Advertisement

ಡಚ್‌ ಕ್ಲಬ್‌ ಪರ ಆಡುವ ವಾಲ್ಮೀಕಿ

11:26 PM Jul 24, 2019 | Sriram |

ಹೊಸದಿಲ್ಲಿ: ಭಾರತೀಯ ಹಾಕಿ ಆಟಗಾರರಾದ ದೇವಿಂದರ್‌ ವಾಲ್ಮೀಕಿ ಮತ್ತು ಹರ್ಜೀತ್‌ ಸಿಂಗ್‌ ಅವರು 2019-20ರ ಋತುವಿನಲ್ಲಿ ಡಚ್‌ ಕ್ಲಬ್‌ ಎಚ್‌ಜಿಸಿ ಪರ ಆಡುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

Advertisement

ಮಿಡ್‌ ಫೀಲ್ಡರ್‌ಗಳಾಗಿರುವ ವಾಲ್ಮೀಕಿ ಮತ್ತು ಹರ್ಜೀತ್‌ ಸದ್ಯ ಭಾರತೀಯ ತಂಡದಲ್ಲಿ ಇಲ್ಲ. ಹೀಗಾಗಿ ಅವರಿಬ್ಬರು ಶೀಘ್ರ ಎಚ್‌ಜಿಸಿ ಕ್ಲಬ್‌ ಸೇರಿಕೊಳ್ಳಲಿದ್ದಾರೆ ಮತ್ತು ಮುಂಬರುವ ಯುರೋ ಹಾಕಿ ಲೀಗ್‌ ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ. ಎಚ್‌ಜಿಸಿ ಕ್ಲಬ್‌ 2011ರಲ್ಲಿ ಪ್ರಶಸ್ತಿ ಗೆದ್ದ ಬಳಿಕ ಇದೇ ಮೊದಲ ಸಲ ಇಎಚ್‌ಎಲ್‌ನಲ್ಲಿ ಆಡುತ್ತಿದೆ.

ಅ. 4ರಂದು ಬಾರ್ಸಿಲೋನಾದಲ್ಲಿ ನಡೆಯುವ ಪಂದ್ಯದಲ್ಲಿ ಆಡುವ ಮೂಲಕ ವಾಲ್ಮೀಕಿ, ಹರ್ಜೀತ್‌, ಡಚ್‌ ಕ್ಲಬ್‌ಗ ಪದಾರ್ಪಣೆಗೈಯಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next