Advertisement
ಇದು ಕೇವಲ ವದಂತಿಯಷ್ಟೇ ಎಂದು ಜಿಲ್ಲೆಯ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಸ್.ಆರ್. ರವೀಂದ್ರನಾಥ್ ಸ್ಪಷ್ಟಪಡಿಸಿದ್ದಾರೆ. ತಾಲೂಕಿನ ರಾಮಸಮುದ್ರ ಕೆರೆಯ ಹೊರ ಹರಿವಿನ ಮೂಲಕ ಚಿತ್ರಾವತಿ ನದಿಗೆ ಎಚ್.ಎನ್.ವ್ಯಾಲಿ ಸಂಸ್ಕರಿತ ನೀರು ಸೇರಿದೆ ಎಂಬ ಕುರಿತು ಇತ್ತೀಚಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ವಿಷಯ ಹರಿದಾಡುತ್ತಿದ್ದು, ಈ ವದಂತಿಗಳ ಕುರಿತು ಅವರು ಈ ಸ್ಪಷ್ಟನೆ ನೀಡಿದ್ದಾರೆ.
Related Articles
Advertisement
ವ್ಯಾಲಿ ನೀರು ಹರಿದಿಲ್ಲ: ಪ್ರಸ್ತುತ ಈ ಕೆರೆಯ ಕೋಡಿ ಹರಿದು ಹೆಚ್ಚುವರಿ ನೀರು ಚಿತ್ರಾವತಿ ನದಿಗೆ ಹರಿಯುತ್ತಿದೆ. ರಾಮಸಮುದ್ರ ಕೆರೆಯು ಎಚ್.ಎನ್. ವ್ಯಾಲಿ ಯೋಜನೆಯಡಿ ಸೇರಿದೆಯಾದರೂ ಈವರೆಗೆ ಯೋಜನೆಯ ನೀರು ಸದರಿ ಕೆರೆಗೆ ಹರಿದಿಲ್ಲ, ಈ ಬಗ್ಗೆ ಸಾರ್ವಜನಿಕರಲ್ಲಿ ಯಾವುದೇ ರೀತಿಯ ಆತಂಕ ಬೇಡ ಎಂದು ತಿಳಿಸಿದರು.
ಅಕ್ಟೋಬರ್‌ನಲ್ಲೇ ಸ್ಥಗಿತ: ಎಚ್.ಎನ್ ವ್ಯಾಲಿ ಯೋಜನೆಯು ನಿಯಂತ್ರಿತ ಪಂಪಿಂಗ್ ವ್ಯವಸ್ಥೆಯಾಗಿರುತ್ತದೆ. 2021ರ ಅಕ್ಟೋಬರ್ ತಿಂಗಳಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಧಿಕ ಮಳೆಯಾಗಿದ್ದರಿಂದ ಎಚ್.ಎನ್. ವ್ಯಾಲಿ ಯೋಜನೆಯಡಿ ಬೆಂಗಳೂರಿನಿಂದ ನೀರು ಪಂಪಿಂಗ್ ಮಾಡುವುದನ್ನು ಅಕ್ಟೋಬರ್ ತಿಂಗಳಿನಲ್ಲಿಯೇ ಸ್ಥಗಿತಗೊಳಿಸಲಾಗಿದೆ. ಕಂದವಾರ ಕೆರೆಯಿಂದ ಕ್ಲಸ್ಟರ್ 9ರಲ್ಲಿ ಬರುವ ರಾಮಸಮುದ್ರ ಕೆರೆಯೂ ಒಳಗೊಂಡಂತೆ ಎಲ್ಲಾ ಕೆರೆಗಳಿಗೂ ನೀರು ಹರಿಸುವುದನ್ನು ಸಹ ಕಳೆದ ಅಕ್ಟೋಬರ್ ತಿಂಗಳಿನಲ್ಲಿಯೇ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.
ಆದ್ದರಿಂದ ಎಚ್-ಎನ್ ವ್ಯಾಲಿ ಯೋಜನೆಯಿಂದ ರಾಮಸಮುದ್ರ ಕೆರೆ ಮತ್ತು ಆ ಮೂಲಕ ಚಿತ್ರಾವತಿ ನದಿಗೆ ಈವರೆಗೆ ಯೋಜನೆಯ ನೀರು ಹರಿದಿಲ್ಲ. ಈ ಬಗ್ಗೆ ಹರಿದಾಡುತ್ತಿರುವ ವದಂತಿಗಳಂತೆ ಹೆಬ್ಟಾಳ -ನಾಗವಾರ ವ್ಯಾಲಿ ಯೋಜನೆಯ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ ನೀರು ರಾಮಸಮುದ್ರ ಕೆರೆ ಮತ್ತು ಚಿತ್ರಾವತಿ ನದಿಗೆ ಸೇರಿರುವುದಿಲ್ಲ. ಈ ವದಂತಿಗಳು ಸಂಪೂರ್ಣ ನಿರಾಧಾರವಾಗಿರುತ್ತವೆ ಎಂದು ಸ್ಪಷ್ಟಪಡಿಸಿದರು.
ನಿರಂತರ ಪರೀಕ್ಷೆಗೆ ಒಳಪಡಿಸುತ್ತೇವೆ-
ಬಿ.ಡಬ್ಲೂ.ಎಸ್.ಎಸ್.ಬಿ ಅವರು ಎಚ್.ಎನ್ ವ್ಯಾಲಿ ಯೋಜನೆಯಡಿ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ ನೀರನ್ನು ನೀಡುತ್ತಿದ್ದು, ಈ ನೀರನ್ನು ನಿರಂತರ ಹಾಗೂ ನಿಯಮಿತವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಕುರಿತ ಎಲ್ಲಾ ಫಲಿತಾಂಶದ ವರದಿಗಳು ಸರ್ಕಾರವು ನಿಗದಿ ಪಡಿಸಿರುವ ಮಾನದಂಡಗಳಪರಿಮಿತಿಯಲ್ಲಿರುತ್ತವೆ. ಹಾಗಾಗಿ ಸಾರ್ವಜನಿಕರುಈ ಕುರಿತು ಯಾವುದೇ ವದಂತಿಗಳಿಗೆಕಿವಿಗೊಡಬಾರದು ಹಾಗೂ ಆತಂಕ ಪಡಬಾರದುಎಂದು ಮನವಿ ಮಾಡಿದ್ದಾರೆ.