Advertisement
ಭಾನುವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕುರಿತಂತೆ ಚುನಾವಣಾ ಆಯೋಗಕ್ಕೂ ಮನವಿ ಸಲ್ಲಿಸಲಿದ್ದೇವೆ. ನಿಗಮದ ಹಗರಣದಲ್ಲಿ ಭಾಗಿಯಾದ ನಾಗೇಂದ್ರರನ್ನು ಬಂಧಿಸಿದ ಜಾರಿ ನಿರ್ದೇಶನಾಲಯವು (ಇ.ಡಿ) ನ್ಯಾಯಾಂಗದ ಮುಂದೆ ರಿಮಾಂಡ್ ಅರ್ಜಿ ಹಾಜರುಪಡಿಸಿದೆ. ಪರಿಶಿಷ್ಟ ವರ್ಗದ ಅಭಿವೃದ್ಧಿ ಮೀಸಲಿಟ್ಟಿದ್ದ ಹಣ ದುರ್ಬಳಕೆ ಆಗಿದೆ. ಅದರಲ್ಲೂ 20.19 ಕೋಟಿ ರೂ. ಚುನಾವಣೆಗೆ ಬಳಕೆಯಾಗಿದೆ. ಅಕ್ರಮದಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂಬ ಮಾಹಿತಿಗಳು ಉಲ್ಲೇಖವಾಗಿವೆ.
ರಾಜ್ಯ ಬಿಜೆಪಿ ಎಸ್‌ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು ಮಾತನಾಡಿ, ಸಂಸದ ಇ.ತುಕಾರಾಂ ಅವರಿಗೆ ಸಮಾಜದ ಬಗ್ಗೆ ಅಭಿಮಾನ ಮತ್ತು ಕಾಳಜಿ ಇದ್ದರೆ ಕೂಡಲೇ ರಾಜೀನಾಮೆ ಕೊಡಬೇಕು. ರಾಜೀನಾಮೆ ಕೊಡದೆ ಇದ್ದಲ್ಲಿ ಎಸ್‌ಟಿ ಮೋರ್ಚಾ ಮತ್ತು ಸಮಾಜದ ವತಿಯಿಂದ ನಿರಂತರ ಹೋರಾಟ ಸಂಘಟಿಸಲಾಗುವುದು ಎಂದು ಎಚ್ಚರಿಸಿದರು.
Related Articles
Advertisement
ಎಸ್‌ಟಿ ಮೋರ್ಚಾ ವತಿಯಿಂದ ಈ ಅಕ್ರಮದ ವಿಚಾರವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ. ನಿಗಮದ ಅಧ್ಯಕ್ಷ ಬಸವರಾಜ ದದ್ದಲ್ ನಾನೇನೂ ತಪ್ಪು ಮಾಡಿಲ್ಲ ಎಂದು ಸುಳ್ಳು ಹೇಳುತ್ತಿದ್ದರು. ಈಗ ಅವರು ಎಸ್‌ಐಟಿ ಮುಂದೆ ಶರಣಾಗಿದ್ದಾರೆ. ಆದರೂ, ಸಿದ್ದರಾಮಯ್ಯನವರು, ಡಿ.ಕೆ.ಶಿವಕುಮಾರ್ ಅವರು ದದ್ದಲ್ ಅವರ ರಾಜೀನಾಮೆ ಪಡೆದಿಲ್ಲ. ಪಕ್ಷಕ್ಕೆ ಮುಜುಗರ ಆಗುವುದೆಂದು ರಾಜೀನಾಮೆ ಪಡೆದಿಲ್ಲ ಎಂದು ಟೀಕಿಸಿದರು.
ಇದೊಂದು ಭಂಡ ಸರ್ಕಾರ. ಇವರು ಭ್ರಷ್ಟ ಮುಖ್ಯಮಂತ್ರಿ. ದದ್ದಲ್ ಅವರ ಕುಟುಂಬ ಕೋಟಿಗಟ್ಟಲೆ ಹಣದ ಅಕ್ರಮ ಆಸ್ತಿ ಖರೀದಿ ಮಾಡಿದೆ. ಮುಖ್ಯಮಂತ್ರಿಗಳು ದದ್ದಲ್ ರಾಜೀನಾಮೆ ರಾಜೀನಾಮೆ ಪಡೆಯಬೇಕಲ್ಲದೆ, ತಾವು ಕೂಡ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.