Advertisement

Mudalagi: ತಹಶೀಲ್ದಾರ್ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ

03:50 PM Oct 28, 2023 | Team Udayavani |

ಮೂಡಲಗಿ: ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ ಕಾರ್ಯಾಲಯ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಗೋಕಾಕ ಹಾಗೂ ವಾಲ್ಮೀಕಿ ಸಮುದಾಯ ಆಶ್ರಯದಲ್ಲಿ ಆ.28ರ ಶನಿವಾರ ಮೂಡಲಗಿ ತಹಶೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿ ಉತ್ಸವ ಸಮಾರಂಭ ಜರಗಿತು.

Advertisement

ಸಮಾರಂಭದಲ್ಲಿ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಸಂಗಮೇಶ ಗುಜುಗೊಂಡ ಮಾತನಾಡಿ, ಜಾಗತಿಕ ಮಹಾಕಾವ್ಯ ರಾಮಾಯಣದ ಮೂಲಕ ಮಹರ್ಷಿ ವಾಲ್ಮೀಕಿ  ಪ್ರತಿಪಾದಿಸಿದ ಮೌಲ್ಯಗಳು ಎಂದಿಗೂ ಪ್ರಸ್ತುತ. ಅವು ಆದರ್ಶ ಸಮಾಜದ ಅನುಶಾಸನಗಳಾಗಿವೆ ಎಂದರು.

ರಾಮಾಯಣದ ಮೂಲಕ ವಾಲ್ಮೀಕಿ ಬಹುಶ್ರುತ ವ್ಯಕ್ತಿತ್ವ ಪರಿಚಯವಾಗುತ್ತಿದ್ದು, ಮಹಾಕವಿ, ಚಿಂತಕ, ಧಾರ್ಮಿಕ, ಶಿಕ್ಷಣ ತಜ್ಞ, ತತ್ವಜ್ಞಾನಿ, ರಾಜನೀತಿ ರೂಪಕ  ಇತಿಹಾಸಕಾರರಾಗಿ ನೀಡಿದ ಕೊಡುಗೆಗಳು ಅನನ್ಯವಾದವು. ರಾಮಾಯಣದ  ವಿಸ್ತೃತ ಅಧ್ಯಯನದ ಮೂಲಕ ಈ ಕವಿಯ ಸಮಗ್ರ  ವ್ಯಕ್ತಿತ್ವ ದರ್ಶನ  ಸಾಧ್ಯವಾಗುತ್ತದೆ. ಸಂಸ್ಕೃತಿ ಕಥನವಾಗಿರುವ ರಾಮಾಯಣದ ಓದು ಚಿಂತನೆ  ಸರ್ವಕಾಲಿನ  ಸಂಗತಿಗಳಾಗಿವೆ ಎಂದರು.

ಮೂಡಲಗಿ ತಹಶIಲ್ದಾರ್ ಶಿವಾನಂದ ಬಬಲಿ ಮತ್ತು ಬಿಇಒ ಅಜೀತ್ ಮನ್ನಿಕೇರಿ ಮಾನಾಡಿದರು.

Advertisement

ಸಮಾರಂಭದಲ್ಲಿ ತಾಲೂಕ್ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ  ಎಫ್.ಜಿ. ಚಿನ್ನನವರ, ಸಿಡಿಪಿಓ ಯಲ್ಲಪ್ಪ ಗದಾಡಿ, ಸಿಪಿಐ ಶ್ರೀಶೈಲ ಬ್ಯಾಕೂಡ, ಹೆಸ್ಕಾಂ ಅಧಿಕಾರಿ ಎಂ ಎಸ್ ನಾಗಣ್ಣವರ, ಪಿಎಸ್ಐ ಎಚ್ ವೈ ಬಾಲದಂಡಿ, ಮೂಡಲಗಿ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಸಿ ಬಿ ಪಾಟೀಲ್, ಪುರಸಭೆ ಸದಸ್ಯರಾದ ಸಂತೋಷ ಸೋನವಾಲಕರ, ಹನುಮಂತ ಗುಡ್ಲಮನಿ, ಶಿವಾನಂದ ಚಂಡಕಿ, ಅಬ್ದುಲಗಪಾರ ಡಾಂಗೆ, ಶಿವು ಸಣ್ಣಕ್ಕಿ, ಆನಂದ ಟಪಾಲದಾರ ಗಣ್ಯರಾದ ಆರ್‌.ಪಿ.ಸೋನವಾಲಕ, ಈರಪ್ಪ ಬನ್ನೂರು, ಸಿದ್ದು ಗಡ್ಡೆಕರ, ರಮೇಶ ಸಣ್ಣಕ್ಕಿ ಶಾಬಪ್ಪ ಸಣ್ಣಕ್ಕಿ, ವಾಲ್ಮೀಕಿ ಸಮಾಜ ಮುಖಂಡರಾದ ಆನಂದ ಟಪಾಲ್ದಾರ್ ಯಲ್ಲಾಲಿಂಗ ವಾಳದ, ಸಿ.ಬಿ ಪೂಜಾರಿ, ಮಲ್ಲಪ್ಪ ದಳವಾಯಿ, ಮಹಾಂತೇಶ ಭೈರನಟ್ಟಿ ಮತ್ತಿತರರು ಇದ್ದರು.

ಗೋಕಾಕ್ ಎನ್. ಎಸ್. ಎಫ್ ಶಾಲೆಯ ಮುಖ್ಯೋಪಾಧ್ಯಾಯ ಎಜಿ ಕೋಳಿ ನಿರೂಪಿಸಿದರು. ವಸತಿ ನಿಲಯದ ನಿಲಯ ಮೇಲ್ವಿಚಾರಕ ಭರತೇಶ್ ಬೋಳಿ ಸ್ವಾಗತಿಸಿದರು. ಗೋಕಾಕ್ ತಾಲೂಕ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ  ಅಧಿಕಾರಿ ಎಸ್ ಕೆ.ಆಸಂಗಿ ವಂದಿಸಿದರು.

ಇದೇ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು, ಅಧಿಕಾರಿಗಳನ್ನು ಚುನಾಯಿತ ಪ್ರತಿನಿಧಿಗಳನ್ನು ಸತ್ಕರಿಸಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next