌ ಪ್ರಸಿದ್ಧಿ ಪಡೆದಿದ್ದು, ಅವರ ತತ್ವ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ಅಲ್ಲದೆ, ಎಸ್ಟಿ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಿಸಲು ರಾಜ್ಯ ಸರ್ಕಾರ ನ್ಯಾ.ನಾಗಮೊಹನ್‌ ದಾಸ್‌ ವರದಿಯಂತೆ ಶೇ.3ರಷ್ಟು ಇದ್ದ ಮೀಸಲಾತಿ ಶೇ.7ಕ್ಕೆ ಏರಿಸಲು ಉತ್ತಮ ನಿರ್ಣಯ ತೆಗೆದುಕೊಳ್ಳುವ ಮೂಲಕ ಎಸ್‌.ಸಿ, ಎಸ್‌.ಟಿ ಸಮುದಾಯಕ್ಕೆ ಸಹಕಾರ ನೀಡಿದೆ ಎಂದು ಸರ್ಕಾರಕ್ಕೆ ಧನ್ಯವಾದ ತಿಳಿಸಿದರು.

ನಗರಸಭೆ ಅಧ್ಯಕ್ಷ ರಿಯಾಜ್‌ ಅಹ್ಮದ್‌, ವಾಲ್ಮೀಕಿ ಸಂಘದ ತಾಲೂಕು ಕಾರ್ಯದರ್ಶಿ ಬೈರಕೂರು ರಾಮಾಂಜಿ ಹಾಗೂ ಸಮುದಾಯದ ಮುಖಂಡರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next