Advertisement

ರಾಮರಾಜ್ಯದ ಪರಿಕಲ್ಪನೆ ಕೊಟ್ಟಿದ್ದು ವಾಲ್ಮೀಕಿ

12:29 PM Oct 06, 2017 | Team Udayavani |

ಧಾರವಾಡ: ಮಾನವೀಯ ಮೌಲ್ಯ ಹಾಗೂ ಆದರ್ಶಗಳನ್ನೊಳಗೊಂಡ ರಾಮ ರಾಜ್ಯದ ಕಲ್ಪನೆಯನ್ನು ಇಡೀ ಜಗತ್ತಿಗೆ ನೀಡಿದ ಶ್ರೇಯಸ್ಸು ಮಹರ್ಷಿ ವಾಲ್ಮೀಕಿಗೆ ಸಲ್ಲುತ್ತದೆ ಎಂದು ಜಿಲ್ಲಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ಹೇಳಿದರು. ನಗರದ ಕವಿಸಂನಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಜಗತ್ತಿನ ಎಲ್ಲ ದೇಶ ಮತ್ತು ರಾಜ್ಯಗಳಿಗೆ ಕಲ್ಯಾಣ ಮತ್ತು ರಾಮ ರಾಜ್ಯದ ಕಲ್ಪನೆ ದೊರೆತದ್ದು ಮಹರ್ಷಿ ವಾಲ್ಮೀಕಿ ವಿರಚಿತ ರಾಮಾಯಣ ಮಹಾಕಾವ್ಯದಿಂದ. ಮಹಾತ್ಮ ಗಾಂಧೀಜಿ ಯವರೂ ಕೂಡ ಈ ಕೃತಿಯಿಂದ ಸಾಕಷ್ಟು ಪ್ರಭಾವಿತರಾಗಿದ್ದರು. ಧಾರವಾಡದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲಿಯೇ ಸೂಕ್ತ ನಿವೇಶನ ಒದಗಿಸುವುದಾಗಿ ಹೇಳಿದರು. 

ಹುಬ್ಬಳ್ಳಿ ಧಾರವಾಡ ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ ಮಾತನಾಡಿ, ಸೀತಾ ಮಾತೆಗೆ ತನ್ನ ಆಶ್ರಮದಲ್ಲಿ ರಕ್ಷಣೆ ನೀಡಿ, ಲವ-ಕುಶರಿಗೆ ಬಿಲ್ವಿದ್ಯೆಯನ್ನು ಕಲಿಸಿಕೊಟ್ಟ ಮಹರ್ಷಿ ವಾಲ್ಮೀಕಿ ಸ್ತ್ರೀ ಪರವಾದ ಚಿಂತಕನಾಗಿದ್ದ. ಸಮುದಾಯದ ಮಹಿಳೆಯರು ಶಿಕ್ಷಿತರಾದರೆ ಸಮಾಜದ ಏಳ್ಗೆ ಸಾಧ್ಯ ಎಂದರು. ವಿದ್ಯಾರಣ್ಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ| ಶರಣಮ್ಮ ಎ.ಗೊರೇಬಾಳ ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಸಾಧನೆಗೈದ ಡಾ| ಪ್ರಕಾಶ ಬೆನ್ನೂರ, ಯಲ್ಲಪ್ಪ ಜಾರಿ, ಹನುಮಂತಪ್ಪ ಬಂಟನವರ್‌, ಬಸಮ್ಮ ಮಾಳಗಿ,ಪಾರ್ವತೆಮ್ಮ ಜೋಗನಾಯ್ಕರ್‌, ಚೇತನ್‌ ಡಿ.ಕರಡೋಣಿ ಹಾಗೂ ಎಸ್‌ ಎಸ್‌ಎಲ್‌ಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ಬಸವರಾಜ ಕೆ.ಚನ್ನೂರ ಸೇರಿದಂತೆ 10 ಜನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಡಿ ಬಿಡುಗಡೆ ಮಾಡಲಾಗಿರುವ ಸಹಾಯಧನದ ಪ್ರಮಾಣ ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಅಪರ ಜಿಲ್ಲಾ ಧಿಕಾರಿ ಇಬ್ರಾಹಿಂ ಮೈಗೂರ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ವೇದವ್ಯಾಸ ಕೌಲಗಿ,ಧಾರವಾಡ ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ, ಡಿವೈಎಸ್‌ಪಿ ಬಿ.ಪಿ. ಚಂದ್ರಶೇಖರ್‌, ಹಿರಿಯ ಸಾಹಿತಿ  ಮೋಹನ ನಾಗಮ್ಮನವರ,

Advertisement

ಮುಖಂಡರಾದ ಸುರೇಶಬಾಬು ತಳವಾರ, ವೈ.ಬಿ. ಕಾಟ್ಕರ್‌, ಲಕ್ಷ್ಮಣ ಬಕ್ಕಾಯಿ, ತಾ.ಪಂ. ಉಪಾಧ್ಯಕ್ಷ ಮುತ್ತಪ್ಪ ನಾಯ್ಕರ್‌, ಶಿವರಾಜ ಕಲ್ಲಿಗನೂರ,  ವೈ.ಎ. ಹುಲ್ಲಾರ್‌, ಡಿಡಿಪಿಐ ಎನ್‌. ಎಚ್‌. ನಾಗೂರ, ಡಿಎಚ್‌ಒ ಡಾ| ಆರ್‌. ಎಂ.ದೊಡ್ಡಮನಿ, ಬಿ.ಎಸ್‌. ದೊಡ್ಡಮನಿ, ಪುರುಷೋತ್ತಮ, ಮಂಜುನಾಥ ಡೊಳ್ಳಿನ, ಕಮಲಾ ತಳವಾರ ಇದ್ದರು. ನವೀನ್‌ ಶಿಂತ್ರೆ ಸ್ವಾಗತಿಸಿದರು. ವೈ.ಎ.ನಾಗಮ್ಮನವರ್‌ ನಿರೂಪಿಸಿದರು. ಮೀನಾಕ್ಷಿ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next